IPL 2024: SRH ತಂಡಕ್ಕೆ ಆಘಾತ; ಸ್ಟಾರ್ ಆಲ್‌ರೌಂಡರ್ ಐಪಿಎಲ್​ನಿಂದ ಔಟ್..!

|

Updated on: Mar 31, 2024 | 4:15 PM

IPL 2024: 17ನೇ ಆವೃತ್ತಿಯ ಐಪಿಎಲ್​ನ ಅಬ್ಬರದಿಂದ ಶುರು ಮಾಡಿರುವ ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ಆಲ್‌ರೌಂಡರ್ ವನಿಂದು ಹಸರಂಗ ಇಂಜುರಿಯಿಂದಾಗಿ ಇಡೀ ಲೀಗ್​ನಿಂದಲೇ ಹೊರಬಿದ್ದಿದ್ದಾರೆ.

1 / 6
17ನೇ ಆವೃತ್ತಿಯ ಐಪಿಎಲ್​ನ ಅಬ್ಬರದಿಂದ ಶುರು ಮಾಡಿರುವ ಸನ್‌ರೈಸರ್ಸ್ ಹೈದರಾಬಾದ್‌ ತಂಡಕ್ಕೆ ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ಆಲ್‌ರೌಂಡರ್ ವನಿಂದು ಹಸರಂಗ ಇಂಜುರಿಯಿಂದಾಗಿ ಇಡೀ ಲೀಗ್​ನಿಂದಲೇ ಹೊರಬಿದ್ದಿದ್ದಾರೆ.

2 / 6
ವಾಸ್ತವವಾಗಿ ಕಳೆದ ಆವೃತ್ತಿಯವರೆಗೂ ಆರ್​ಸಿಬಿ ಪರ ಆಡಿದ್ದ ಹಸರಂಗರನ್ನು ಈ ಬಾರಿ ನಡೆದ ಮಿನಿ ಹರಾಜಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ ಫ್ರಾಂಚೈಸಿ ಖರೀದಿಸಿತ್ತು. ಆದರೆ ಇತರೆ ಕಾರಣಗಳಿಂದಾಗಿ ಹಸರಂಗ ಇನ್ನು ಹೈದರಾಬಾದ್‌ ತಂಡವನ್ನು ಸೇರಿಕೊಂಡಿರಲಿಲ್ಲ.

3 / 6
ಆದರೀಗ ವರದಿಯಾಗಿರುವ ಪ್ರಕಾರ ಹಿಮ್ಮಡಿ ಗಾಯದ ಕಾರಣ ಹಸರಂಗ ಈ ಸೀಸನ್‌ನಿಂದ ಹೊರಗುಳಿದಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇದು ಸನ್‌ರೈಸರ್ಸ್ ಹೈದರಾಬಾದ್‌ಗೆ ಕೊಂಚ ಹಿನ್ನಡೆಯನ್ನುಂಟು ಮಾಡಿದೆ. ಏಕೆಂದರೆ ಸೀಸನ್​ನ ದ್ವಿತೀಯಾರ್ಧದಲ್ಲಿ ಪಿಚ್‌ಗಳು ನಿಧಾನಗೊಳ್ಳುವ ನಿರೀಕ್ಷೆಯಿದೆ. ಆ ಸಮಯದಲ್ಲಿ ಹಸರಂಗ ತಂಡಕ್ಕೆ ಎಕ್ಸ್ ಫ್ಯಾಕ್ಟರ್ ಆಗುವ ಸಾಧ್ಯತೆಗಳಿದ್ದವು.

4 / 6
ಹಸರಂಗ ಅಲಭ್ಯತೆಯ ಬಗ್ಗೆ ಹೇಳಿಕೆ ನೀಡಿರುವ ಅವರ ಮ್ಯಾನೇಜರ್, ಹಸರಂಗ ಎಡ ಪಾದದ ಗಾಯದ ತಪಾಸಣೆಗಾಗಿ ಮಾರ್ಚ್ 31 ರಂದು ವಿದೇಶಕ್ಕೆ ಪ್ರಯಾಣಿಸಲಿದ್ದಾರೆ. ತಜ್ಞರ ಸಲಹೆ ಮೇರೆಗೆ ಐಪಿಎಲ್ ತಂಡ ಸೇರುವ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.

5 / 6
ಮೇಲೆ ಹೇಳಿದಂತೆ ಐಪಿಎಲ್ 2024 ರ ಹರಾಜಿನ ಮೊದಲು, ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿಂದು ಹಸರಂಗವನ್ನು ತಂಡದಿಂದ ಬಿಡುಗಡೆ ಮಾಡಿತ್ತು. ಆ ಬಳಿಕ ಹಸರಂಗ ಅವರನ್ನು ಹರಾಜಿನಲ್ಲಿ ಸನ್‌ರೈಸರ್ಸ್ ಅವರ ಮೂಲ ಬೆಲೆ 1.5 ಕೋಟಿಗೆ ಖರೀದಿಸಿತ್ತು. ಇದಕ್ಕೂ ಮೊದಲು 2022ರಲ್ಲಿ ಆರ್​ಸಿಬಿ ಹಸರಂಗರನ್ನು 10.75 ಕೋಟಿ ರೂಪಾಯಿಗೆ ಖರೀದಿಸಿತ್ತು.

6 / 6
ಸನ್ ರೈಸರ್ಸ್ ಹೈದರಾಬಾದ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಅಬ್ದುಲ್ ಸಮದ್, ಅಭಿಷೇಕ್ ಶರ್ಮಾ, ಏಡೆನ್ ಮಾರ್ಕ್ರಾಮ್, ಟ್ರಾವಿಸ್ ಹೆಡ್, ಮಾರ್ಕೊ ಯಾನ್ಸೆನ್, ರಾಹುಲ್ ತ್ರಿಪಾಠಿ, ವಾಷಿಂಗ್ಟನ್ ಸುಂದರ್, ಗ್ಲೆನ್ ಫಿಲಿಪ್ಸ್, ಸನ್ವಿರ್ ಸಿಂಗ್, ಹೆನ್ರಿಚ್ ಕ್ಲಾಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಅಗರ್ವಾಲ್, ಟಿ ನಟರಾಜನ್, ಅನ್ಮೋಲ್ ಸಿಂಗ್, ಮಯಾಂಕ್ ಮಾರ್ಕಂಡೇ, ಉಪೇಂದ್ರ ಸಿಂಗ್ ಯಾದವ್, ಉಮ್ರಾನ್ ಮಲಿಕ್, ನಿತೀಶ್ ಕುಮಾರ್ ರೆಡ್ಡಿ, ಫಜಲ್ಹಕ್ ಫಾರೂಕಿ, ಶಹಬಾಜ್ ಅಹ್ಮದ್, ಜಯದೇವ್ ಉನದ್ಕತ್, ಆಕಾಶ್ ಸಿಂಗ್, ಜೆ ಸುಬ್ರಮಣಿಯನ್.

Published On - 4:15 pm, Sun, 31 March 24