AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: RCB ಟಾಸ್ ಗೆಲ್ಲೋದು ಅನಿವಾರ್ಯ: ಯಾಕೆ ಗೊತ್ತಾ?

IPL 2024: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು (ಮೇ 18) ನಡೆಯಲಿರುವ ಪಂದ್ಯದಲ್ಲಿ ಆರ್​ಸಿಬಿ ಪಾಲಿಗೆ ಟಾಸ್ ಅದೃಷ್ಟ ಕೈ ಹಿಡಿಯಬೇಕು. ಏಕೆಂದರೆ ಮಳೆ ಬರುವ ಸಾಧ್ಯತೆಯಿರುವುದರಿಂದ ಈ ಪಂದ್ಯದ ಫಲಿತಾಂಶ ನಿರ್ಧರಿಸಲು ಡಕ್​ವರ್ತ್ ಲೂಯಿಸ್ ನಿಯಮವನ್ನು ಅನ್ವಯಿಸಬಹುದು. ಇದರಿಂದ ಆರ್​ಸಿಬಿ ತಂಡದ ಲೆಕ್ಕಾಚಾರಗಳು ಕೂಡ ಬದಲಾಗಬಹುದು.

ಝಾಹಿರ್ ಯೂಸುಫ್
|

Updated on:May 18, 2024 | 8:52 AM

Share
ಐಪಿಎಲ್​ನ (IPL 2024) 68ನೇ ಪಂದ್ಯದಲ್ಲಿ ಆರ್​ಸಿಬಿ ಮತ್ತು ಸಿಎಸ್​ಕೆ ತಂಡಗಳು ಮುಖಾಮುಖಿಯಾಗಲಿದೆ. ಪ್ಲೇಆಫ್ ಪ್ರವೇಶಿಸಲು ನಿರ್ಣಾಯಕವಾಗಿರುವ ಈ ಪಂದ್ಯದಲ್ಲಿ ಟಾಸ್ ಕೂಡ ಪ್ರಮುಖ ಪಾತ್ರವಹಿಸಲಿದೆ. ಏಕೆಂದರೆ ಇಂದಿನ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಅತ್ತ ಆರ್​ಸಿಬಿ ತಂಡಕ್ಕೆ ಗೆಲುವಿನೊಂದಿಗೆ ನೆಟ್ ರನ್ ರೇಟ್ ಕೂಡ ಹೆಚ್ಚಿಸಿಕೊಳ್ಳಬೇಕಿದೆ.

1 / 8
ಅಂದರೆ ಈ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಆರ್​ಸಿಬಿ ಕನಿಷ್ಠ 18 ರನ್​ಗಳ ಅಂತರದಿಂದ ಗೆಲ್ಲಬೇಕು. ಒಂದು ವೇಳೆ ಆರ್​ಸಿಬಿ ದ್ವಿತೀಯ ಇನಿಂಗ್ಸ್ ಆಡಿದರೆ ಸಿಎಸ್​ಕೆ ನೀಡುವ ಗುರಿಯನ್ನು 18.1 ಓವರ್​ಗಳಲ್ಲಿ ಚೇಸ್ ಮಾಡಬೇಕು. ಹೀಗಾದಲ್ಲಿ ಮಾತ್ರ ಸಿಎಸ್​ಕೆ ತಂಡವನ್ನು ನೆಟ್ ರನ್ ರೇಟ್​ನಲ್ಲಿ ಹಿಂದಿಕ್ಕಿ ಆರ್​ಸಿಬಿಗೆ ಪ್ಲೇಆಫ್​ಗೆ ಎಂಟ್ರಿ ಕೊಡಬಹುದು.

2 / 8
ಇಲ್ಲಿ ಆರ್​ಸಿಬಿ ವಿಶೇಷ ತಂತ್ರ ರೂಪಿಸಲು ಟಾಸ್ ಗೆಲುವು ಕೂಡ ಅನಿವಾರ್ಯ. ಏಕೆಂದರೆ ಈ ಪಂದ್ಯದ ವೇಳೆ ಮಳೆ ಬಂದರೆ ಓವರ್​ಗಳ ಕಡಿತವಾಗುತ್ತದೆ. ಇದರಿಂದ ಆರ್​ಸಿಬಿ ತಂಡದ ಲೆಕ್ಕಾಚಾರಗಳು ಕೂಡ ತಲೆ ಕೆಳಗಾಗಬಹುದು. ಅಂದರೆ ಇಲ್ಲಿ ಮಳೆ ಬರುವುದಿಲ್ಲ ಎಂದು ಕಂಡು ಬಂದರೆ ಆರ್​ಸಿಬಿ ತಂಡ ಬೌಲಿಂಗ್ ಆಯ್ದುಕೊಳ್ಳುವುದು ಉತ್ತಮ.

3 / 8
ಏಕೆಂದರೆ ಚಿನ್ನಸ್ವಾಮಿ ಸ್ಟೇಡಿಯಂ ಪಿಚ್​ ಚೇಸಿಂಗ್ ಮಾಡಲು ಸಹಕಾರಿ. ಅದೇ ಮಳೆಯ ಬರುವ ಸಾಧ್ಯತೆಗಳಿದ್ದರೆ ಆರ್​ಸಿಬಿ ಮೊದಲು ಬ್ಯಾಟಿಂಗ್ ಮಾಡಬೇಕಾಗುತ್ತದೆ. ಏಕೆಂದರೆ ಆರ್​ಸಿಬಿ ಮೊದಲ ಇನಿಂಗ್ಸ್​ನಲ್ಲಿ 20 ಓವರ್​ಗಳನ್ನು ಆಡುವ ಅವಕಾಶ ಪಡೆಯಬಹುದು. ಈ ಮೂಲಕ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗುತ್ತದೆ.

4 / 8
ಈ ಮೊತ್ತವನ್ನು ಬೆನ್ನತ್ತುವ ವೇಳೆ ಮಳೆ ಬಂದರೂ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ ಸಿಎಸ್​ಕೆ ತಂಡಕ್ಕೆ ಕಠಿಣ ಗುರಿ ಸಿಗಲಿದೆ. ಇದೇ ವೇಳೆ ಆರ್​ಸಿಬಿ 18 ರನ್​ಗಳ ಅಂತರದಿಂದ ಜಯ ಸಾಧಿಸಿ ಪ್ಲೇಆಫ್​ಗೆ ಎಂಟ್ರಿ ಕೊಡಬಹುದು.

5 / 8
ಒಂದು ವೇಳೆ ಆರ್​ಸಿಬಿ ಚೇಸಿಂಗ್ ಮಾಡುವುದಾದರೆ ಲೆಕ್ಕಾಚಾರಗಳು ಬದಲಾಗಲಿದೆ. ಏಕೆಂದರೆ, ಸಿಎಸ್​ಕೆ ತಂಡವು ಮೊದಲು ಬ್ಯಾಟ್ ಮಾಡಿ 201 ರನ್​ ಕಲೆಹಾಕಿದರೆ ಆರ್​ಸಿಬಿ ತಂಡವು ಇದನ್ನು 18.1 ಓವರ್​ಗಳಲ್ಲಿ ಚೇಸ್ ಮಾಡಬೇಕು. ಒಂದು ವೇಳೆ ಮಳೆ ಬಂದು ಓವರ್​ಗಳ ಕಡಿತವಾದರೂ ಆರ್​ಸಿಬಿ ತಂಡದ ರನ್ ಗುರಿಯಲ್ಲಿ ಅಂತಹ ದೊಡ್ಡ ವ್ಯತ್ಯಾಸವಾಗುವುದಿಲ್ಲ.

6 / 8
ಸಿಎಸ್​ಕೆ ತಂಡ 201 ರನ್​ಗಳ ಟಾರ್ಗೆಟ್​ ನೀಡಿದ ಬಳಿಕ ಮಳೆ ಬಂದು 19 ಓವರ್​ಗಳ ಪಂದ್ಯ ನಡೆದರೆ ಆರ್​ಸಿಬಿ ಈ ಗುರಿಯನ್ನು 17.1 ಓವರ್​ಗಳಲ್ಲಿ ಚೇಸ್ ಮಾಡಬೇಕಾಗುತ್ತದೆ. ಇನ್ನು 15 ಓವರ್​ಗಳ ಪಂದ್ಯ ನಡೆದರೆ ಆರ್​ಸಿಬಿ 13.1 ಓವರ್​ಗಳಲ್ಲಿ ಸಿಎಸ್​ಕೆ ತಂಡದ ಗುರಿಯನ್ನು ಬೆನ್ನತ್ತಬೇಕಾಗುತ್ತದೆ. ಅಂದರೆ ಇಲ್ಲಿ ಓವರ್​ಗಳ ಕಡಿತವಾದರೂ ಆರ್​ಸಿಬಿ 11 ಎಸೆತಗಳು ಬಾಕಿಯಿರುವಂತೆಯೇ ಗುರಿ ತಲುಪಬೇಕಾಗುತ್ತದೆ.

7 / 8
ಹೀಗಾಗಿ ಈ ಪಂದ್ಯದಲ್ಲಿ ಆರ್​ಸಿಬಿ ಟಾಸ್ ಗೆಲ್ಲುವುದು ಕೂಡ ಅನಿವಾರ್ಯ. ಈ ಮೂಲಕ ಮಳೆಯ ಬರುವ ಸಾಧ್ಯತೆಗಳಿದ್ದರೆ ಬ್ಯಾಟಿಂಗ್ ಆಯ್ದುಕೊಳ್ಳಬೇಕು. ಅಲ್ಲದೆ ಬೃಹತ್ ಮೊತ್ತ ಪೇರಿಸಿ ಸಿಎಸ್​ಕೆ ತಂಡವನ್ನು ಕನಿಷ್ಠ 18 ರನ್​ಗಳಿಂದ ಸೋಲಿಸಿ ಪ್ಲೇಆಫ್​ಗೆ ಅರ್ಹತೆ ಗಿಟ್ಟಿಸಿಕೊಳ್ಳಬಹುದು. ಇನ್ನು ಮಳೆ ಬರುವ ಸಾಧ್ಯತೆಗಳಿಲ್ಲದಿದ್ದರೆ, ಚೇಸಿಂಗ್ ಮಾಡುವುದು ಉತ್ತಮ. ಈ ಮೂಲಕ ಸಿಎಸ್​ಕೆ ನೀಡುವ ಗುರಿಯನ್ನು 11 ಎಸೆತಗಳು ಬಾಕಿ ಇರುವಂತೆ ಚೇಸ್ ಮಾಡಿ ನೆಟ್ ರನ್ ರೇಟ್ ಮೂಲಕ ಪ್ಲೇಆಫ್​ಗೆ ಪ್ರವೇಶಿಸಬಹುದು.

8 / 8

Published On - 8:51 am, Sat, 18 May 24

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ