IPL 2025: 10 ಪಂದ್ಯಗಳಲ್ಲೇ CSK ತಂಡ ಗಂಟುಮೂಟೆ ಕಟ್ಟಿದ್ಯಾಕೆ ಗೊತ್ತಾ?

Updated on: May 01, 2025 | 11:22 AM

IPL 2025: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ( ಐಪಿಎಲ್ 2025 ) ಚೆನ್ನೈ ಸೂಪರ್ ಕಿಂಗ್ಸ್ ತಂಡವು ಈವರೆಗೆ 10 ಪಂದ್ಯಗಳನ್ನಾಡಿದೆ. ಈ ವೇಳೆ ಗೆದ್ದಿರುವುದು ಕೇವಲ 2 ಮ್ಯಾಚ್​ಗಳಲ್ಲಿ ಮಾತ್ರ. ಇನ್ನುಳಿದ 8 ಪಂದ್ಯಗಳಲ್ಲಿ ಸೋತಿರುವ ಸಿಎಸ್​ಕೆ ತಂಡವು ಕೇವಲ 4 ಅಂಕಗಳನ್ನು ಮಾತ್ರ ಪಡೆದುಕೊಂಡಿದೆ.

1 / 6
IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-18 ರಿಂದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಹೊರಬಿದ್ದಿದೆ. ಅದು ಕೂಡ 10 ಪಂದ್ಯಗಳ ಮುಕ್ತಾಯದ ಬೆನ್ನಲ್ಲೇ ಎಂಬುದು ವಿಶೇಷ. ಅಂದರೆ 10 ತಂಡಗಳಲ್ಲಿ ಯಾವುದೇ ತಂಡದ ಪ್ಲೇಆಫ್​​ಗೆ ಪ್ರವೇಶಿಸದಿದ್ದರೂ, ಇತ್ತ ಸಿಎಸ್​ಕೆ ತಂಡವು ಪ್ಲೇಆಫ್ ರೇಸ್​​ನಿಂದ ಹೊರಬಿದ್ದಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-18 ರಿಂದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಹೊರಬಿದ್ದಿದೆ. ಅದು ಕೂಡ 10 ಪಂದ್ಯಗಳ ಮುಕ್ತಾಯದ ಬೆನ್ನಲ್ಲೇ ಎಂಬುದು ವಿಶೇಷ. ಅಂದರೆ 10 ತಂಡಗಳಲ್ಲಿ ಯಾವುದೇ ತಂಡದ ಪ್ಲೇಆಫ್​​ಗೆ ಪ್ರವೇಶಿಸದಿದ್ದರೂ, ಇತ್ತ ಸಿಎಸ್​ಕೆ ತಂಡವು ಪ್ಲೇಆಫ್ ರೇಸ್​​ನಿಂದ ಹೊರಬಿದ್ದಿದೆ.

2 / 6

ಪ್ರಸ್ತುತ ಅಂಕ ಪಟ್ಟಿಯಲ್ಲಿ 3ನೇ ಮತ್ತು 4ನೇ ಸ್ಥಾನಗಳಲ್ಲಿರುವ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ತಲಾ 12 ಅಂಕಗಳನ್ನು ಹೊಂದಿದೆ. ಅತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಂದಿನ 4 ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೆ 12 ಅಂಕಗಳನ್ನು ಪಡೆಯಬಹುದು.

3 / 6

ಇದಾಗ್ಯೂ ಸಿಎಸ್​ಕೆ ತಂಡವು ಕೇವಲ 10 ಪಂದ್ಯಗಳಲ್ಲೇ ಎಲಿಮಿನೇಟರ್ ಆಗಲು ಮುಖ್ಯ ಕಾರಣ ಮುಂಬೈ ಇಂಡಿಯನ್ಸ್,  ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಮುಂದಿನ ಪಂದ್ಯಗಳು. ಮೇ 6 ರಂದು ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ 14 ಅಂಕಗಳನ್ನು ಪಡೆಯುವುದು ಖಚಿತ.

4 / 6

ಹಾಗೆಯೇ ಮೇ 11 ರಂದು ಗುಜರಾತ್ ಟೈಟಾನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಮ್ಯಾಚ್​ನಲ್ಲಿ ಗೆಲ್ಲುವ ತಂಡಗಳ ಪಾಯಿಂಟ್ಸ್ ಕೂಡ 14 ಆಗಲಿದೆ. ಅಂದರೆ ಮೇ 6 ರಂದು ಮುಂಬೈ ಗೆದ್ದರೆ  ತಂಡದ ಪಾಯಿಂಟ್ಸ್​ 14 ಆಗಲಿದೆ. ಇನ್ನು ಗುಜರಾತ್ ಟೈಟಾನ್ಸ್. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದರೆ ಅಥವಾ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್ ವಿರುದ್ಧ 14 ಅಂಕಗಳನ್ನು ಪಡೆಯಲಿದೆ.

5 / 6

ಇನ್ನು ಮೇ. 15 ರಂದು ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯದಲ್ಲಿ ಯಾರೇ ಗೆದ್ದರೂ ಸಹ ತಂಡದ ಪಾಯಿಂಟ್ಸ್ 14 ಕ್ಕೇರಲಿದೆ. ಅಂದರೆ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ಪಂದ್ಯಗಳಿಂದಾಗಿ ಎರಡು ತಂಡಗಳು 14 ಅಂಕಗಳನ್ನು ಪಡೆಯುವುದು ಖಚಿತ.

6 / 6

ಈ ಮೂಲಕ ಪಾಯಿಂಟ್ಸ್ ಟೇಬಲ್​ನಲ್ಲಿರುವ ಟಾಪ್-4 ತಂಡಗಳ ಅಂಕಗಳು 13 ದಾಟಲಿದೆ.  ಇತ್ತ ಚೆನ್ನೈ ಸೂಪರ್ ಕಿಂಗ್ಸ್​ ತಂಡವು ಮುಂದಿನ ಎಲ್ಲಾ ಪಂದ್ಯಗಳನ್ನು ಗೆದ್ದರೂ 12 ಅಂಕಗಳನ್ನು ಮಾತ್ರ ಪಡೆಯಲಿದೆ. ಹೀಗಾಗಿಯೇ ಸಿಎಸ್​ಕೆ ತಂಡದ 4 ಪಂದ್ಯಗಳು ಬಾಕಿಯಿದ್ದರೂ ಧೋನಿ ಪಡೆ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿದೆ. ಇದರೊಂದಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟ್ರೋಫಿ ಗೆಲ್ಲುವ ಕನಸು ಕೂಡ ಕಮರಿದೆ.

Published On - 7:37 am, Thu, 1 May 25

Loading...
Unable to load recommendations.
Follow Us