IPL 2024: RCB ಗೆದ್ದರೂ CSKಗೆ ಪ್ಲೇಆಫ್ ಚಾನ್ಸ್​..!

IPL 2024 RCB vs CSK: ಐಪಿಎಲ್​ನ 68ನೇ ಪಂದ್ಯದಲ್ಲಿ ಆರ್​ಸಿಬಿ ವಿರುದ್ಧ ಸಿಎಸ್​ಕೆ ಸೋತರೂ ಪ್ಲೇಆಫ್​ಗೆ ಪ್ರವೇಶಿಸಬಹುದು. ಇದಕ್ಕಾಗಿ ಸಿಎಸ್​ಕೆ ತಂಡವು ಆರ್​ಸಿಬಿ ತಂಡವನ್ನು 10 ಎಸೆತಗಳು ಬಾಕಿಯಿರುವಂತೆ ಗೆಲ್ಲುವಂತೆ ಮಾಡಿದರೆ ಸಾಕು. ಅಥವಾ 17 ರನ್​ಗಳಿಗಿಂತ ಕಡಿಮೆ ಅಂತರದಿಂದ ಸಿಎಸ್​ಕೆ ತಂಡ ಸೋತರೂ ಆರ್​ಸಿಬಿ ತಂಡ ಪ್ಲೇಆಫ್​ನಿಂದ ಹೊರಬೀಳಲಿದೆ.

TV9 Web
| Updated By: ಝಾಹಿರ್ ಯೂಸುಫ್

Updated on: May 18, 2024 | 10:09 AM

ಐಪಿಎಲ್​ನ (IPL 2024) ರಣರೋಚಕ ಹೋರಾಟಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು (ಮೇ 18) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ನಿರ್ಣಾಯಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಪ್ಲೇಆಫ್​ಗೆ ಪ್ರವೇಶಿಸಲಿದೆ.

1 / 5
ಒಂದು ವೇಳೆ ಈ ಪಂದ್ಯದಲ್ಲಿ ಸೋತರೂ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಪ್ಲೇಆಫ್​ಗೆ ಎಂಟ್ರಿ ಕೊಡಬಹುದು. ಏಕೆಂದರೆ ಸಿಎಸ್​ಕೆ ತಂಡವು +0.528 ನೆಟ್ ರನ್ ರೇಟ್​ನೊಂದಿಗೆ ಒಟ್ಟು 14 ಅಂಕಗಳನ್ನು ಹೊಂದಿದೆ. ಇದೇ ವೇಳೆ ಆರ್​ಸಿಬಿ ತಂಡದ ನೆಟ್ ರನ್ ರೇಟ್ +0.387 ಇದ್ದು, 12 ಅಂಕಗಳನ್ನು ಹೊಂದಿದೆ.

2 / 5
ಅಂದರೆ ಇಲ್ಲಿ ಆರ್​ಸಿಬಿ ತಂಡವು ಪ್ಲೇಆಫ್ ಪ್ರವೇಶಿಸಬೇಕಿದ್ದರೆ 14 ಅಂಕಗಳನ್ನು ಕಲೆಹಾಕಿದರೆ ಮಾತ್ರ ಸಾಲುವುದಿಲ್ಲ. ಬದಲಾಗಿ ಸಿಎಸ್​ಕೆ ತಂಡವನ್ನು ನೆಟ್ ರನ್​ ರೇಟ್​ನಲ್ಲೂ ಹಿಂದಿಕ್ಕಬೇಕಿದೆ. ಇದಕ್ಕಾಗಿ ಸಿಎಸ್​ಕೆ ನೀಡುವ ಗುರಿಯನ್ನು 11 ಎಸೆತಗಳು ಬಾಕಿಯಿರುವಂತೆ ಚೇಸ್ ಮಾಡಬೇಕು. ಇಲ್ಲ ಕನಿಷ್ಠ 18 ರನ್​ಗಳಿಂದ ಭರ್ಜರಿ ಜಯ ಸಾಧಿಸಬೇಕು. ಅಂದರೆ ಮಾತ್ರ ಆರ್​ಸಿಬಿ 14 ಅಂಕಗಳೊಂದಿಗೆ ಸಿಎಸ್​ಕೆ ತಂಡವನ್ನು ನೆಟ್ ರನ್ ರೇಟ್​ನಲ್ಲಿ ಹಿಂದಿಕ್ಕಿ ಪ್ಲೇಆಫ್​ಗೆ ಪ್ರವೇಶಿಸಬಹುದು.

3 / 5
ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಆರ್​ಸಿಬಿ ತಂಡವನ್ನು 10 ಎಸೆತಗಳು ಬಾಕಿಯಿರುವಂತೆ ಗೆಲ್ಲುವಂತೆ ಮಾಡಿದರೂ ಪ್ಲೇಆಫ್​ಗೆ ಅವಕಾಶ ಪಡೆಯಲಿದೆ. ಹಾಗೆಯೇ 18 ಕ್ಕಿಂತ ಕಡಿಮೆ ರನ್​ಗಳ ಅಂತರದಿಂದ ಸಿಎಸ್​ಕೆ ತಂಡ ಸೋತರೂ ಪ್ಲೇಆಫ್​ಗೆ ಪ್ರವೇಶಿಸಲಿದೆ. ಅಂದರೆ ಈ ಪಂದ್ಯದಲ್ಲಿ ಸಿಎಸ್​ಕೆ ತಂಡ ಸೋತರೂ ಪ್ಲೇಆಫ್​ಗೆ ಪ್ರವೇಶಿಸುವ ಅವಕಾಶ ಹೊಂದಿರಲಿದೆ.

4 / 5
ಹೀಗಾಗಿ ಆರ್​ಸಿಬಿ ತಂಡವು ಪ್ಲೇಆಫ್ ಪ್ರವೇಶಿಸಬೇಕಿದ್ದರೆ 11 ಎಸೆತಗಳು ಬಾಕಿ ಇರುವಂತೆ ಚೇಸ್ ಮಾಡಬೇಕು. ಅಥವಾ ಕನಿಷ್ಠ 18 ರನ್​ಗಳಿಗಿಂತ ಅಂತರದಿಂದ ಗೆಲ್ಲಬೇಕು. ಈವರಡೂ ಸಾಧ್ಯವಾಗದೇ ಆರ್​ಸಿಬಿ ತಂಡ ಗೆದ್ದರೂ, ಸಿಎಸ್​ಕೆ ತಂಡ ಪ್ಲೇಆಫ್​​ಗೆ ಎಂಟ್ರಿ ಕೊಡುವುದು ಖಚಿತ.

5 / 5
Follow us