IPL 2024: RCB ತಂಡದ ನಾಯಕತ್ವದಲ್ಲಿ ಮತ್ತೆ ಬದಲಾವಣೆ..?

Edited By:

Updated on: Jan 02, 2024 | 3:31 PM

IPL 2024 RCB: ಕಳೆದ ಸೀಸನ್​ನಲ್ಲಿ ಆರ್​ಸಿಬಿ 14 ಪಂದ್ಯಗಳಲ್ಲಿ ಗೆದ್ದಿದ್ದು ಕೇವಲ 7 ಮ್ಯಾಚ್ ಮಾತ್ರ. ಇದರ ಬೆನ್ನಲ್ಲೇ ಆರ್​ಸಿಬಿ ತಂಡದ ನಾಯಕತ್ವದ ಬಗ್ಗೆ ಪ್ರಶ್ನೆಗಳೆದಿದ್ದವು. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತವರಿನಲ್ಲಿ ಆಡಿದ 7 ಪಂದ್ಯಗಳಲ್ಲಿ 4 ರಲ್ಲಿ ಸೋಲನುಭವಿಸಿತ್ತು.

1 / 10
IPL 2024: ಕಳೆದ 16 ಸೀಸನ್​ಗಳಿಂದ ಚಾಂಪಿಯನ್ ಪಟ್ಟ ಅಲಂಕರಿಸುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತಂಡದ ಕನಸು ಮುಂದುವರೆದಿದೆ. ಪ್ರತಿ ಬಾರಿ ಈ ಸಲ ಕಪ್ ನಮ್ದೆ ಎಂಬ ಘೋಷವಾಕ್ಯದೊಂದಿಗೆ ಅಭಿಯಾನ ಆರಂಭಿಸುವ ಆರ್​ಸಿಬಿ ಫೈನಲ್​ ಪ್ರವೇಶಿಸದೇ 7 ವರ್ಷಗಳೇ ಕಳೆದಿವೆ.

IPL 2024: ಕಳೆದ 16 ಸೀಸನ್​ಗಳಿಂದ ಚಾಂಪಿಯನ್ ಪಟ್ಟ ಅಲಂಕರಿಸುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ತಂಡದ ಕನಸು ಮುಂದುವರೆದಿದೆ. ಪ್ರತಿ ಬಾರಿ ಈ ಸಲ ಕಪ್ ನಮ್ದೆ ಎಂಬ ಘೋಷವಾಕ್ಯದೊಂದಿಗೆ ಅಭಿಯಾನ ಆರಂಭಿಸುವ ಆರ್​ಸಿಬಿ ಫೈನಲ್​ ಪ್ರವೇಶಿಸದೇ 7 ವರ್ಷಗಳೇ ಕಳೆದಿವೆ.

2 / 10

ಅದರಲ್ಲೂ ಕಳೆದ ಸೀಸನ್​ನಲ್ಲಿ ಆರ್​ಸಿಬಿ 14 ಪಂದ್ಯಗಳಲ್ಲಿ ಗೆದ್ದಿದ್ದು ಕೇವಲ 7 ಮ್ಯಾಚ್ ಮಾತ್ರ. ಇದರ ಬೆನ್ನಲ್ಲೇ ಆರ್​ಸಿಬಿ ತಂಡದ ನಾಯಕತ್ವದ ಬಗ್ಗೆ ಪ್ರಶ್ನೆಗಳೆದಿದ್ದವು. ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತವರಿನಲ್ಲಿ ಆಡಿದ 7 ಪಂದ್ಯಗಳಲ್ಲಿ 4 ರಲ್ಲಿ ಸೋಲನುಭವಿಸಿತ್ತು.

3 / 10

ಪರಿಣಾಮ 2019 ರ ಬಳಿಕ ಆರ್​ಸಿಬಿ ತಂಡವು ಮೊದಲ ಬಾರಿಗೆ ಲೀಗ್ ಹಂತದಿಂದಲೇ ಹೊರಬಿದ್ದಿತ್ತು. ಇದೇ ಕಾರಣದಿಂದಾಗಿ ಇದೀಗ ಈ ಬಾರಿಯ ಐಪಿಎಲ್​ನಲ್ಲಿ ಫಾಫ್ ಡುಪ್ಲೆಸಿಸ್ ಅವರ ನಾಯಕತ್ವದಲ್ಲಿ ಆರ್​ಸಿಬಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗುತ್ತಿದೆ.

4 / 10

ಏಕೆಂದರೆ ಡುಪ್ಲೆಸಿಸ್ ಕಳೆದ ಎರಡು ಸೀಸನ್​ಗಳಿಂದ ಆರ್​ಸಿಬಿ ತಂಡವನ್ನು ಮುನ್ನಡೆಸಿದ್ದಾರೆ. ಒಟ್ಟು 27 ಪಂದ್ಯಗಳಲ್ಲಿ ಫಾಫ್ ಸಾರಥ್ಯದಲ್ಲಿ ಕಣಕ್ಕಿಳಿದ ಆರ್​ಸಿಬಿ ಗೆದ್ದಿರುವುದು ಕೇವಲ 14 ಪಂದ್ಯಗಳಲ್ಲಿ ಮಾತ್ರ. ಅಂದರೆ ಡುಪ್ಲೆಸಿಸ್ ನಾಯಕತ್ವದಲ್ಲಿ ಆರ್​ಸಿಬಿ 13 ಪಂದ್ಯಗಳಲ್ಲಿ ಸೋತಿದೆ.

5 / 10

ಇನ್ನು ಡುಪ್ಲೆಸಿಸ್ ಅನುಪಸ್ಥಿತಿಯಲ್ಲಿ ಕಳೆದ ಸೀಸನ್​ನಲ್ಲಿ ಆರ್​ಸಿಬಿ ತಂಡವನ್ನು ಮೂರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಮುನ್ನಡೆಸಿದ್ದರು. ಈ ವೇಳೆ ತಮ್ಮ ಹಿಂದಿನ ಆಕ್ರಮಣಶೀಲಾ ನಾಯಕತ್ವದೊಂದಿಗೆ ಗಮನ ಸೆಳೆದಿದ್ದರು. ಇದೇ ಕಾರಣದಿಂದಾಗಿ ಆರ್​ಸಿಬಿ ಫ್ರಾಂಚೈಸಿ ಮತ್ತೆ ಕೊಹ್ಲಿಗೆ ನಾಯಕತ್ವ ನೀಡಲಿದೆಯಾ ಎಂಬ ಚರ್ಚೆ ಶುರುವಾಗಿದೆ.

6 / 10

ಏಕೆಂದರೆ ಈ ಹಿಂದೆ ನಾಯಕತ್ವದ ಹೊರೆಯ ಕಾರಣ ವಿರಾಟ್ ಕೊಹ್ಲಿ ಆರ್​ಸಿಬಿ ತಂಡದ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡಿದ್ದರು. ಅಂದರೆ ಭಾರತ ತಂಡವನ್ನು ಹಾಗೂ ಆರ್​ಸಿಬಿಯನ್ನು ಮುನ್ನಡೆಸುತ್ತಿರುವುದು ಹೊರೆಯಾಗುತ್ತಿದೆ. ಹೀಗಾಗಿ ಲೀಗ್ ಕ್ರಿಕೆಟ್​ನ ನಾಯಕತ್ವನ ಜವಾಬ್ದಾರಿಯಿಂದ ಕೆಳಗಿಳಿಯುವುದಾಗಿ ಕೊಹ್ಲಿ ತಿಳಿಸಿದ್ದರು.

7 / 10

ಆದರೀಗ ವಿರಾಟ್ ಕೊಹ್ಲಿ ಸಂಪೂರ್ಣ ಫ್ರೀಯಾಗಿದ್ದಾರೆ. ಟೀಮ್ ಇಂಡಿಯಾದ ಮೂರು ತಂಡಗಳ ನಾಯಕತ್ವವನ್ನು ತೊರೆದಿದ್ದಾರೆ. ಅಂದರೆ ನಾಯಕನ ಜವಾಬ್ದಾರಿಯಿಂದ ಕೆಳಗಿಳಿದಿದ್ದಾರೆ. ಈ ಹಿಂದೆ ರಾಜೀನಾಮೆ ನೀಡಲು ತಿಳಿಸಿದ ಕಾರಣದಿಂದ ಇದೀಗ ಕೊಹ್ಲಿ ಸಂಪೂರ್ಣ ಮುಕ್ತರಾಗಿದ್ದಾರೆ.

8 / 10

ಇತ್ತ ಸತತ ಎರಡು ಸೀಸನ್​ಗಳಲ್ಲಿ ಫಾಫ್ ಡುಪ್ಲೆಸಿಸ್ ತಂಡವನ್ನು ಮುನ್ನಡೆಸಿದರೂ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಅತ್ತ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆರ್​ಸಿಬಿ 3 ಬಾರಿ ಪ್ಲೇಆಫ್ಸ್ ಪ್ರವೇಶಿಸಿದರೆ, ಒಂದು ಬಾರಿ ಫೈನಲ್ ಪಂದ್ಯವನ್ನಾಡಿದೆ.

9 / 10

ಅತ್ತ 39 ವರ್ಷದ ಫಾಫ್ ಡುಪ್ಲೆಸಿಸ್ ನಿವೃತ್ತಿಯ ಅಂಚಿನಲ್ಲಿದ್ದಾರೆ. ಈ ಎಲ್ಲಾ ಕಾರಣಗಳಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯು ಈ ಬಾರಿಯ ​ಐಪಿಎಲ್​ನಲ್ಲಿ ಮತ್ತೆ ವಿರಾಟ್ ಕೊಹ್ಲಿಗೆ ನಾಯಕತ್ವ ನೀಡಿದರೂ ಅಚ್ಚರಿಪಡಬೇಕಿಲ್ಲ.

10 / 10

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್ , ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರೋನ್ ಗ್ರೀನ್, ಅಲ್ಝಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾಣ್.

TV9 Web

TV9 Kannada

Read More
Loading...
Unable to load recommendations.
Follow Us