IPL 2024: ಆರ್​ಸಿಬಿ ಕೈತಪ್ಪಿದ ಸುವರ್ಣಾವಕಾಶ; ಲಕ್ನೋ ಸೇರಿಕೊಂಡ ವಿಂಡೀಸ್ ಮಾರಕ ವೇಗಿ..!

|

Updated on: Feb 10, 2024 | 6:15 PM

IPL 2024: ಐಪಿಎಲ್ ಆರಂಭಕ್ಕೂ ಮುನ್ನ ಇಂಜರಿಗೆ ತುತ್ತಾಗಿ ಇಡೀ ಟೂರ್ನಿಯಿಂದಲೇ ಹೊರಬಿದ್ದಿರುವ ಲಕ್ನೋ ತಂಡದ ಸ್ಟಾರ್ ವೇಗದ ಬೌಲರ್ ಮಾರ್ಕ್ ವುಡ್ ಬದಲಿಗೆ ವೆಸ್ಟ್ ಇಂಡೀಸ್ ತಂಡದ ಉದಯೋನ್ಮುಖ ಪ್ರತಿಭೆ ಗಬ್ಬಾ ಟೆಸ್ಟ್ ಗೆಲುವಿನ ರೂವಾರಿ ಶಮರ್ ಜೋಸೆಫ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

1 / 6
17 ನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮಿಲಿಯನ್ ಡಾಲರ್ ಟೂರ್ನಿ ಇದೇ ಮಾರ್ಚ್ ನಿಂದ ಮೇ ವರೆಗೆ ನಡೆಯಲಿದೆ. ಇದಕ್ಕಾಗಿ ಎಲ್ಲಾ ಫ್ರಾಂಚೈಸಿಗಳು ಸಿದ್ದತೆಯಲ್ಲಿ ತೊಡಗಿಕೊಂಡಿವೆ. ಈ ನಡುವೆ ಆಟಗಾರರ ಇಂಜುರಿ ಫ್ರಾಂಚೈಸಿಗಳಿಗೆ ಹೊಸ ತಲೆನೋವು ತಂದಿದೆ. ಅದರಂತೆ ಗಾಯಗೊಂಡ ಆಟಗಾರರ ಬದಲಿಗೆ ಹೊಸ ಆಟಗಾರರ ಆಯ್ಕೆಯೂ ನಡೆಯುತ್ತಿದೆ.

2 / 6
ಅದರಂತೆ ಐಪಿಎಲ್ ಆರಂಭಕ್ಕೂ ಮುನ್ನ ಇಂಜರಿಗೆ ತುತ್ತಾಗಿ ಇಡೀ ಟೂರ್ನಿಯಿಂದಲೇ ಹೊರಬಿದ್ದಿರುವ ಲಕ್ನೋ ತಂಡದ ಸ್ಟಾರ್ ವೇಗದ ಬೌಲರ್ ಮಾರ್ಕ್ ವುಡ್ ಬದಲಿಗೆ ವೆಸ್ಟ್ ಇಂಡೀಸ್ ತಂಡದ ಉದಯೋನ್ಮುಖ ಪ್ರತಿಭೆ ಗಬ್ಬಾ ಟೆಸ್ಟ್ ಗೆಲುವಿನ ರೂವಾರಿ ಶಮರ್ ಜೋಸೆಫ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

3 / 6
ವಾಸ್ತವವಾಗಿ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನು ವಿಂಡೀಸ್ ಪಡೆ ಗೆಲ್ಲುವಲ್ಲಿ ಈ ಶಮರ್ ಜೋಸೆಫ್ ಪ್ರಮುಖ ಪಾತ್ರವಹಿಸಿದ್ದರು. ಎರಡನೇ ಇನ್ನಿಂಗ್ಸ್​ನಲ್ಲಿ 7 ವಿಕೆಟ್ ಕಬಳಿಸಿದ್ದ ಜೋಸೆಫ್, ಗಬ್ಬಾದಲ್ಲಿ ವಿಂಡೀಸ್​ಗೆ ಐತಿಹಾಸಿಕ ಗೆಲುವು ತಂದುಕೊಟ್ಟಿದ್ದರು.

4 / 6
ಆ ಬಳಿಕ ಶಮರ್ ಜೋಸೆಫ್​ಗೆ ಐಪಿಎಲ್​ನ ಹಲವು ಫ್ರಾಂಚೈಸಿಗಳು ಗಾಳ ಹಾಕುತ್ತಿವೆ ಎಂದು ವರದಿಯಾಗಿತ್ತು. ಅದರಲ್ಲಿ ಆರ್​ಸಿಬಿ ತಂಡವೂ ಸೇರಿದೆ ಎಂಬ ಸುದ್ದಿಯೂ ಇತ್ತು. ಆದರೀಗ ಯುವ ಮಾರಕ ವೇಗಿಯನ್ನು ತನ್ನ ಬತ್ತಳಿಕೆಗೆ ಹಾಕಿಕೊಳ್ಳುವಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಯಶಸ್ವಿಯಾಗಿದೆ.

5 / 6
ಮೊದಲ ಬಾರಿಗೆ ಐಪಿಎಲ್ ಲೋಕಕ್ಕೆ ಕಾಲಿಟ್ಟಿರುವ ಶಮರ್ ಜೋಸೆಫ್​ರನ್ನು ಲಕ್ನೋ ಫ್ರಾಂಚೈಸಿ 3 ಕೋಟಿ ರೂ.ಗೆ ಖರೀದಿಸಿದೆ. ಇದಕ್ಕೆ ಸಂಬಂಧಿಸಿದ ಪತ್ರಿಕಾ ಪ್ರಕಟಣೆಯನ್ನು ಐಪಿಎಲ್ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ.

6 / 6
ಶಮರ್ ಜೋಸೆಫ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೇವಲ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಈ ಎರಡು ಪಂದ್ಯಗಳ ನಂತರವೇ ಶಮರ್ ಜೋಸೆಫ್ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದು. ಆಡಿದ ಎರಡು ಟೆಸ್ಟ್​ಗಳಲ್ಲಿ 13 ವಿಕೆಟ್ ಪಡೆದರು. ಇದನ್ನು ಹೊರತುಪಡಿಸಿ ಜೋಸೆಫ್, 7 ಪ್ರಥಮ ದರ್ಜೆ ಪಂದ್ಯಗಳಲ್ಲಿ 34 ವಿಕೆಟ್ ಪಡೆದಿದ್ದಾರೆ.