IPL 2025: ಗ್ಲೆನ್ ಮ್ಯಾಕ್ಸ್ವೆಲ್ ಮೇಲೆ CSK ಕಣ್ಣು..!
Glenn Maxwell: ಗ್ಲೆನ್ ಮ್ಯಾಕ್ಸ್ವೆಲ್ ಆರ್ಸಿಬಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದರು 2021 ರಲ್ಲಿ. ಮೊದಲ ಸೀಸನ್ನಲ್ಲೇ ಭರ್ಜರಿ ಪ್ರದರ್ಶನ ನೀಡಿದ್ದ ಮ್ಯಾಕ್ಸ್ವೆಲ್ 15 ಪಂದ್ಯಗಳಿಂದ 513 ರನ್ ಕಲೆಹಾಕಿದ್ದರು. ಇದೇ ವೇಳೆ 6 ಅರ್ಧಶತಕಗಳನ್ನು ಸಹ ಸಿಡಿಸಿದ್ದರು. ಆದರೆ ಕಳೆದ ಸೀಸನ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ 10 ಪಂದ್ಯಗಳಿಂದ ಕಲೆಹಾಕಿದ್ದು ಕೇವಲ 52 ರನ್ಗಳು ಮಾತ್ರ. ಹೀಗಾಗಿಯೇ ಈ ಬಾರಿ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಆರ್ಸಿಬಿ ರಿಲೀಸ್ ಮಾಡುವ ಸಾಧ್ಯತೆಯಿದೆ.
1 / 5
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಗ್ಲೆನ್ ಮ್ಯಾಕ್ಸ್ವೆಲ್ ಗುಡ್ ಬೈ ಹೇಳುವ ಸಾಧ್ಯತೆಯಿದೆ. ಇದನ್ನು ಪುಷ್ಠೀಕರಿಸುವಂತೆ ಮ್ಯಾಕ್ಸ್ವೆಲ್ ಸೋಷಿಯಲ್ ಮೀಡಿಯಾದಲ್ಲಿ ಆರ್ಸಿಬಿ ತಂಡವನ್ನು ಅನ್ಫಾಲೋ ಮಾಡಿದ್ದಾರೆ.
2 / 5
ಇತ್ತ ಆರ್ಸಿಬಿ ತಂಡದಿಂದ ಗ್ಲೆನ್ ಮ್ಯಾಕ್ಸ್ವೆಲ್ ಹೊರಬೀಳಲಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ ಅತ್ತ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಆಸೀಸ್ ಆಲ್ರೌಂಡರ್ನ ಖರೀದಿಗೆ ಆಸಕ್ತಿ ಹೊಂದಿದೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ 2021ರಲ್ಲಿ ಕಂಡು ಬಂದ ಹರಾಜು ಪೈಪೋಟಿ. ಅಂದು ಮ್ಯಾಕ್ಸ್ವೆಲ್ಗಾಗಿ ಸಿಎಸ್ಕೆ ಭಾರೀ ಬಿಡ್ಡಿಂಗ್ ನಡೆಸಿತ್ತು.
3 / 5
2021ರ ಹರಾಜಿನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಹೆಸರು ಕೂಗುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್ ಬಿಡ್ಡಿಂಗ್ ಆರಂಭಿಸಿತ್ತು. ಇದರ ನಡುವೆ ಎಂಟ್ರಿ ಕೊಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಪೈಪೋಟಿ ನೀಡಿತು. ಉಭಯ ಫ್ರಾಂಚೈಸಿಗಳ ನಡುವಣ ಜಿದ್ದಾಜಿದ್ದಿನ ಪೈಪೋಟಿಯಿಂದಾಗಿ ಮ್ಯಾಕ್ಸ್ವೆಲ್ ಅವರ ಮೊತ್ತವು 10 ಕೋಟಿ ರೂ. ದಾಟಿದೆ.
4 / 5
ಇದಾಗ್ಯೂ ಸಿಎಸ್ಕೆ ಫ್ರಾಂಚೈಸಿ ಮ್ಯಾಕ್ಸ್ವೆಲ್ ಅವರನ್ನು ಬಿಟ್ಟು ಕೊಡಲು ಸಿದ್ಧರಿರಲಿಲ್ಲ. ಅಂತಿಮವಾಗಿ 13.75 ಕೋಟಿವರೆಗೂ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಬಿಡ್ ಮಾಡಿತು. ಕೊನೆಗೆ 14 ಕೋಟಿಯೊಂದಿಗೆ ಮ್ಯಾಕ್ಸಿಯನ್ನು ಖರೀದಿಸುವಲ್ಲಿ ಆರ್ಸಿಬಿ ಯಶಸ್ವಿಯಾಯಿತು. ಅಂದರೆ ಸಿಎಸ್ಕೆ ಫ್ರಾಂಚೈಸಿಯು ಆಸ್ಟ್ರೇಲಿಯಾ ಆಟಗಾರನಿಗಾಗಿ ಬರೋಬ್ಬರಿ 13.75 ಕೋಟಿ ರೂ. ನೀಡಲು ಮುಂದಾಗಿತ್ತು ಎಂಬುದು ಇಲ್ಲಿ ಉಲ್ಲೇಖಾರ್ಹ.
5 / 5
ಹೀಗಾಗಿಯೇ ಈ ಬಾರಿಯ ಮೆಗಾ ಹರಾಜಿನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಕಾಣಿಸಿಕೊಂಡರೆ ಸಿಎಸ್ಕೆ ಬಿಡ್ಡಿಂಗ್ ನಡೆಸುವುದು ಖಚಿತ ಎನ್ನಲಾಗುತ್ತಿದೆ. ಅಲ್ಲದೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಉತ್ತಮ ಆಲ್ರೌಂಡರ್ನ ಅಗತ್ಯತೆ ಕೂಡ ಇದ್ದು, ಹಾಗಾಗಿ ಮೆಗಾ ಆಕ್ಷನ್ ಮೂಲಕ ಗ್ಲೆನ್ ಮ್ಯಾಕ್ಸ್ವೆಲ್ ಯೆಲ್ಲೋ ಆರ್ಮಿ ಪಾಲಾದರೂ ಅಚ್ಚರಿಪಡಬೇಕಿಲ್ಲ.
Published On - 11:58 am, Mon, 19 August 24