Updated on: Jun 03, 2023 | 11:02 PM
IPL 2024: ಐಪಿಎಲ್ ಸೀಸನ್ 16 ಮುಕ್ತಾಯದ ಬೆನ್ನಲ್ಲೇ ಮತ್ತೊಮ್ಮೆ ಮಹೇಂದ್ರ ಸಿಂಗ್ ಧೋನಿ ತಮ್ಮ ನಿವೃತ್ತಿ ಬಗ್ಗೆಗಿನ ಪ್ರಶ್ನೆಗೆ ಕಾದು ನೋಡುವ ಎಂಬ ಉತ್ತರ ನೀಡಿ ತೆರಳಿದ್ದಾರೆ. ಸಿಎಸ್ಕೆ ತಂಡ ಚಾಂಪಿಯನ್ ಆದ ಬಳಿಕ ಮಾತನಾಡಿದ ಧೋನಿ, ಇನ್ನೂ 8-9 ತಿಂಗಳುಗಳು ಬಾಕಿಯಿದೆ. ಆಮೇಲೆ ನೋಡೋಣ ಎನ್ನುವ ಉತ್ತರ ನೀಡಿದ್ದಾರೆ.
ಹೀಗಾಗಿ ಸಿಎಸ್ಕೆ ತಂಡದ ಕೂಲ್ ಕ್ಯಾಪ್ಟನ್ ಮುಂದಿನ ಸೀಸನ್ನಲ್ಲೂ ಕಣಕ್ಕಿಳಿಯಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ ಧೋನಿ ಫ್ಯಾನ್ಸ್. ಇದಕ್ಕೆ ಮತ್ತೊಂದು ಕಾರಣ ಐಪಿಎಲ್ನಲ್ಲಿರುವ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆ.
ಐಪಿಎಲ್ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆ ಇರುವುದರಿಂದ ಧೋನಿ ಇನ್ನೆರಡು ವರ್ಷಗಳ ಕಾಲ ಆಡುವ ಸಾಧ್ಯತೆಯಿದೆ ಎಂದು ಅನೇಕರು ವಿಶ್ಲೇಷಿಸಿದ್ದಾರೆ. ಆದರೆ ಧೋನಿಯ ವಿಷಯದಲ್ಲಿ ಇಂಪ್ಯಾಕ್ಟ್ ಸಬ್ ಆಯ್ಕೆ ವರ್ಕ್ ಆಗುವುದಿಲ್ಲ ಎಂಬುದು ಬಹುತೇಕ ಖಚಿತ.
ಅಂದರೆ ಧೋನಿ ಸಂಪೂರ್ಣ ಫಿಟ್ನೆಸ್ ಹೊಂದಿದ್ದರೆ ಮಾತ್ರ ಮುಂದಿನ ಸೀಸನ್ನಲ್ಲಿ ಕಣಕ್ಕಿಳಿಯಲಿದ್ದಾರೆ. ಏಕೆಂದರೆ ಸಿಎಸ್ಕೆ ತಂಡಕ್ಕೆ ಎಂಎಸ್ಡಿ ಎಂಬ ಬ್ಯಾಟ್ಸ್ಮನ್ಗಿಂತ ಧೋನಿ ಎನ್ನುವ ನಾಯಕನ ಅವಶ್ಯಕತೆ ಹೆಚ್ಚಿದೆ.
ಅಂದರೆ ಧೋನಿ ಬ್ಯಾಟಿಂಗ್ಗೆ ಇಳಿಯುತ್ತಿರುವುದು ಕೆಳ ಕ್ರಮಾಂಕದಲ್ಲಿ. ಅದರಲ್ಲೂ ಡೆತ್ ಓವರ್ಗಳಲ್ಲಿ ಬ್ಯಾಟ್ ಬೀಸಲು ಆಗಮಿಸುವ ಎಂಎಸ್ಡಿ ಎದುರಿಸುವುದು ಒಂದೆರೆಡು ಓವರ್ಗಳನ್ನು ಮಾತ್ರ. ಅಂದರೆ ಧೋನಿ ಬ್ಯಾಟಿಂಗ್ಗೆ ಇಳಿಯುತ್ತಿರುವುದು ಕೆಳ ಕ್ರಮಾಂಕದಲ್ಲಿ. ಅದರಲ್ಲೂ ಡೆತ್ ಓವರ್ಗಳಲ್ಲಿ ಬ್ಯಾಟ್ ಬೀಸಲು ಆಗಮಿಸುವ ಎಂಎಸ್ಡಿ ಎದುರಿಸುವುದು ಒಂದೆರೆಡು ಓವರ್ಗಳನ್ನು ಮಾತ್ರ.
ಇಲ್ಲಿ ಸಿಎಸ್ಕೆ ತಂಡಕ್ಕೆ ಧೋನಿ ನಾಯಕನಾಗಿ ಕಾಣಿಸಿಕೊಳ್ಳಬೇಕಾದ ಅನಿವಾರ್ಯತೆ ಹೆಚ್ಚಿದೆ. ಹೀಗಾಗಿ ಬ್ಯಾಟಿಂಗ್ ವೇಳೆ ಧೋನಿ ಜಾಗದಲ್ಲಿ ಇಂಪ್ಯಾಕ್ಟ್ ಪ್ಲೇಯರ್ನನ್ನು ಕಣಕ್ಕಿಳಿಸಬೇಕಾಗುತ್ತದೆ.ಇಲ್ಲಿ ಸಿಎಸ್ಕೆ ತಂಡಕ್ಕೆ ಧೋನಿ ನಾಯಕನಾಗಿ ಕಾಣಿಸಿಕೊಳ್ಳಬೇಕಾದ ಅನಿವಾರ್ಯತೆ ಹೆಚ್ಚಿದೆ. ಹೀಗಾಗಿ ಬ್ಯಾಟಿಂಗ್ ವೇಳೆ ಧೋನಿ ಜಾಗದಲ್ಲಿ ಇಂಪ್ಯಾಕ್ಟ್ ಪ್ಲೇಯರ್ನನ್ನು ಕಣಕ್ಕಿಳಿಸಬೇಕಾಗುತ್ತದೆ.
ಆದರೆ ಒಂದೆರೆಡು ಓವರ್ಗಳ ಕಾಲ ಬ್ಯಾಟಿಂಗ್ ಮಾಡಲು ಫಿಟ್ನೆಸ್ ಹೊಂದಿಲ್ಲದಿದ್ದರೆ ಧೋನಿ ವಿಕೆಟ್ ಕೀಪರ್ ಆಗಿ ಕಾಣಿಸಿಕೊಳ್ಳುವುದು ಅನುಮಾನ. ಅದರಲ್ಲೂ ನಾಯಕನಾಗಿ 20 ಓವರ್ಗಳ ಕಾಲ ಅವರು ಮೈದಾನದಲ್ಲಿರಬೇಕಾಗುತ್ತದೆ.
ಅಂದರೆ ಒಂದೆರೆಡು ಓವರ್ಗಳ ಕಾಲ ಬ್ಯಾಟ್ ಬೀಸಲು ಫಿಟ್ನೆಸ್ ಹೊಂದಿದ್ದರೆ ಧೋನಿ ಖಂಡಿತವಾಗಿಯೂ ಅವರು ಮತ್ತೆ ಸಿಎಸ್ಕೆ ಪರ ಕಣಕ್ಕಿಳಿಯಲಿದ್ದಾರೆ. ಇದರ ಹೊರತಾಗಿ ಅವರು ಇಂಪ್ಯಾಕ್ಟ್ ಪ್ಲೇಯರ್ ಆಯ್ಕೆಯ ಮೂಲಕ ಕಣಕ್ಕಿಳಿಯುವುದು ಅನುಮಾನ.
ಏಕೆಂದರೆ ಮೊದಲೇ ಹೇಳಿದಂತೆ ಸಿಎಸ್ಕೆ ತಂಡಕ್ಕೆ ಬ್ಯಾಟ್ಸ್ಮನ್ಗಿಂತ ಚಾಣಾಕ್ಷ ನಾಯಕತ್ವದ ಧೋನಿಯ ಅಗತ್ಯತೆ ಹೆಚ್ಚು. ಹೀಗಾಗಿ 20 ಓವರ್ಗಳ ಕಾಲ ವಿಕೆಟ್ ಕೀಪಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದರೆ ಮತ್ತೊಮ್ಮೆ ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.
ಇಲ್ಲದಿದ್ದರೆ ಅವರೇ ಹೇಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಡಗೌಟ್ನಲ್ಲಿ ಹೊಸ ಜವಾಬ್ದಾರಿಯೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.