RCB vs CSK: 5 ಓವರ್ಗಳ ಪಂದ್ಯ ನಡೆದರೆ, RCB ಎಷ್ಟು ಎಸೆತಗಳಲ್ಲಿ ಗೆಲ್ಲಬೇಕು? ಇಲ್ಲಿದೆ ಮಾಹಿತಿ
IPL 2024 RCB vs CSK: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2024) 68ನೇ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದರೆ ಮಾತ್ರ ಆರ್ಸಿಬಿ ತಂಡವು ಸಿಎಸ್ಕೆ ತಂಡವನ್ನು ನೆಟ್ ರನ್ ರೇಟ್ನಲ್ಲಿ ಹಿಂದಿಕ್ಕಬಹುದು. ಸಿಎಸ್ಕೆ ತಂಡದ ಪ್ರಸ್ತುತ ನೆಟ್ ರನ್ ರೇಟ್ +0.528 ಇದ್ದರೆ, ಆರ್ಸಿಬಿ ತಂಡದ ನೆಟ್ ರನ್ ರೇಟ್ +0.387 ಇದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಉತ್ತಮ ಗೆಲುವು ಸಾಧಿಸುವ ಮೂಲಕ ಸಿಎಸ್ಕೆ ತಂಡವನ್ನು ನೆಟ್ ರನ್ ರೇಟ್ನಲ್ಲಿ ಹಿಂದಿಕ್ಕಬೇಕಿದೆ.
1 / 7
ಇಂಡಿಯನ್ ಪ್ರೀಮಿಯರ್ ಲೀಗ್ನ (IPL 2024) 68ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಗಳು ಮುಖಾಮುಖಿಯಾಗಲಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ ಪಂದ್ಯ.
2 / 7
ಏಕೆಂದರೆ ಈ ಮ್ಯಾಚ್ನಲ್ಲಿ ಗೆಲ್ಲುವ ತಂಡ ಪ್ಲೇಆಫ್ಗೆ ಎಂಟ್ರಿ ಕೊಡಲಿದೆ. ಆದರೆ ಇಲ್ಲಿ ಗೆಲುವಿನೊಂದಿಗೆ ಆರ್ಸಿಬಿ ತಂಡ ನೆಟ್ ರನ್ ರೇಟ್ ಅನ್ನು ಕೂಡ ಹೆಚ್ಚಿಸಿಕೊಳ್ಳಬೇಕಿದೆ. ಹೀಗಾಗಿ ಈ ಪಂದ್ಯದಲ್ಲಿ ಫಾಫ್ ಪಡೆ ನೆಟ್ ರನ್ ರೇಟ್ ಟಾರ್ಗೆಟ್ನೊಂದಿಗೆ ಕಣಕ್ಕಿಳಿಯಲಿದೆ.
3 / 7
ಒಂದು ವೇಳೆ ಈ ಪಂದ್ಯದಲ್ಲಿ ಆರ್ಸಿಬಿ ಮೊದಲು ಬ್ಯಾಟ್ ಮಾಡಿದರೆ ಸಿಎಸ್ಕೆ ತಂಡವನ್ನು ಕನಿಷ್ಠ 18 ರನ್ಗಳಿಂದ ಸೋಲಿಸಬೇಕು. ಉದಾಹರಣೆಗೆ ಆರ್ಸಿಬಿ 200 ರನ್ ಕಲೆಹಾಕಿದರೆ, ಸಿಎಸ್ಕೆ ತಂಡವನ್ನು 182 ರನ್ಗಳಿಗೆ ನಿಯಂತ್ರಿಸಬೇಕು. ಇಲ್ಲಿ ಆರ್ಸಿಬಿ ತಂಡ ಎಷ್ಟೇ ರನ್ಗಳಿಸಿದರೂ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕನಿಷ್ಠ 18 ರನ್ಗಳ ಅಂತರದಿಂದ ಸೋಲಿಸಿದರೆ ಸಾಕು. ಈ ಮೂಲಕ ಸಿಎಸ್ಕೆ ತಂಡವನ್ನು ನೆಟ್ ರನ್ ರೇಟ್ನಲ್ಲಿ ಹಿಂದಿಕ್ಕಿ ಪ್ಲೇಆಫ್ಗೆ ಪ್ರವೇಶಿಸಬಹುದು.
4 / 7
ಒಂದು ವೇಳೆ ಆರ್ಸಿಬಿ ತಂಡವು ಚೇಸಿಂಗ್ ಮಾಡುವುದಾದರೆ ಈ ಲೆಕ್ಕಾಚಾರದಲ್ಲಿ ಕೆಲ ಬದಲಾವಣೆ ಕಂಡು ಬರಲಿದೆ. ಉದಾಹರಣೆಗೆ ಸಿಎಸ್ಕೆ ತಂಡವು 201 ರನ್ಗಳ ಟಾರ್ಗೆಟ್ ನೀಡಿದರೆ, ಆರ್ಸಿಬಿ ಅದನ್ನು 18.1 ಓವರ್ಗಳಲ್ಲಿ ಚೇಸ್ ಮಾಡಬೇಕು. ಅಂದರೆ ಕನಿಷ್ಠ 11 ಎಸೆತಗಳನ್ನು ಬಾಕಿಯಿರಿಸಿ ಗೆದ್ದರೆ ಮಾತ್ರ ಆರ್ಸಿಬಿ ತಂಡವು ನೆಟ್ ರನ್ ರೇಟ್ನಲ್ಲಿ ಸಿಎಸ್ಕೆ ತಂಡವನ್ನು ಹಿಂದಿಕ್ಕಬಹುದು.
5 / 7
ಇತ್ತ ಮೇ 18 ರಂದು ಬೆಂಗಳೂರಿನಾದ್ಯಂತ ಮಳೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಮಳೆಯಿಂದಾಗಿ ಓವರ್ಗಳ ಕಡಿತದೊಂದಿಗೆ ಪಂದ್ಯ ನಡೆದರೂ 11 ಎಸೆತಗಳ ಲೆಕ್ಕಾಚಾರ ಇರಲಿದೆ. ಅಂದರೆ 15 ಓವರ್ಗಳ ಪಂದ್ಯ ನಡೆದರೆ ಆರ್ಸಿಬಿ 13.1 ಓವರ್ಗಳಲ್ಲಿ ಚೇಸ್ ಮಾಡಬೇಕಾಗುತ್ತದೆ. ಹಾಗೆಯೇ 10 ಓವರ್ಗಳ ಮ್ಯಾಚ್ ನಡೆದರೆ ಆರ್ಸಿಬಿ 8.1 ಓವರ್ಗಳಲ್ಲಿ ಗುರಿ ಮುಟ್ಟಬೇಕು.
6 / 7
ಒಂದು ವೇಳೆ ಈ ಪಂದ್ಯಕ್ಕೆ ನಿರಂತರ ಮಳೆ ಅಡಚಣೆಯನ್ನುಂಟು ಮಾಡಿದರೆ ಫಲಿತಾಂಶ ನಿರ್ಧರಿಸಲು ಕನಿಷ್ಠ 5 ಓವರ್ಗಳ ಪಂದ್ಯವನ್ನು ಆಡಿಸಬೇಕಾಗುತ್ತದೆ. ಹೀಗೆ 5 ಓವರ್ಗಳ ಪಂದ್ಯ ನಡೆದು ಸಿಎಸ್ಕೆ ತಂಡವು ಮೊದಲು ಬ್ಯಾಟ್ ಮಾಡಿ 85 ರನ್ಗಳ ಗುರಿ ನೀಡಿದರೆ, ಆರ್ಸಿಬಿ ತಂಡವು ಅದನ್ನು 3.1 ಓವರ್ಗಳಲ್ಲಿ ಚೇಸ್ ಮಾಡುವುದು ಅನಿವಾರ್ಯ.
7 / 7
ಅಂದರೆ 5 ಓವರ್ಗಳ ಪಂದ್ಯ ನಡೆದರೆ ಟಾರ್ಗೆಟ್ ಎಷ್ಟೇ ಇದ್ದರೂ ಆರ್ಸಿಬಿ ತಂಡವು 3.1 ಓವರ್ಗಳಲ್ಲಿ ಚೇಸ್ ಮಾಡಲೇಬೇಕು. ಇಲ್ಲದಿದ್ದರೆ ಗೆದ್ದರೂ ಆರ್ಸಿಬಿ ತಂಡವು ಅಂಕ ಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಲಿದೆ. ಅತ್ತ ಸೋತರೂ ಸಿಎಸ್ಕೆ ತಂಡವು 4ನೇ ಸ್ಥಾನ ಅಲಂಕರಿಸುವ ಮೂಲಕ ಪ್ಲೇಆಫ್ಗೆ ಅರ್ಹತೆ ಪಡೆಯಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಆರ್ಸಿಬಿ ಗುರಿಯ ಜೊತೆ ಸಿಎಸ್ಕೆ ತಂಡದ ನೆಟ್ ರನ್ ರೇಟ್ ಅನ್ನು ಕೂಡ ಟಾರ್ಗೆಟ್ ಮಾಡಲಿದೆ.
Published On - 8:06 am, Sat, 18 May 24