ಮುಂಬೈ ಇಂಡಿಯನ್ಸ್ (Mumbai Indians) ತಂಡದ ಅತ್ಯಂತ ಯಶಸ್ವಿ ಬೌಲರ್ ಲಸಿತ್ ಮಾಲಿಂಗ (Lasith Malinga) ತಮ್ಮ ಹಳೆಯ ತಂಡಕ್ಕೆ ಮರಳಿದ್ದಾರೆ. ಆದರೆ ಈ ಬಾರಿ ಬೌಲರ್ ಆಗಿ ಅಲ್ಲ. ಬದಲಾಗಿ ಕೋಚ್ ಆಗಿ ಎಂಬುದಷ್ಟೇ ವ್ಯತ್ಯಾಸ.
2021 ರಲ್ಲಿ ಐಪಿಎಲ್ಗೆ ವಿದಾಯ ಹೇಳಿದ್ದ ಲಸಿತ್ ಮಾಲಿಂಗ ಆ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡದ ಬೌಲಿಂಗ್ ಕೋಚ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಯಾರ್ಕರ್ ಸ್ಪೆಷಲಿಸ್ಟ್ ಬೌಲರ್ನನ್ನು ಮತ್ತೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಕರೆತರುವಲ್ಲಿ ಫ್ರಾಂಚೈಸಿ ಯಶಸ್ವಿಯಾಗಿದೆ.
ಅದರಂತೆ ಐಪಿಎಲ್ 2024 ರಲ್ಲಿ ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲಿಂಗ್ ಕೋಚ್ ಆಗಿ ಲಸಿತ್ ಮಾಲಿಂಗ ಕಾರ್ಯ ನಿರ್ವಹಿಸಲಿದ್ದಾರೆ. ಅಲ್ಲದೆ ಈ ಹಿಂದೆ ಬೌಲಿಂಗ್ ಕೋಚ್ ಆಗಿ ನ್ಯೂಝಿಲೆಂಡ್ನ ಶೇನ್ ಬಾಂಡ್ ಅವರನ್ನು ಮುಂಬೈ ಫ್ರಾಂಚೈಸಿ ಕೈ ಬಿಟ್ಟಿದೆ.
ಮುಂಬೈ ಇಂಡಿಯನ್ಸ್ (Mumbai Indians) ತಂಡದ ಅತ್ಯಂತ ಯಶಸ್ವಿ ಬೌಲರ್ ಲಸಿತ್ ಮಾಲಿಂಗ (Lasith Malinga) ತಮ್ಮ ಹಳೆಯ ತಂಡಕ್ಕೆ ಮರಳಿದ್ದಾರೆ. ಆದರೆ ಈ ಬಾರಿ ಬೌಲರ್ ಆಗಿ ಅಲ್ಲ. ಬದಲಾಗಿ ಕೋಚ್ ಆಗಿ ಎಂಬುದಷ್ಟೇ ವ್ಯತ್ಯಾಸ.
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಮಾತ್ರ ಆಡಿದ ಕೆಲವೇ ಕೆಲ ಆಟಗಾರರಲ್ಲಿ ಶ್ರೀಲಂಕಾದ ಲಸಿತ್ ಮಾಲಿಂಗ ಕೂಡ ಒಬ್ಬರು. 2009 ರಿಂದ 2021 ರವರೆಗೆ ಒಟ್ಟು 139 ಪಂದ್ಯಗಳನ್ನಾಡಿದ್ದ ಮಾಲಿಂಗ 195 ವಿಕೆಟ್ ಪಡೆದಿದ್ದಾರೆ. ಈ ವೇಳೆ ಮುಂಬೈ ಇಂಡಿಯನ್ಸ್ ತಂಡವು 5 ಬಾರಿ ಚಾಂಪಿಯನ್ ಆಗಿತ್ತು ಎಂಬುದು ವಿಶೇಷ.
ಆದರೆ ನಿವೃತ್ತಿ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಶ್ರೀಲಂಕಾದ ಕುಮಾರ್ ಸಂಗಾಕ್ಕರ ಅವರ ಒತ್ತಾಯದ ಮೇರೆಗೆ ಮಾಲಿಂಗ RR ತಂಡದ ಬೌಲಿಂಗ್ ಕೋಚ್ ಆಗಿದ್ದರು. ಈ ಒಪ್ಪಂದ ಕೊನೆಗೊಳ್ಳುತ್ತಿದ್ದಂತೆ ಮಾಜಿ ಆಟಗಾರನನ್ನು ಮತ್ತೆ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಯಶಸ್ವಿಯಾಗಿದೆ.