ಹೌದು, ರಚಿನ್ ರವೀಂದ್ರ ಬೆಂಗಳೂರಿನಲ್ಲಿ ಆಡಿರುವುದು ಕೇವಲ ನಾಲ್ಕು ಇನಿಂಗ್ಸ್ಗಳು ಮಾತ್ರ. ಈ ನಾಲ್ಕು ಇನಿಂಗ್ಸ್ಗಳಲ್ಲಿ ಯುವ ದಾಂಡಿಗನ ಬ್ಯಾಟ್ನಿಂದ 2 ಶತಕಗಳು ಹಾಗೂ ಒಂದು ಅರ್ಧಶತಕ ಮೂಡಿಬಂದಿವೆ. ಮತ್ತೊಂದು ಇನಿಂಗ್ಸ್ನಲ್ಲಿ ನಲ್ವತ್ತರ ಗಡಿದಾಟಿದ್ದಾರೆ. ಅಂದರೆ ತಂದೆಯ ತವರಿನಲ್ಲಿ ರಚಿನ್ ಬ್ಯಾಟ್ ಝಳಪಳಿಸುತ್ತಿರುವುದಂತು ಸುಳ್ಳಲ್ಲ. ಇದಕ್ಕೆ ಸಾಕ್ಷಿಯೇ ಈ ಅಂಕಿ ಅಂಶಗಳು.