IPL 2025: 4 ತಿಂಗಳು ಮುಂಚೆಯೇ ಅಭ್ಯಾಸ ಶುರು ಮಾಡಿದ RCB

|

Updated on: Dec 10, 2024 | 7:23 AM

IPL 2025 RCB: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್) 18ನೇ ಆವೃತ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) 22 ಸದಸ್ಯರ ಬಲಿಷ್ಠ ಪಡೆಯನ್ನು ರೂಪಿಸಿಕೊಂಡಿದೆ. ಇವರಲ್ಲಿ 8 ವಿದೇಶಿ ಆಟಗಾರರಿದ್ದರೆ, 14 ಭಾರತೀಯರಿದ್ದಾರೆ.

1 / 5
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್ 18 ಆರಂಭಕ್ಕೆ ಇನ್ನೂ ನಾಲ್ಕು ತಿಂಗಳುಗಳಿವೆ. ಆದರೆ ಅದಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತನ್ನ ಮಾಸ್ಟರ್ ಪ್ಲ್ಯಾನ್ ಶುರು ಮಾಡಿದೆ.

2 / 5
RCB ಫ್ರಾಂಚೈಸಿಯು ಬೆಂಗಳೂರಿನಲ್ಲಿ ಪ್ರೀ ಸೀಸನ್​ ಅಭ್ಯಾಸ ಕ್ಯಾಂಪ್​ಗಳನ್ನು ಆರಂಭಿಸಿದ್ದು, ಈ ಅಭ್ಯಾಸ ಶಿಬಿರದಲ್ಲಿ ಸ್ಟಾರ್ ಆಟಗಾರ ಭುವನೇಶ್ವರ್ ಕುಮಾರ್ ಸೇರಿದಂತೆ ಹಲವು ಪ್ರಮುಖರು ಪಾಲ್ಗೊಂಡಿದ್ದಾರೆ.

3 / 5
ಆರ್​ಸಿಬಿ ತಂಡಕ್ಕೆ ಹೊಸದಾಗಿ ಸೇರ್ಪಡೆಯಾಗಿರುವ ಕೃನಾಲ್ ಪಾಂಡ್ಯ, ಜಿತೇಶ್ ಶರ್ಮಾ ಸೇರಿದಂತೆ ಒಂದಷ್ಟು ಆಟಗಾರರು ಕಠಿಣ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಮುಂದಿನ ಸೀಸನ್​ಗಾಗಿ ಭರ್ಜರಿ ತಯಾರಿಯಲ್ಲಿದ್ದಾರೆ.

4 / 5
ಐಪಿಎಲ್ 2025 ಮಾರ್ಚ್ 14 ರಿಂದ ಶುರುವಾಗಲಿದ್ದು, ಅದಕ್ಕೂ ನಾಲ್ಕು ತಿಂಗಳು ಮುಂಚಿತವಾಗಿ ಅಭ್ಯಾಸ ಕ್ಯಾಂಪ್ ಶುರು ಮಾಡಿ RCB ಕುತೂಹಲ ಮೂಡಿಸಿದೆ. ಈ ಮೂಲಕ ಈ ಸಲ ಕಪ್ ಗೆಲ್ಲಲು ಭರ್ಜರಿ ಪ್ಲ್ಯಾನ್ ಗಳನ್ನು ರೂಪಿಸುತ್ತಿದ್ದಾರೆ. ಈ ಯೋಜನೆಯಂತೆ ಆರ್​ಸಿಬಿ ಈ ಬಾರಿ ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳಲಿದೆಯಾ ಕಾದು ನೋಡಬೇಕಿದೆ.

5 / 5
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್, ಲಿಯಾಮ್ ಲಿವಿಂಗ್​ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಜೋಶ್ ಹ್ಯಾಝಲ್​ವುಡ್, ರಸಿಖ್ ಸಲಾಂ, ಸುಯೇಶ್ ಶರ್ಮಾ, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ನುವಾನ್ ತುಷಾರ, ರೊಮಾರಿಯೋ ಶೆಫರ್ಡ್, ಜೇಕೊಬ್ ಬೆಥೆಲ್, ಮನೋಜ್ ಭಾಂಡಗೆ, ಸ್ವಸ್ತಿಕ್ ಚಿಕಾರ, ದೇವದತ್​ ಪಡಿಕ್ಕಲ್, ಮೋಹಿತ್ ರಾಠಿ, ಅಭಿನಂದನ್ ಸಿಂಗ್, ಲುಂಗಿ ಎನ್​ಗಿಡಿ.