IPL 2025: ಐಪಿಎಲ್ ಕೋಟಿ ಕೋಟಿ ಆಫರ್ ತಿರಸ್ಕರಿಸಿದ ಇಂಗ್ಲೆಂಡ್ ಆಟಗಾರ

|

Updated on: Mar 30, 2025 | 9:54 AM

IPL 2025: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಮೆಗಾ ಹರಾಜಿನಲ್ಲಿ ಇಂಗ್ಲೆಂಡ್ ತಂಡದ ಎಡಗೈ ದಾಂಡಿಗ ಬೆನ್ ಡಕೆಟ್ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಸಿಕ್ಕ ಅವಕಾಶವನ್ನು ಅವರು ತಿರಸ್ಕರಿಸಿ ಅಚ್ಚರಿ ಮೂಡಿಸಿದ್ದಾರೆ.

1 / 5
IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಒಂದೇ ಒಂದು ಅವಕಾಶ ಎದುರು ನೋಡುತ್ತಿರುವ ಆಟಗಾರರ ಮಧ್ಯೆ ಇಂಗ್ಲೆಂಡ್ ದಾಂಡಿಗ ಬೆನ್ ಡಕೆಟ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅದು ಕೂಡ ಕೋಟಿ ಕೋಟಿ ರೂ. ಡೀಲ್ ಅನ್ನು ತಿರಸ್ಕರಿಸುವ ಮೂಲಕ ಎಂದರೆ ನಂಬಲೇಬೇಕು.

2 / 5
ಈ ಬಾರಿಯ ಐಪಿಎಲ್​ನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರ ಹ್ಯಾರಿ ಬ್ರೂರಿ ಹಿಂದೆ ಸರಿದಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್​ನತ್ತ ಹೆಚ್ಚಿನ ಗಮನ ಕೇಂದ್ರೀಕರಿಸುವ ಸಲುವಾಗಿ ಐಪಿಎಲ್​ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಎಂದು ಬ್ರೂಕ್ ಸ್ಪಷ್ಟನೆಯನ್ನು ಸಹ ನೀಡಿದ್ದರು.

3 / 5
ಇತ್ತ ಹ್ಯಾರಿ ಬ್ರೂಕ್ ಹೊರಗುಳಿಯುತ್ತಿದ್ದಂತೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ಇಂಗ್ಲೆಂಡ್ ತಂಡದ ಆರಂಭಿಕ ದಾಂಡಿಗ ಬೆನ್ ಡಕೆಟ್ ಅನ್ನು ಸಂಪರ್ಕಿಸಿದೆ. ಅಲ್ಲದೆ ಬದಲಿ ಆಟಗಾರನಾಗಿ ಐಪಿಎಲ್​ಗೆ ಬರುವಂತೆ ಕೋಟಿ ಮೊತ್ತದ ಆಫರ್​ ಅನ್ನು ಸಹ ನೀಡಿದ್ದಾರೆ. ಆದರೆ ಈ ಆಫರ್ ಅನ್ನು ಅವರು ತಿರಸ್ಕರಿಸಿದ್ದಾರೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಬಹಿರಂಗಪಡಿಸಿದ್ದಾರೆ.

4 / 5
ಬೆನ್ ಡಕೆಟ್ ಅವರನ್ನು ಐಪಿಎಲ್​ಗೆ ಕರೆತರಲು ಡೆಲ್ಲಿ ಕ್ಯಾಪಿಟಲ್ಸ್ ತೆರೆಮರೆಯ ಪ್ರಯತ್ನ ನಡೆಸಿದ್ದಾರೆ. ಆದರೆ ಅವರು ಈ ಆಫರ್ ಅನ್ನು ಸ್ವೀಕರಿಸಿಲ್ಲ. ಕುತೂಹಲಕಾರಿ ವಿಷಯ ಎಂದರೆ ಡಕೆಟ್ ಈ ಹಿಂದೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು. ಇದಾಗ್ಯೂ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಇದೀಗ ಆಫರ್ ಸಿಕ್ಕರೂ ಅವರು ಬರದಿರುವುದೇ ಅಚ್ಚರಿ ಮೂಡಿಸಿದೆ ಎಂದು ಮೈಕಲ್ ವಾನ್ ಹೇಳಿದ್ದಾರೆ.

5 / 5
ಇತ್ತ ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಿ ವಾರಗಳು ಕಳೆದರೂ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಇನ್ನೂ ಸಹ ಹ್ಯಾರಿ ಬ್ರೂಕ್ ಅವರ ಬದಲಿ ಆಟಗಾರನನ್ನು ಘೋಷಿಸಿಲ್ಲ. ಅತ್ತ ಕಡೆ ಬೆನ್ ಡಕೆಟ್ ಆಫರ್ ತಿರಸ್ಕರಿಸಿರುವ ಪರಿಣಾಮ, ಬದಲಿ ಆಟಗಾರನ ಹುಡುಕಾಟಕ್ಕೆ ಮುಂದಾಗಿರುವ ಸಾಧ್ಯತೆಯಿದೆ. ಹೀಗಾಗಿ ಬ್ರೂಕ್ ಸ್ಥಾನದಲ್ಲಿ ಡೆಲ್ಲಿ ಪಡೆಗೆ ಎಂಟ್ರಿ ಕೊಡುವವರು ಯಾರು ಎಂಬುದೇ ಈಗ ಕುತೂಹಲ.