IPL 2025: KKR ತಂಡದಿಂದ ಆ್ಯಂಡ್ರೆ ರಸೆಲ್ ಔಟ್?
IPL 2025: ಅ್ಯಂಡ್ರೆ ರಸೆಲ್ 2014 ರಿಂದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದಾರೆ. ಇದೀಗ ಹೊಸ ತಂಡ ಕಟ್ಟುವ ಇರಾದೆಯಲ್ಲಿರುವ ಕೆಕೆಆರ್ ಫ್ರಾಂಚೈಸಿ ಹಿರಿಯ ಆಟಗಾರರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಪಟ್ಟಿಯಲ್ಲಿ ಆ್ಯಂಡ್ರೆ ರಸೆಲ್ ಹೆಸರು ಕೂಡ ಇದೆ ಎಂದು ವರದಿಯಾಗಿದೆ.
1 / 5
ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಚಾಂಪಿಯನ್ ಆಟಗಾರ ಆ್ಯಂಡ್ರೆ ರಸೆಲ್ ಹೊರಬರಲಿದ್ದಾರಾ? ಈ ಪ್ರಶ್ನೆಗೆ ಸದ್ಯ ಉತ್ತರ... ಕೆಕೆಆರ್ ರಸೆಲ್ ಅವರನ್ನು ರಿಟೈನ್ ಮಾಡಿಕೊಳ್ಳುತ್ತಿಲ್ಲ ಎಂಬುದು. ಅಂದರೆ ಮೆಗಾ ಹರಾಜಿಗೂ ಮುನ್ನ ಕೊಲ್ಕತ್ತಾ ನೈಟ್ ರೈಡರ್ಸ್ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯಲ್ಲಿ ಆ್ಯಂಡ್ರೆ ರಸೆಲ್ ಹೆಸರಿಲ್ಲ ಎಂದು ವರದಿಯಾಗಿದೆ.
2 / 5
ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಯುವ ಆಟಗಾರರನ್ನು ತಂಡದಲ್ಲೇ ಉಳಿಸಿಕೊಳ್ಳಲು ಬಯಸಿದ್ದು, ಹೀಗಾಗಿ 36 ವರ್ಷದ ಹಿರಿಯ ಆಲ್ರೌಂಡರ್ ಆ್ಯಂಡ್ರೆ ರಸೆಲ್ ಅವರನ್ನು ರಿಲೀಸ್ ಮಾಡಲು ನಿರ್ಧರಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ ಇಲ್ಲಿ ರಸೆಲ್ ಅವರನ್ನು ನೇರವಾಗಿ ಬಿಡುಗಡೆ ಮಾಡಲಿದೆಯಾ ಎಂಬುದೇ ಪ್ರಶ್ನೆ.
3 / 5
ಏಕೆಂದರೆ ಈ ಬಾರಿಯ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್ಟಿಎಂ ಆಯ್ಕೆ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಅಂದರೆ ಇಲ್ಲಿ 5 ಆಟಗಾರರನ್ನು ಉಳಿಸಿಕೊಂಡರೆ ಒಬ್ಬ ಆಟಗಾರನ ಮೇಲೆ ಆರ್ಟಿಎಂ ಆಯ್ಕೆಯನ್ನು ಬಳಸಿಕೊಳ್ಳಬಹುದು. ಅದೇ ರೀತಿ ನಾಲ್ವರನ್ನು ರಿಟೈನ್ ಮಾಡಿಕೊಂಡರೆ ಇಬ್ಬರು, ಮೂವರನ್ನು ಉಳಿಸಿಕೊಂಡರೆ, ಮೂವರು ಆಟಗಾರರ ಮೇಲೆ ಆರ್ಟಿಎಂ ಆಯ್ಕೆಯನ್ನು ಬಳಸಿಕೊಳ್ಳಬಹುದು.
4 / 5
ಹೀಗೆ ಆರ್ಟಿಎಂ ಬಳಸಿ ಬಿಡುಗಡೆ ಮಾಡಲಾದ ಆಟಗಾರರನ್ನು ಮೆಗಾ ಹರಾಜಿನ ಮೂಲಕ ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬಹುದು. ಅಂದರೆ ಇಲ್ಲಿ ರಸೆಲ್ ಅವರನ್ನು ಕೆಕೆಆರ್ ಆರ್ಟಿಎಂ ಮೂಲಕ ರಿಲೀಸ್ ಮಾಡಿ, ಹರಾಜಿನಲ್ಲಿ ಸಿಎಸ್ಕೆ ತಂಡವು 10 ಕೋಟಿ ರೂ.ಗೆ ರಸೆಲ್ ಅವರನ್ನು ಖರೀದಿಸಿದರೆ ಆ ಮೊತ್ತವನ್ನು ನಾವೇ ನೀಡುತ್ತೇವೆ ಎಂದು ಕೊಲ್ಕತ್ತಾ ನೈಟ್ ರೈಡರ್ಸ್ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಬಹುದು.
5 / 5
ಈ ಆಯ್ಕೆಯನ್ನು ಬಳಸಿಕೊಳ್ಳಲು ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಆ್ಯಂಡ್ರೆ ರಸೆಲ್ ಅವರನ್ನು ಆರ್ಟಿಎಂ ಆಯ್ಕೆಯಡಿಯಲ್ಲಿ ಬಿಡುಗಡೆ ಮಾಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ. ಒಂದು ವೇಳೆ ರಸೆಲ್ ಐಪಿಎಲ್ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡರೆ ಒಂದಷ್ಟು ಫ್ರಾಂಚೈಸಿಗಳು ಅವರ ಖರೀದಿಗಾಗಿ ಪೈಪೋಟಿ ನಡೆಸುವುದಂತು ಖಚಿತ. ಹೀಗಾಗಿಯೇ ಕೆಲ ಫ್ರಾಂಚೈಸಿಗಳು ಮೆಗಾ ಆಕ್ಷನ್ಗೆ ವಿಂಡೀಸ್ ಆಲ್ರೌಂಡರ್ನ ಆಗಮನವನ್ನು ಎದುರು ನೋಡುತ್ತಿದೆ.