IPL 2024: ಗುಜರಾತ್ ಟೈಟಾನ್ಸ್ ತಂಡಕ್ಕೆ ಸರ್ಫರಾಜ್ ಖಾನ್?
IPL 2024: ಟೀಂ ಇಂಡಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಸಂಚಲನ ಮೂಡಿಸಿದ್ದ ಸರ್ಫರಾಜ್ ಖಾನ್ ಇದೀಗ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ. ವಾಸ್ತವವಾಗಿ ಐಪಿಎಲ್ ಮಿನಿ ಹರಾಜಿನಲ್ಲಿ ಸರ್ಫರಾಜ್ರನ್ನು ಯಾವ ತಂಡವೂ ಖರೀದಿಸಿರಲಿಲ್ಲ. ಆದರೀಗ ಅವರು ಗುಜರಾತ್ ಪರ ಆಡುವ ಸಾಧ್ಯತೆಗಳಿವೆ.
1 / 6
ಟೀಂ ಇಂಡಿಯಾ ಪರ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಸಂಚಲನ ಮೂಡಿಸಿದ್ದ ಸರ್ಫರಾಜ್ ಖಾನ್ ಇದೀಗ 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ. ವಾಸ್ತವವಾಗಿ ಐಪಿಎಲ್ ಮಿನಿ ಹರಾಜಿನಲ್ಲಿ ಸರ್ಫರಾಜ್ರನ್ನು ಯಾವ ತಂಡವೂ ಖರೀದಿಸಿರಲಿಲ್ಲ. ಆದರೀಗ ಅವರು ಗುಜರಾತ್ ಪರ ಆಡುವ ಸಾಧ್ಯತೆಗಳಿವೆ.
2 / 6
2023ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಸರ್ಫರಾಜ್ ಅವರನ್ನು 2024 ರ ಹರಾಜಿಗೂ ಮುನ್ನ ಡೆಲ್ಲಿ ಫ್ರಾಂಚೈಸಿ ತಂಡದಿಂದ ಬಿಡುಗಡೆ ಮಾಡಿತ್ತು. ಆದರೆ ಇದೀಗ ಸರ್ಫರಾಜ್ ಖಾನ್ ಗುಜರಾತ್ ಟೈಟಾನ್ಸ್ ತಂಡಕ್ಕೆ ಬದಲಿ ಆಟಗಾರನಾಗಿ ಸೇರಿಕೊಳ್ಳಲಿದ್ದಾರೆ.
3 / 6
ಮಿನಿ ಹರಾಜಿನಲ್ಲಿ 3.6 ಕೋಟಿ ರೂ ನೀಡಿ ಖರೀದಿಸಿದ್ದ ಭಾರತದ ಯುವ ವಿಕೆಟ್ ಕೀಪರ್ ಬ್ಯಾಟರ್ ರಾಬಿನ್ ಮಿಂಜ್ ಕಳೆದ ಕೆಲವು ದಿನಗಳ ಹಿಂದೆ ಬೈಕ್ ಅಪಘಾತಕ್ಕೊಳಗಾಗಿದ್ದರು. ಅಪಘಾತದಲ್ಲಿ ಅವರಿಗೆ ಹೆಚ್ಚಿನ ಗಾಯಗಳಾಗಿಲ್ಲ ಎಂದು ವರದಿಯಾಗಿತ್ತು.
4 / 6
ಹೀಗಾಗಿ ರಾಬಿನ್ ಐಪಿಎಲ್ ಆರಂಭಕ್ಕೂ ಮುನ್ನ ಗುಜರಾತ್ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ರಾಬಿನ್ ಲಭ್ಯತೆಯ ಬಗ್ಗೆ ನಿನ್ನೆ ಮಾಹಿತಿ ನೀಡಿದ್ದ ತಂಡದ ಮುಖ್ಯ ಕೋಚ್ ಆಶಿಸ್ ನೆಹ್ರಾ, ರಾಬಿನ್ ಮಿಂಜ್ ಇಡೀ ಲೀಗ್ನಿಂದ ಹೊರಗುಳಿದಿದ್ದಾರೆ ಎಂದಿದ್ದರು.
5 / 6
ಇದೀಗ ರಾಬಿನ್ ಮಿಂಜ್ ಅಲಭ್ಯತೆಯನ್ನು ಸರಿದೂಗಿಸಲು ನೋಡುತ್ತಿರುವ ಗುಜರಾತ್ ಫ್ರಾಂಚೈಸಿ, ಅವರ ಬದಲಿಗೆ ಸರ್ಫರಾಜ್ ಖಾನ್ರನ್ನು ಕಣಕ್ಕಿಳಿಸಲು ಚಿಂತಿಸುತ್ತಿದೆ ಎಂದು ವರದಿಯಾಗಿದೆ. ಮತ್ತೊಂದೆಡೆ, ಸರ್ಫರಾಜ್ ಖಾನ್ ಕೂಡ ಐಪಿಎಲ್ 2024 ರ ಕರೆಗಾಗಿ ಕಾಯುತ್ತಿದ್ದಾರೆ. ಹರಾಜಿನಲ್ಲಿ ಮಾರಾಟವಾಗದೆ ಉಳಿದ ನಂತರವೂ, ಸರ್ಫರಾಜ್ ಖಾನ್ ಐಪಿಎಲ್‌ನಲ್ಲಿ ಆಡುವ ಭರವಸೆಯನ್ನು ಬಿಟ್ಟಿಲ್ಲ.
6 / 6
ಇತ್ತೀಚೆಗಷ್ಟೇ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಸರ್ಫರಾಜ್ ಖಾನ್ ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡುವ ಅವಕಾಶ ಪಡೆದಿದ್ದರು. ಈ ಸರಣಿಯಲ್ಲಿ ಸರ್ಫರಾಜ್ ಅವರ ಪ್ರದರ್ಶನ ಅತ್ಯುತ್ತಮವಾಗಿತ್ತು. ತಮ್ಮ ಚೊಚ್ಚಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಸರ್ಫರಾಜ್ ಅರ್ಧಶತಕ ಬಾರಿಸಿದ್ದರು.