IPL 2025: ಬರೀ ದುಡ್ಡಿಗಾಗಿ ಅಲ್ಲ… ಮೌನ ಮುರಿದ ರಿಷಭ್ ಪಂತ್

|

Updated on: Nov 20, 2024 | 9:57 AM

IPL 2025 Mega Auction: ಈ ಬಾರಿಯ ಐಪಿಎಲ್ ಮೆಗಾ ಹರಾಜು ನವೆಂಬರ್ 24 ಮತ್ತು 25 ರಂದು ನಡೆಯಲಿದೆ. ಸೌದಿ ಅರೇಬಿಯಾದ ಜಿದ್ಧಾದಲ್ಲಿ ಜರುಗಲಿರುವ ಈ ಹರಾಜು ಪ್ರಕ್ರಿಯೆಯಲ್ಲಿ 574 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಇವರಲ್ಲಿ ರಿಷಭ್ ಪಂತ್ ಸೇರಿದಂತೆ 12 ಆಟಗಾರರು ಮೊದಲ ಸುತ್ತಿನಲ್ಲಿ ಹರಾಜಾಗಲಿದ್ದಾರೆ.

1 / 5
ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಈ ಬಾರಿಯ ಐಪಿಎಲ್ (IPL 2025) ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ಪಂತ್ ಅವರು ಈ ಬಾರಿ ರಿಟೈನ್ ಆಗಿಲ್ಲ. ಇದರ ಬೆನ್ನಲ್ಲೇ ರಿಷಭ್ ಡೆಲ್ಲಿ ತಂಡ ತೊರೆಯಲು ಮುಖ್ಯ ಕಾರಣ ಬೃಹತ್ ಮೊತ್ತದ ಡಿಮ್ಯಾಂಡ್ ಎನ್ನಲಾಗಿತ್ತು.

2 / 5
ಕಳೆದ ಸೀಸನ್​ನಲ್ಲಿ 16 ಕೋಟಿ ರೂ. ಪಡೆದಿದ್ದ ರಿಷಭ್ ಪಂತ್ ಈ ಬಾರಿ ಹೆಚ್ಚಿನ ಸಂಭಾವನೆಗಾಗಿ ಬೇಡಿಕೆಯಿಟ್ಟಿದ್ದಾರೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಬೃಹತ್ ಮೊತ್ತ ನೀಡಲು ಹಿಂದೇಟು ಹಾಕಿದ್ದರಿಂದ ಅವರು ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

3 / 5
ಅಲ್ಲದೆ ಇತ್ತೀಚೆಗೆ ಸುನಿಲ್ ಗವಾಸ್ಕರ್ ಖಾಸಗಿ ಚಾನೆಲ್​ವೊಂದರಲ್ಲಿ, ರಿಷಭ್ ಪಂತ್ ಹೆಚ್ಚಿನ ಹಣಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಈ ಆರೋಪದ ಬೆನ್ನಲ್ಲೇ ಇದೀಗ ರಿಷಭ್ ಪಂತ್ ಮೌನ ಮುರಿದಿದ್ದಾರೆ.

4 / 5
ತಮ್ಮ ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ಸ್ಪಷ್ಟನೆ ನೀಡಿರುವ ಪಂತ್, ಹಣದ ವಿಚಾರಕ್ಕೆ ನಾನು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಸದ್ಯ ಹರಿದಾಡುತ್ತಿರುವ ಸುದ್ದಿಗಳಲ್ಲಿ ಸತ್ಯಾಂಶವಿಲ್ಲ ಎಂದು ಪಂತ್ ಹೇಳಿದ್ದಾರೆ.

5 / 5
ರಿಷಭ್ ಪಂತ್ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಐಪಿಎಲ್ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಮೊದಲ ಸೆಟ್​ನಲ್ಲೇ ಸ್ಥಾನ ಪಡೆದಿರುವ ಪಂತ್​ ಖರೀದಿಗಾಗಿ ಆರಂಭದಲ್ಲೇ ಭರ್ಜರಿ ಪೈಪೋಟಿ ಕಂಡು ಬರಲಿದೆ. ಈ ಪೈಪೋಟಿಯೊಂದಿಗೆ ರಿಷಭ್ ಪಂತ್ ಯಾವ ತಂಡದ ಪಾಲಾಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.