IPL 2024: ಐಪಿಎಲ್‌ನಿಂದ ಹಿಂದೆ ಸರಿದ ಮತ್ತೊಬ್ಬ ವಿದೇಶಿ ಆಟಗಾರ..!
IPL 2024: ಐಪಿಎಲ್ ಆರಂಭಕ್ಕೆ ಈಗ 24 ಗಂಟೆಗಳಿಗಿಂತ ಕಡಿಮೆ ಸಮಯ ಉಳಿದಿದೆ. ಆದರೆ ಈ ನಡುವೆ 2008ರ ವಿಜೇತ ತಂಡ ರಾಜಸ್ಥಾನ್ ರಾಯಲ್ಸ್ಗೆ ಟೂರ್ನಿ ಆರಂಭಕ್ಕೂ ಮುನ್ನ ಸಂಕಷ್ಟ ಎದುರಾಗಿದೆ. ತಂಡದ ಲೆಗ್ ಸ್ಪಿನ್ನರ್ ಆಡಮ್ ಝಂಪಾ ಕೊನೆಯ ಕ್ಷಣದಲ್ಲಿ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ.
1 / 6
ಐಪಿಎಲ್ ಆರಂಭಕ್ಕೆ ಈಗ 24 ಗಂಟೆಗಳಿಗಿಂತ ಕಡಿಮೆ ಸಮಯ ಉಳಿದಿದೆ. ಸುಮಾರು ಎರಡು ತಿಂಗಳ ಕಾಲ ನಡೆಯಲಿರುವ ಈ ಟೂರ್ನಿಗೆ ಎಲ್ಲ ತಂಡಗಳು ಸಂಪೂರ್ಣ ಸಿದ್ಧಗೊಂಡಿವೆ. ಆದರೆ ಈ ನಡುವೆ 2008ರ ವಿಜೇತ ತಂಡ ರಾಜಸ್ಥಾನ್ ರಾಯಲ್ಸ್ಗೆ ಟೂರ್ನಿ ಆರಂಭಕ್ಕೂ ಮುನ್ನ ಸಂಕಷ್ಟ ಎದುರಾಗಿದೆ. ತಂಡದ ಲೆಗ್ ಸ್ಪಿನ್ನರ್ ಆಡಮ್ ಝಂಪಾ ಕೊನೆಯ ಕ್ಷಣದಲ್ಲಿ ಐಪಿಎಲ್‌ನಿಂದ ಹಿಂದೆ ಸರಿದಿದ್ದಾರೆ.
2 / 6
ಕಳೆದ ವರ್ಷದ ಐಪಿಎಲ್ ಹರಾಜಿನಲ್ಲಿ ಝಂಪಾ ಅವರನ್ನು ರಾಜಸ್ಥಾನ 1.5 ಕೋಟಿ ರೂ.ಗೆ ಖರೀದಿಸಿತ್ತು. ಆದರೀಗ ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿಯ ಪ್ರಕಾರ, ಆಸ್ಟ್ರೇಲಿಯಾದ ಬಿಡುವಿಲ್ಲದ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಝಂಪಾ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದು ಝಂಪಾ ಅವರ ಮ್ಯಾನೇಜರ್ ಖಚಿತಪಡಿಸಿದ್ದಾರೆ.
3 / 6
ಕಳೆದ ವರ್ಷ ರಾಜಸ್ಥಾನ ಪರ ಆರು ಪಂದ್ಯಗಳನ್ನು ಆಡಿದ್ದ ಝಂಪಾ ಎಂಟು ವಿಕೆಟ್ ಪಡೆದಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ 22 ರನ್‌ಗಳಿಗೆ ಮೂರು ವಿಕೆಟ್ ಪಡೆದಿದ್ದು, ಕಳೆದ ಆವೃತ್ತಿಯಲ್ಲಿ ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು.
4 / 6
ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಅಲಭ್ಯತೆಯಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಸಂಜು ಸ್ಯಾಮ್ಸನ್ ಪಡೆಗೆ ಇದೀಗ ಝಂಪಾ ಅನುಪಸ್ಥಿತಿ ಹಿನ್ನಡೆಯನ್ನುಂಟು ಮಾಡಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ರಾಜಸ್ಥಾನ ಫ್ರಾಂಚೈಸಿ ಝಂಪಾ ಬದಲಿ ಆಟಗಾರನನ್ನು ಇನ್ನು ಪ್ರಕಟಿಸಿಲ್ಲ.
5 / 6
ಸಂಜು ಸ್ಯಾಮ್ಸನ್ ನಾಯಕತ್ವದ ರಾಜಸ್ಥಾನ ತಂಡವು ಈ ಆವೃತ್ತಿಯ ಮೊದಲ ಪಂದ್ಯವನ್ನು ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ಮಾರ್ಚ್ 24 ರಂದು ಜೈಪುರದಲ್ಲಿ ಆಡಲಿದೆ. ಇದಾದ ನಂತರ ತಂಡವು ಮಾರ್ಚ್ 28 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಪಂದ್ಯವನ್ನು ಆಡಲಿದೆ.
6 / 6
ರಾಜಸ್ಥಾನ ರಾಯಲ್ಸ್ ತಂಡ: ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್ ಕೀಪರ್), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಶಿಮ್ರೋನ್ ಹೆಟ್ಮೆಯರ್, ಯಶಸ್ವಿ ಜೈಸ್ವಾಲ್, ರವಿಚಂದ್ರನ್ ಅಶ್ವಿನ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್, ರಿಯಾನ್ ಪರಾಗ್, ನವದೀಪ್ ಸೈನಿ, ಧ್ರುವ ಜುರೆಲ್, ಟ್ರೆಂಟ್ ಬೌಲ್ಟ್, ಡೊನೊವನ್ ಫೆರೀರಾ, ಕುಲ್‌ದೀಪ್ ಸೇನ್, ಅವೇಶ್ ಖಾನ್, ರೋವ್ಮನ್ ಪೊವೆಲ್, ಶುಭಂ ದುಬೆ, ಟಾಮ್ ಕೊಹ್ಲರ್-ಕಾಡ್ಮೋರ್, ಅಬಿದ್ ಮುಷ್ತಾಕ್, ನಾಂದ್ರೆ ಬರ್ಗರ್.