IPL 2024: ಶಹಬಾಝ್ ಅಹ್ಮದ್ರನ್ನು SRH ತಂಡಕ್ಕೆ ನೀಡಿದ್ದೇ RCB
IPL 2024: ಐಪಿಎಲ್ನ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಎಸ್ಆರ್ಹೆಚ್ ತಂಡ ಜಯ ಸಾಧಿಸಿದೆ. ಚೆನ್ನೈನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಎಸ್ಆರ್ಹೆಚ್ ತಂಡವು 20 ಓವರ್ಗಳಲ್ಲಿ 175 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು 7 ವಿಕೆಟ್ ಕಳೆದುಕೊಂಡು 139 ರನ್ಗಳಿಸಲಷ್ಟೇ ಶಕ್ತರಾದರು. ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿದ ಶಹಬಾಝ್ ಅಹ್ಮದ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
1 / 7
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ನ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೋಲುಣಿಸಿ ಸನ್ರೈಸರ್ಸ್ ಹೈದರಾಬಾದ್ ತಂಡ ಫೈನಲ್ಗೆ ಪ್ರವೇಶಿಸಿದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಎಸ್ಆರ್ಹೆಚ್ ತಂಡ 36 ರನ್ಗಳ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿಗಳಲ್ಲಿ ಶಹಬಾಝ್ ಅಹ್ಮದ್ ಕೂಡ ಒಬ್ಬರು.
2 / 7
ಏಕೆಂದರೆ ಈ ಪಂದ್ಯದಲ್ಲಿ ಶಹಬಾಝ್ ಅಹ್ಮದ್ 4 ಓವರ್ಗಳಲ್ಲಿ ನೀಡಿದ್ದು ಕೇವಲ 23 ರನ್ಗಳು ಮಾತ್ರ. ಅಲ್ಲದೆ ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್ ಹಾಗೂ ರವಿಚಂದ್ರನ್ ಅಶ್ವಿನ್ ಅವರ ವಿಕೆಟ್ ಕಬಳಿಸಿ ಎಸ್ಆರ್ಹೆಚ್ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಇದಕ್ಕೂ ಮುನ್ನ ಬ್ಯಾಟಿಂಗ್ನಲ್ಲೂ ಶಹಬಾಝ್ ಅಹ್ಮದ್ 18 ರನ್ಗಳ ಕೊಡುಗೆ ನೀಡಿದ್ದರು.
3 / 7
ಕುತೂಹಲಕಾರಿ ವಿಷಯ ಎಂದರೆ, ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಶಹಬಾಝ್ ಅಹ್ಮದ್ ಅವರನ್ನು ನೀಡಿದ್ದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ. ಅಂದರೆ ಈ ಬಾರಿಯ ಐಪಿಎಲ್ ಹರಾಜಿಗೂ ಮುನ್ನ ಆರ್ಸಿಬಿ ಮತ್ತು ಎಸ್ಆರ್ಹೆಚ್ ಆಟಗಾರರನ್ನು ಪರಸ್ಪರ ಟ್ರೇಡ್ ಮಾಡಿಕೊಂಡಿತ್ತು.
4 / 7
ಅದರಂತೆ ಶಹಬಾಝ್ ಅಹ್ಮದ್ ಅವರನ್ನು ಎಸ್ಆರ್ಹೆಚ್ಗೆ ನೀಡಿ ಆರ್ಸಿಬಿ ಫ್ರಾಂಚೈಸಿ ಎಸ್ಆರ್ಹೆಚ್ ತಂಡದಲ್ಲಿದ್ದ ಮಯಾಂಕ್ ಡಾಗರ್ ಅವರನ್ನು ಖರೀದಿಸಿತು. ಈ ಒಂದು ಟ್ರೇಡ್ ಸನ್ರೈಸರ್ಸ್ ಹೈದರಾಬಾದ್ ತಂಡದ ಪಾಲಿಗೆ ಪ್ಲಸ್ ಪಾಯಿಂಟ್ ಆಗಿರುವುದು ವಿಶೇಷ.
5 / 7
ಏಕೆಂದರೆ ಈ ಬಾರಿಯ ಐಪಿಎಲ್ನಲ್ಲಿ ಶಹಬಾಝ್ ಅಹ್ಮದ್ ಉತ್ತಮ ಪ್ರದರ್ಶನವನ್ನೇ ನೀಡಿದ್ದಾರೆ. ಎಸ್ಆರ್ಹೆಚ್ ಪರ ಬಹುತೇಕ ಪಂದ್ಯಗಳಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದಿರುವ ಶಹಬಾಝ್ ಒಟ್ಟು 207 ರನ್ ಕಲೆಹಾಕಿದ್ದಾರೆ. ಹಾಗೆಯೇ 6 ವಿಕೆಟ್ ಕಬಳಿಸಿ ತಂಡ ಗೆಲುವಿನಲ್ಲಿ ಕೊಡುಗೆ ನೀಡಿದ್ದಾರೆ.
6 / 7
ಅದೇ ಆರ್ಸಿಬಿ ತಂಡವು ಎಸ್ಆರ್ಹೆಚ್ ತಂಡದಿಂದ ಆಯ್ಕೆ ಮಾಡಿದ ಮಯಾಂಕ್ ಡಾಗರ್ ಅವರ ಕೊಡುಗೆ ಕೇವಲ 1 ವಿಕೆಟ್ ಮಾತ್ರ. ಅಂದರೆ 5 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಮಯಾಂಕ್ ಪಡೆದಿದ್ದು ಕೇವಲ ಒಂದು ವಿಕೆಟ್ ಅಷ್ಟೇ.
7 / 7
ಅಂದರೆ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯ ಅತ್ಯುತ್ತಮ ಟ್ರೇಡ್ ಇದೀಗ SRH ತಂಡವನ್ನು ಫೈನಲ್ಗೆ ಪ್ರವೇಶಿಸುವಂತೆ ಮಾಡಿದೆ. ಅದೇ RCB ಟ್ರೇಡ್ ಮಾಡಿದ ಆಟಗಾರ ಕಳಪೆ ಪ್ರದರ್ಶನದಿಂದಾಗಿ 10 ಪಂದ್ಯಗಳಲ್ಲಿ ಬೆಂಚ್ ಕಾದಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.
Published On - 10:52 am, Sat, 25 May 24