IPL 2025: ಅಣ್ಣ ಅನ್ಸೋಲ್ಡ್, ತಮ್ಮನಿಗೆ ಖುಲಾಯಿಸಿದ ಅದೃಷ್ಟ
IPL 2025 Sarfaraz Khan: ಸರ್ಫರಾಝ್ ಖಾನ್ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದಾರೆ. ಈ ವೇಳೆ 37 ಇನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿರುವ ಅವರು ಕಲೆಹಾಕಿರುವುದು ಕೇವಲ 585 ರನ್ಗಳಿಸಲಷ್ಟೇ.
1 / 5
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಸೀಸನ್-18ರ ಮೆಗಾ ಹರಾಜಿನಲ್ಲಿ ಸರ್ಫರಾಝ್ ಖಾನ್ ಬಿಕರಿಯಾಗದೇ ಉಳಿದಿದ್ದಾರೆ. ಆದರೆ ಅತ್ತ ಅವರ ತಮ್ಮ ಮುಶೀರ್ ಖಾನ್ ಚೊಚ್ಚಲ ಬಾರಿ ಐಪಿಎಲ್ಗೆ ಆಯ್ಕೆಯಾಗಿದ್ದಾರೆ. 2023 ರಲ್ಲಿ ಕೊನೆಯ ಬಾರಿಗೆ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದ ಸರ್ಫರಾಝ್ ಖಾನ್ ಈ ಬಾರಿ ಮತ್ತೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು.
2 / 5
ಅದರಂತೆ ಮೆಗಾ ಹರಾಜಿನಲ್ಲಿ 75 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಸರ್ಫರಾಝ್ ಖಾನ್ ಅವರನ್ನು ಖರೀದಿಸಲು ಯಾವುದೇ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ. ಇದರೊಂದಿಗೆ ಐಪಿಎಲ್ಗೆ ಕಂಬ್ಯಾಕ್ ಮಾಡುವ ಸರ್ಫರಾಝ್ ಅವರ ಕನಸು ಕಮರಿದೆ.
3 / 5
ಇದಾಗ್ಯೂ ಸರ್ಫರಾಝ್ ಸಹೋದರ ಮುಶೀರ್ ಖಾನ್ ಚೊಚ್ಚಲ ಬಾರಿಗೆ ಐಪಿಎಲ್ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಮುಶೀರ್ ಅವರನ್ನು ಪಂಜಾಬ್ ಕಿಂಗ್ಸ್ ಫ್ರಾಂಚೈಸಿಯು ಬೇಸ್ ಪ್ರೈಸ್ಗೆ ಖರೀದಿಸಿದೆ.
4 / 5
ಈಗಾಗಲೇ ಭಾರತ ಅಂಡರ್-19 ಹಾಗೂ ಮುಂಬೈ ತಂಡಗಳ ಪರ ಕಣಕ್ಕಿಳಿದಿರುವ ಮುಶೀರ್ ಖಾನ್ ಅತ್ಯುತ್ತಮ ಆಲ್ರೌಂಡರ್. ಅದರಲ್ಲೂ ಸ್ಪೋಟಕ ಬ್ಯಾಟಿಂಗ್ಗೆ ಹೆಸರುವಾಸಿ. ಇದೇ ಕಾರಣದಿಂದಾಗಿ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಮುಶೀರ್ ಖಾನ್ ರನ್ನು ಖರೀದಿಸಿದ್ದಾರೆ.
5 / 5
ಇನ್ನು 2015 ರಲ್ಲಿ ಆರ್ಸಿಬಿ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದ ಸರ್ಫರಾಝ್ ಖಾನ್ 37 ಇನಿಂಗ್ಸ್ ಮೂಲಕ ಕಲೆಹಾಕಿದ್ದು ಕೇವಲ 585 ರನ್ಗಳಷ್ಟೇ. ಅದರಲ್ಲೂ 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಸರ್ಫರಾಝ್ ಖರೀದಿಗೆ ಯಾವುದೇ ಫ್ರಾಂಚೈಸಿ ತೋರಿಲ್ಲ. ಇದಾಗ್ಯೂ ಬದಲಿ ಆಟಗಾರನಾಗಿ ಅವರು ಐಪಿಎಲ್ಗೆ ಎಂಟ್ರಿ ಕೊಡಲಿದ್ದಾರಾ ಕಾದು ನೋಡಬೇಕಿದೆ.