Angkrish Raghuvanshi: ಮತ್ತೋರ್ವ ಯುವ ಪ್ರತಿಭೆಯನ್ನು ಪರಿಚಯಿಸಿದ KKR

Edited By:

Updated on: Apr 04, 2024 | 6:59 AM

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​ಗೆ (ಐಪಿಎಲ್ 2024) ಮತ್ತೋರ್ವ ಯುವ ಪ್ರತಿಭೆ ಎಂಟ್ರಿ ಕೊಟ್ಟಿದೆ. ಹೆಸರು ಅಂಗ್‌ಕ್ರಿಶ್ ರಘುವಂಶಿ, ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡುತ್ತಿರುವ 18ರ ಯುವ ದಾಂಡಿಗ ಚೊಚ್ಚಲ ಪಂದ್ಯದಲ್ಲೇ ಕಮಾಲ್ ಮಾಡಿದ್ದಾರೆ. ಆಕರ್ಷಕ ಬ್ಯಾಟಿಂಗ್​ನೊಂದಿಗೆ ಗಮನ ಸೆಳೆದ ರಘವಂಶಿ ದೇಶೀಯ ಅಂಗಳದಲ್ಲೇ ಆಕ್ರಮಣಕಾರಿ ಬ್ಯಾಟಿಂಗ್​ ಹೆಸರುವಾಸಿ. ಇದನ್ನು ಐಪಿಎಲ್​ನಲ್ಲೂ ತೋರಿಸಿದ್ದಾರೆ.

1 / 6
ಕೊಲ್ಕತ್ತಾ ನೈಟ್​ ರೈಡರ್ಸ್ (KKR) ತಂಡ ಪರಿಚಯಿಸಿದ ರಿಂಕು ಸಿಂಗ್ ಕಮಾಲ್ ಮಾಡುತ್ತಿರುವುದು ಗೊತ್ತೇ ಇದೆ. ಇದೀಗ ಕೆಕೆಆರ್ ಮತ್ತೋರ್ವ ಯುವ ಆಟಗಾರನನ್ನು ಪರಿಚಯಿಸಿದೆ. ಈ ಯುವ ದಾಂಡಿಗನ ಹೆಸರು ಅಂಗ್‌ಕ್ರಿಶ್ ರಘುವಂಶಿ. ಆಡಿದ ಚೊಚ್ಚಲ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದಾರೆ.

ಕೊಲ್ಕತ್ತಾ ನೈಟ್​ ರೈಡರ್ಸ್ (KKR) ತಂಡ ಪರಿಚಯಿಸಿದ ರಿಂಕು ಸಿಂಗ್ ಕಮಾಲ್ ಮಾಡುತ್ತಿರುವುದು ಗೊತ್ತೇ ಇದೆ. ಇದೀಗ ಕೆಕೆಆರ್ ಮತ್ತೋರ್ವ ಯುವ ಆಟಗಾರನನ್ನು ಪರಿಚಯಿಸಿದೆ. ಈ ಯುವ ದಾಂಡಿಗನ ಹೆಸರು ಅಂಗ್‌ಕ್ರಿಶ್ ರಘುವಂಶಿ. ಆಡಿದ ಚೊಚ್ಚಲ ಪಂದ್ಯದಲ್ಲೇ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದಾರೆ.

2 / 6

ವಿಶಾಖಪಟ್ಟಣಂನಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೆಕೆಆರ್ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಂಗ್‌ಕ್ರಿಶ್ ರಘುವಂಶಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಎದುರಿಸಿದ ಮೊದಲೆರಡು ಎಸೆತಗಳಲ್ಲಿ ಬೌಂಡರಿ ಬಾರಿಸಿದ ರಘುವಂಶಿ ಬಿರುಸಿನ ಆಟಕ್ಕೆ ಒತ್ತು ನೀಡಿದರು.

3 / 6

ಅಲ್ಲದೆ ಚೊಚ್ಚಲ ಪಂದ್ಯದಲ್ಲಿ ಅನುಭವಿ ವೇಗಿಗಳ ಮುಂದೆ ಸೆಟೆದು ನಿಂತ 18ರ ಯುವ ದಾಂಡಿಗ ಕೇವಲ 25 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ ಐಪಿಎಲ್​ನ ಪಾದಾರ್ಪಣೆ ಪಂದ್ಯದಲ್ಲಿ ಹಾಫ್ ಸೆಂಚುರಿ ಸಿಡಿಸಿದ ವಿಶೇಷ ಸಾಧನೆ ಮಾಡಿದರು. ಅಲ್ಲದೆ ಈ ಅರ್ಧಶತಕದೊಂದಿಗೆ ಐಪಿಎಲ್​ಗೆ ತನ್ನ ಆಗಮನವನ್ನು ಸಾರಿದರು.

4 / 6

ಅಂದಹಾಗೆ ಅಂಗ್‌ಕ್ರಿಶ್ ರಘುವಂಶಿ ದೆಹಲಿ ಮೂಲದ ಕ್ರಿಕೆಟಿಗ. ಆದರೆ ದೇಶೀಯ ಅಂಗಳದಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅಲ್ಲದೆ 2022 ರಲ್ಲಿ ಅಂಡರ್-19 ವಿಶ್ವಕಪ್​ನಲ್ಲಿ ಭಾರತ ಪರ ಆಡಿದ್ದರು. 2023 ರಲ್ಲಿ ಲಿಸ್ಟ್ A ಮತ್ತು T20 ಗೆ ಪಾದಾರ್ಪಣೆ ಮಾಡಿದ್ದ ರುಘುವಂಶಿ, CK ನಾಯುಡು ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದರು. ಕೇವಲ 9 ಪಂದ್ಯಗಳಲ್ಲಿ 765 ರನ್​ಗಳನ್ನು ಸಿಡಿಸುವ ಮೂಲಕ ರಘುವಂಶಿ ಐಪಿಎಲ್​ ಫ್ರಾಂಚೈಸಿಗಳ ಗಮನ ಸೆಳೆದಿದ್ದರು.

5 / 6

ಅತ್ತ ಮುಂಬೈನ ಮಾಜಿ ಆಟಗಾರ, ಪ್ರಸ್ತುತ ಕೆಕೆಆರ್ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅದಾಗಲೇ ರಘುವಂಶಿ ಮೇಲೆ ಕಣ್ಣಿಟ್ಟಿದ್ದರು. ಏಕೆಂದರೆ ಅಂಗ್​ಕ್ರಿಶ್ ನಾಯರ್ ಗರಡಿಯಲ್ಲಿ ಪಳಗಿದ ಹುಡುಗ. ಹೀಗಾಗಿಯೇ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ ಯುವ ಆಟಗಾರಿಗೆ ಅದೃಷ್ಟದ ಬಾಗಿಲು ತೆರೆಯಿತು.

6 / 6

ಅದರಂತೆ ಇದೀಗ ತಮ್ಮ 18ನೇ ವಯಸ್ಸಿನಲ್ಲಿ ಐಪಿಎಲ್​ಗೆ ಪಾದಾರ್ಪಣೆ ಮಾಡಿದ್ದಾರೆ. ಅಲ್ಲದೆ ಮೊದಲ ಪಂದ್ಯದಲ್ಲೇ 27 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 5 ಫೋರ್​ಗಳೊಂದಿಗೆ 54 ರನ್ ಸಿಡಿಸಿ ಅಂಗ್‌ಕ್ರಿಶ್ ರಘುವಂಶಿ ತಮ್ಮ ಎಂಟ್ರಿಯನ್ನು ಸಾರಿದ್ದಾರೆ. ಹೀಗಾಗಿ ಮುಂಬರುವ ಪಂದ್ಯಗಳಲ್ಲಿ ಯುವ ದಾಂಡಿಗನ ಕಡೆಯಿಂದ ಮತ್ತಷ್ಟು ಸ್ಪೋಟಕ ಇನಿಂಗ್ಸ್ ಅನ್ನು ನಿರೀಕ್ಷಿಸಬಹುದು.

Loading...
Unable to load recommendations.
Follow Us