IPL 2024: 102, 67 ರನ್; ಆರ್​ಸಿಬಿಗೆ ಕಂಟಕವಾದ ಮಾಜಿ ಆರ್​ಸಿಬಿ ಆಟಗಾರರು..!

|

Updated on: Apr 15, 2024 | 9:37 PM

IPL 2024: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ ನಡುವಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್‌ ತಂಡ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 288 ರನ್ ಕಲೆಹಾಕಿದೆ.

1 / 6
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್‌ ನಡುವಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್‌ ತಂಡ 20 ಓವರ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 288 ರನ್ ಕಲೆಹಾಕಿದೆ.

2 / 6
ಹೈದರಾಬಾದ್‌ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಅಭಿಷೇಕ್ ಶರ್ಮಾ ಹಾಗೂ ಟ್ರಾವಿಡ್ ಹೆಡ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದರು. ಈ ಇಬ್ಬರು ಮೊದಲ ವಿಕೆಟ್​ಗೆ 108 ರನ್​ಗಳ ಜೊತೆಯಾಟ ನಡೆಸಿದರು. ಅಲ್ಲದೆ ಪವರ್ ಪ್ಲೇನಲ್ಲಿ ಈ ಇಬ್ಬರು 76 ರನ್ ಕಲೆಹಾಕಿದರು.

3 / 6
ಇದೇ ವೇಳೆ ಟ್ರಾವಿಸ್ ಹೆಡ್ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ನಂತರವೂ ತಣ್ಣಗಾಗದ ಹೆಡ್ ಮೈದಾನದಲ್ಲಿ ಬೌಂಡರಿ ಸಿಕ್ಸರ್​ಗಳ ಮಳೆಗರೆದರು. ಇದರ ಫಲವಾಗಿ ಹೆಡ್ ಕೇವಲ 39 ಎಸೆತಗಳಲ್ಲಿ ಶತಕ ಪೂರೈಸಿದರು.

4 / 6
ಇದು ಐಪಿಎಲ್ ಇತಿಹಾಸದಲ್ಲೇ 4ನೇ ಅತಿ ವೇಗದ ಶತಕ ಎನಿಸಿಕೊಂಡಿತು. ಅಲ್ಲದೆ ಈ ಸೀಸನ್​ನಲ್ಲಿ ಸಿಡಿದ ಮೊದಲ ವೇಗದ ಶತಕ ಎಂಬ ದಾಖಲೆಯನ್ನು ಹೆಡ್ ಸೃಷ್ಟಿಸಿದರು. ಅಂತಿಮವಾಗಿ ಹೆಡ್ 41 ಎಸೆತಗಳಲ್ಲಿ 102 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು.

5 / 6
ಇವರಲ್ಲದೆ ಹೆನ್ರಿಕ್ ಕ್ಲಾಸೆನ್ ಕೂಡ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿ ಕೇವಲ 31 ಎಸೆತಗಳಲ್ಲಿ 2 ಬೌಂಡರಿ ಹಾಗೂ 7 ಸಿಕ್ಸರ್ ಸಹಿತ 67 ರನ್ ಬಾರಿಸಿದರು. ವಾಸ್ತವವಾಗಿ ಆರ್​ಸಿಬಿ ವಿರುದ್ಧ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಈ ಇಬ್ಬರು ಮಾಜಿ ಆರ್​ಸಿಬಿ ಆಟಗಾರರು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ.

6 / 6
ಈ ಇಬ್ಬರ ಜೊತೆಗೆ ಕೊನೆಯಲ್ಲಿ ಸ್ಫೋಟಕ ಇನ್ನಿಂಗ್ಸ್ ಆಡಿದ ಐಡೆನ್ ಮಾರ್ಕ್ರಾಮ್ 17 ಎಸೆತಗಳಲ್ಲಿ 32 ರನ್ ಹಾಗೂ ಅಬ್ದುಲ್ ಸಮದ್ 10 ಎಸೆತಗಳಲ್ಲಿ 37 ರನ್ ಕಲೆಹಾಕಿ ತಂಡ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ಮೊತ್ತ ದಾಖಲಿಸಿದ ದಾಖಲೆ ಸೃಷ್ಟಿಸುವಂತೆ ಮಾಡಿದರು.