IPL 2024: ಐಪಿಎಲ್ನಲ್ಲಿ ಮಹತ್ವದ ಬದಲಾವಣೆ: ಹೊಸ ನಿಯಮ ಜಾರಿ
TV9 Web | Updated By: ಝಾಹಿರ್ ಯೂಸುಫ್
Updated on:
Dec 20, 2023 | 12:00 PM
IPL 2024: ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯ ಮೂಲಕ ಎರಡೂ ತಂಡಗಳು ತಮ್ಮ ತಂತ್ರ ಮತ್ತು ಅವಶ್ಯಕತೆಗೆ ಅನುಗುಣವಾಗಿ ಪ್ಲೇಯಿಂಗ್ ಇಲೆವೆನ್ನಿಂದ ಒಬ್ಬ ಆಟಗಾರನನ್ನು ಬದಲಿಸಲು ಅವಕಾಶವನ್ನು ನೀಡಲಾಗುತ್ತದೆ. ಆದರೆ ಈ ನಿಯಮವನ್ನು ಬಳಸಲೇಬೇಕೆಂಬ ನಿಯಮವಿಲ್ಲ.
1 / 6
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಗಾಗಿ ವೇದಿಕೆ ಸಿದ್ಧವಾಗಿದೆ. ಪ್ರಸ್ತುತ ಮಾಹಿತಿ ಪ್ರಕಾರ ಮಾರ್ಚ್ 22 ರಿಂದ ಈ ಬಾರಿಯ ಐಪಿಎಲ್ ಶುರುವಾಗಲಿದೆ. ಅದಕ್ಕೂ ಮುನ್ನ ಐಪಿಎಲ್ನಲ್ಲಿನ ಕೆಲ ನಿಯಮಗಳನ್ನು ಬದಲಿಸಲು ಬಿಸಿಸಿಐ ಮುಂದಾಗಿದೆ.
2 / 6
ಅದರಂತೆ ಐಪಿಎಲ್ ಸೀಸನ್ 17 ರಲ್ಲಿ ಬೌಲರ್ಗಳಿಗೆ ಅನುಕೂಲವಾಗುವಂತೆ ಒಂದೇ ಓವರ್ನಲ್ಲಿ 2 ಬೌನ್ಸರ್ ಎಸೆಯಲು ಅವಕಾಶ ನೀಡಲಾಗುತ್ತದೆ. ಈ ಹಿಂದೆ ಒಂದು ಓವರ್ನಲ್ಲಿ ಒಂದೇ ಬೌನ್ಸರ್ ಎಸೆಯಬಹುದಿತ್ತು. 2ನೇ ಬೌನ್ಸರ್ ಅನ್ನು ಅಂಪೈರ್ ನೋ ಬಾಲ್ ಎಂದು ಪರಿಗಣಿಸುತ್ತಿದ್ದರು.
3 / 6
ಆದರೆ ಮುಂದಿನ ಐಪಿಎಲ್ನಲ್ಲಿ ಒಂದೇ ಓವರ್ನಲ್ಲಿ 2 ಬೌನ್ಸರ್ಗಳನ್ನು ಎಸೆಯಲು ಅವಕಾಶವಿರಲಿದೆ. ಈ ಮೂಲಕ ಬ್ಯಾಟ್ಸ್ಮನ್ ಹಾಗೂ ಬೌಲರ್ ನಡುವೆ ಸಮನಾದ ಸ್ಪರ್ಧೆಯನ್ನು ಮೂಡಿಸಲು ಬಿಸಿಸಿಐ ಮುಂದಾಗಿದೆ.
4 / 6
ಇದರ ಜೊತೆಗೆ ಈ ಬಾರಿ ಕೂಡ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಜಾರಿಯಲ್ಲಿರಲಿದೆ. ಅಂದರೆ ಟಾಸ್ ಸಮಯದಲ್ಲಿ ತಂಡಗಳು ಪ್ಲೇಯಿಂಗ್ ಇಲೆವೆನ್ ಘೋಷಿಸುವ ವೇಳೆ, 5 ಆಟಗಾರರನ್ನು ಹೆಸರಿಸಬಹುದು. ಈ 5 ಆಟಗಾರರಲ್ಲಿ, ಯಾವುದೇ ಒಬ್ಬ ಆಟಗಾರನನ್ನು ಪಂದ್ಯದ ಮಧ್ಯದಲ್ಲಿ ಮತ್ತೊಬ್ಬ ಆಟಗಾರನ ಬದಲಿಯಾಗಿ ಆಡಿಸಬಹುದಾಗಿದೆ.
5 / 6
ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯ ಮೂಲಕ ಎರಡೂ ತಂಡಗಳು ತಮ್ಮ ತಂತ್ರ ಮತ್ತು ಅವಶ್ಯಕತೆಗೆ ಅನುಗುಣವಾಗಿ ಪ್ಲೇಯಿಂಗ್ ಇಲೆವೆನ್ನಿಂದ ಒಬ್ಬ ಆಟಗಾರನನ್ನು ಬದಲಿಸಲು ಅವಕಾಶವನ್ನು ನೀಡಲಾಗುತ್ತದೆ. ಆದರೆ ಈ ನಿಯಮವನ್ನು ಬಳಸಲೇಬೇಕೆಂಬ ನಿಯಮವಿಲ್ಲ. ಅಂದರೆ ಇಂತಹದೊಂದು ಆಯ್ಕೆಯನ್ನು ಪ್ರಯೋಗಿಸುವುದು ತಂಡಕ್ಕೆ ಬಿಟ್ಟ ವಿಷಯ.
6 / 6
ಒಟ್ಟಿನಲ್ಲಿ ಈ ಬಾರಿಯ ಐಪಿಎಲ್ನ ಓವರ್ಗಳಲ್ಲಿ 2 ಬೌನ್ಸರ್ಗಳು ಇರುವುದರಿಂದ ಬ್ಯಾಟ್ಸ್ಮನ್ನ ಚಿಂತೆ ಹೆಚ್ಚಾಗಲಿದಂತು ಸತ್ಯ. ಏಕೆಂದರೆ ಈ ಹಿಂದೆ ಒಂದು ಬೌನ್ಸರ್ ಮುಗಿದ ಬಳಿಕ ಮತ್ತೆ ಬೌನ್ಸರ್ ಎಸೆಯುವುದಿಲ್ಲ ಎಂಬುದು ಗೊತ್ತಿರುತ್ತಿತ್ತು. ಆದರೆ ಈ ಬಾರಿ 6 ಎಸೆತಗಳಲ್ಲಿ 2 ಬೌನ್ಸರ್ ಇರುವುದರಿಂದ ಬೌಲರ್ಗಳು ಪರಿಸ್ಥಿತಿಗೆ ತಕ್ಕಂತೆ ಬೌನ್ಸರ್ ಪ್ರಯೋಗಿಸಲಿದ್ದಾರೆ. ಹೀಗಾಗಿ ಅಂತಿಮ ಓವರ್ಗಳ ವೇಳೆ ಪಂದ್ಯವು ರೋಚಕತೆ ಪಡೆಯಲಿರುವುದನ್ನು ನಿರೀಕ್ಷಿಸಬಹುದು.