IPL 2024: ಪವರ್ ಪ್ಲೇಯಲ್ಲಿ ಧಾರಾಳ; ಬೇಡದ ದಾಖಲೆ ಬರೆದ ಆರ್​ಸಿಬಿ ವೇಗಿಗಳು..!

|

Updated on: Apr 21, 2024 | 7:03 PM

IPL 2024: ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ ಆರ್​ಸಿಬಿ ಬೌಲಿಂಗ್ ವಿಭಾಗ ಒಮ್ಮೆ ಮಾತ್ರ ಎದುರಾಳಿ ತಂಡವನ್ನು 50 ರನ್​ಗಳಿಗೆ ಕಟ್ಟಿಹಾಕಿದೆ. ಅದನ್ನು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ವೇಗಿಗಳು ಸರಾಗವಾಗಿ ರನ್ ಬಿಟ್ಟುಕೊಟ್ಟಿದ್ದಾರೆ. ಇದು ತಂಡವನ್ನು ಆರಂಭದಲ್ಲೇ ಸಂಕಷ್ಟಕ್ಕೆ ದೂಡುತ್ತಿದೆ, ಅಲ್ಲದೆ ಪವರ್ಪ್ಲೇನಲ್ಲಿ ಆರ್​ಸಿಬಿ ವೇಗಿಗಳು ವಿಕೆಟ್ ಉರುಳಿಸಿದ್ದು ತೀರ ಕಡಿಮೆ.

1 / 7
2024 ರ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ಅಷ್ಟೇನೂ ವಿಶೇಷವಾಗಿಲ್ಲ. ತಂಡ ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಸೋತು, 1 ಪಂದ್ಯದಲ್ಲಿ ಮಾತ್ರ ಗೆದ್ದಿದೆ. ಇದೀಗ 8ನೇ ಪಂದ್ಯವನ್ನಾಡುತ್ತಿರುವ ಆರ್​ಸಿಬಿಗೆ ಗೆಲುವು ದಕ್ಕುತ್ತಾ ಎಂಬುದನ್ನು ಕಾದುನೋಡಬೇಕಿದೆ.

2 / 7
ಪ್ರತಿ ಆವೃತ್ತಿಯಲ್ಲಿ ಆರ್​ಸಿಬಿಗೆ ತನ್ನ ಬೌಲಿಂಗ್​ನದ್ದೇ ಚಿಂತೆಯಾಗಿರುತ್ತಿತ್ತು. ಆದರೆ ಈ ಬಾರಿ ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗವೂ ದಯನೀಯವಾಗಿ ವಿಫಲವಾಗಿದೆ. ಹೀಗಾಗಿ ತಂಡ ಸತತ ಸೋಲುಗಳಿಂದ ಕಂಗೆಟ್ಟಿದೆ.

3 / 7
ತಂಡದ ಬೌಲರ್​ಗಳು ಸುಲಭವಾಗಿ ರನ್ ಬಿಟ್ಟುಕೊಟ್ಟು ದುಬಾರಿಯಾಗುತ್ತಿರುವುದರೊಂದಿಗೆ ಆರಂಭದಲ್ಲೇ ತಂಡವನ್ನು ಪಂದ್ಯದಿಂದ ಹೊರಹಾಕುತ್ತಿದ್ದಾರೆ. ಇದಕ್ಕೆ ಪೂರಕ ಸಾಕ್ಷಿಯಾಗಿ ತಂಡದ ಬೌಲಿಂಗ್ ವಿಭಾಗ ಇದುವರೆಗೆ ನೀಡಿರುವ ಪ್ರದರ್ಶನವನ್ನೇ ನೋಡಬಹುದು. ಅದರಲ್ಲೂ ಪವರ್ಪ್ಲೇನಲ್ಲಿ ತಂಡದ ಬೌಲಿಂಗ್ ಕಥೆ ಹೇಳತೀರದಾಗಿದೆ.

4 / 7
ಇದುವರೆಗೆ ಆಡಿರುವ 8 ಪಂದ್ಯಗಳಲ್ಲಿ ಆರ್​ಸಿಬಿ ಬೌಲಿಂಗ್ ವಿಭಾಗ ಒಮ್ಮೆ ಮಾತ್ರ ಎದುರಾಳಿ ತಂಡವನ್ನು 50 ರನ್​ಗಳಿಗೆ ಕಟ್ಟಿಹಾಕಿದೆ. ಅದನ್ನು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ವೇಗಿಗಳು ಸರಾಗವಾಗಿ ರನ್ ಬಿಟ್ಟುಕೊಟ್ಟಿದ್ದಾರೆ. ಇದು ತಂಡವನ್ನು ಆರಂಭದಲ್ಲೇ ಸಂಕಷ್ಟಕ್ಕೆ ದೂಡುತ್ತಿದೆ, ಅಲ್ಲದೆ ಪವರ್ಪ್ಲೇನಲ್ಲಿ ಆರ್​ಸಿಬಿ ವೇಗಿಗಳು ವಿಕೆಟ್ ಉರುಳಿಸಿದ್ದು ತೀರ ಕಡಿಮೆ.

5 / 7
ಇಂದು ನಡೆಯುತ್ತಿರುವ ಕೆಕೆಆರ್ ವಿರುದ್ಧದ ಪಂದ್ಯದಲ್ಲೂ ಇದೇ ದೃಶ್ಯ ಕಂಡುಬಂತು. ದುರ್ಬಲ ಆರ್​ಸಿಬಿ ಬೌಲಿಂಗ್ ಮುಂದೆ ಕೆಕೆಆರ್ ತಂಡ ಮೊದಲ 6 ಓವರ್​ಗಳಲ್ಲಿ 75 ರನ್ ಕಲೆಹಾಕಿದರು. ಪವರ್ಪ್ಲೇನಲ್ಲಿ ಅಧಿಕ ರನ್ ಬಿಟ್ಟುಕೊಡುವ ಮೂಲಕ ಆರ್​ಸಿಬಿ ವೇಗಿಗಳು ಇದುವರೆಗೆ ಯಾವುದೇ ತಂಡದ ಹೆಸರಲ್ಲಿ ಇಲ್ಲದ ಬೇಡದ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ.

6 / 7
ವಾಸ್ತವವಾಗಿ ಈ ಆವೃತ್ತಿಯಲ್ಲಿ ಆರ್​ಸಿಬಿ ವೇಗಿಗಳು ಪವರ್​ಪ್ಲೇನಲ್ಲಿ 75 ಕ್ಕೂ ಅಧಿಕ ರನ್ ಬಿಟ್ಟುಕೊಡುತ್ತಿರುವುದು ಇದು ನಾಲ್ಕನೇ ಬಾರಿ. ಈ ಮೂಲಕ ಆರ್​ಸಿಬಿ ಐಪಿಎಲ್ ಇತಿಹಾಸದಲ್ಲಿ ತಂಡವೊಂದು ಒಂದು ಆವೃತ್ತಿಯಲ್ಲಿ ಪವರ್​ಪ್ಲೇನಲ್ಲಿ 4 ಬಾರಿ 75ಕ್ಕೂ ಅಧಿಕ ರನ್ ಬಿಟ್ಟುಕೊಟ್ಟ ಬೇಡದ ದಾಖಲೆ ನಿರ್ಮಿಸಿದೆ.

7 / 7
ಅದರಲ್ಲೂ ಆಡಿರುವ 8 ಪಂದ್ಯಗಳ ಪೈಕಿ 7 ಪಂದ್ಯಗಳಲ್ಲಿ 50 ಕ್ಕೂ ಅಧಿಕ ರನ್​ಗಳನ್ನು ಪವರ್​ ಪ್ಲೇನಲ್ಲಿ ಬಿಟ್ಟುಕೊಟ್ಟಿದೆ. ಕೋಲ್ಕತ್ತಾ ನೈಟ್ ರೈಸರ್ಸ್ ವಿರುದ್ಧ ಆಡಿದ್ದ ಮೊದಲ ಪಂದ್ಯದಲ್ಲೂ ಆರ್‌ಸಿಬಿ ಪವರ್‌ಪ್ಲೇಯಲ್ಲಿ 85 ರನ್‌ಗಳನ್ನು ನೀಡಿತ್ತು.