RCB ಉಳಿಸಿಕೊಂಡ ಆರು ಆಟಗಾರರು ಯಾರೆಲ್ಲಾ ಗೊತ್ತಾ?
IPL 2025: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಮೆಗಾ ಹರಾಜಿಗೂ ಮುನ್ನ ಒಟ್ಟು 6 ಆಟಗಾರರನ್ನು ರಿಟೈನ್ ಮಾಡಿಕೊಳ್ಳಬಹುದು. ಹೀಗೆ ಆರು ಆಟಗಾರರನ್ನು ರಿಟೈನ್ ಮಾಡಲು ಬಯಸಿದರೆ ಹರಾಜು ಮೊತ್ತದಿಂದ 79 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಹಾಗೆಯೇ ಐವರನ್ನು ಉಳಿಸಿಕೊಳ್ಳಲು ಬಯಸಿದರೆ 75 ಕೋಟಿ ರೂ. ಖರ್ಚು ಮಾಡಬೇಕಾಗುತ್ತದೆ.
1 / 6
ಐಪಿಎಲ್ ಇತಿಹಾಸದಲ್ಲಿ ಮೆಗಾ ಹರಾಜು ನಡೆದಿರುವುದು ಕೇವಲ ನಾಲ್ಕು ಬಾರಿ ಮಾತ್ರ. ಈ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಉಳಿಸಿಕೊಂಡಿದ್ದು ಕೇವಲ ಆರು ಆಟಗಾರರನ್ನು ಮಾತ್ರ. ಇವರಲ್ಲಿ ಆರ್ಸಿಬಿ ತಂಡದ ಮೊದಲ ರಿಟೈನ್ ಆಟಗಾರ ವಿರಾಟ್ ಕೊಹ್ಲಿ ಎಂಬುದು ವಿಶೇಷ.
2 / 6
2011 ರಲ್ಲಿ ನಡೆದ ಮೊದಲ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ವಿರಾಟ್ ಕೊಹ್ಲಿಯನ್ನು ಮಾತ್ರ ರಿಟೈನ್ ಮಾಡಿಕೊಂಡಿತ್ತು. ಅಂದು ಆರ್ಸಿಬಿ 8.20 ಕೋಟಿ ರೂ. ನೀಡಿ ಕಿಂಗ್ ಕೊಹ್ಲಿಯನ್ನು ತಂಡದಲ್ಲೇ ಉಳಿಸಿಕೊಳ್ಳಲು ಯಶಸ್ವಿಯಾಗಿದ್ದರು.
3 / 6
ಇದಾದ ಬಳಿಕ ಮೆಗಾ ಹರಾಜು ನಡೆದಿದ್ದು 2014 ರಲ್ಲಿ. ಈ ಹರಾಜಿಗೂ ಮುನ್ನ ಆರ್ಸಿಬಿ ಮೂವರು ಆಟಗಾರರನ್ನು ರಿಟೈನ್ ಮಾಡಿಕೊಂಡಿತ್ತು. ಹೀಗೆ ರಿಟೈನ್ ಆದ ಆಟಗಾರರೆಂದರೆ ವಿರಾಟ್ ಕೊಹ್ಲಿ, ಕ್ರಿಸ್ ಗೇಲ್ ಹಾಗೂ ಎಬಿ ಡಿವಿಲಿಯರ್ಸ್. ಅಂದು ಆರ್ಸಿಬಿ ಕೊಹ್ಲಿಗೆ 12.50 ಕೋಟಿ ರೂ. ನೀಡಿದರೆ, ಕ್ರಿಸ್ ಗೇಲ್ಗೆ 7.50 ಕೋಟಿ ರೂ. ಹಾಗೂ ಎಬಿಡಿಗೆ 9.50 ಕೋಟಿ ರೂ. ಪಾವತಿಸಿದ್ದರು.
4 / 6
ಇನ್ನು ಮೂರನೇ ಮೆಗಾ ಹರಾಜು ನಡೆದದ್ದು 2018 ರಲ್ಲಿ. ಈ ಮೆಗಾ ಆಕ್ಷನ್ಗೂ ಮುನ್ನ ಆರ್ಸಿಬಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಹಾಗೂ ಸರ್ಫರಾಝ್ ಖಾನ್ ಅವರನ್ನು ತಂಡದಲ್ಲೇ ಉಳಿಸಿಕೊಂಡಿದ್ದರು. ಅಂದು ಕೊಹ್ಲಿ 17 ಕೋಟಿ ರೂ. ಪಡೆದರೆ, ಡಿವಿಲಿಯರ್ಸ್ಗೆ 11 ಕೋಟಿ ರೂ. ನೀಡಲಾಗಿತ್ತು. ಹಾಗೆಯೇ ಸರ್ಫರಾಝ್ ಖಾನ್ಗೆ 3 ಕೋಟಿ ರೂ. ನೀಡಲಾಗಿತ್ತು.
5 / 6
2022 ರಲ್ಲಿ ನಡೆದ ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ರಿಟೈನ್ ಮಾಡಿಕೊಂಡಿದ್ದರು. ಈ ವೇಳೆ ಕೊಹ್ಲಿಗೆ ನೀಡಲಾದ ಮೊತ್ತ 15 ಕೋಟಿ ರೂ. ಇನ್ನು ಗ್ಲೆನ್ ಮ್ಯಾಕ್ಸ್ವೆಲ್ 11 ಕೋಟಿ ರೂ. ಪಡೆದಿದ್ದರು. ಹಾಗೆಯೇ ಮೊಹಮ್ಮದ್ ಸಿರಾಜ್ಗೆ 7 ಕೋಟಿ ರೂ. ನೀಡಲಾಗಿತ್ತು.
6 / 6
ಇದೀಗ ಐಪಿಎಲ್ ಸೀಸನ್ 18ರ ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ಕೆಲ ಸ್ಟಾರ್ ಆಟಗಾರರನ್ನು ರಿಟೈನ್ ಮಾಡಿಕೊಳ್ಳುವುದು ಖಚಿತ. ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ ಹಾಗೂ ಮೊಹಮ್ಮದ್ ಸಿರಾಜ್ ಹೆಸರು ಮುಂಚೂಣಿಯಲ್ಲಿದೆ. ಹೀಗಾಗಿ ಇವರಲ್ಲಿ ಯಾರಿಗೆ ಅತ್ಯಧಿಕ ಮೊತ್ತ ಸಿಗಲಿದೆ ಎಂಬುದೇ ಈಗ ಕುತೂಹಲ.