IPL 2025 Auction: ಮೊದಲ ದಿನ ಮೂವರು ಕನ್ನಡಿಗರು ಅನ್​ಸ್ಟೋಲ್ಡ್

|

Updated on: Nov 25, 2024 | 9:04 AM

IPL 2025 Auction: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಮೆಗಾ ಹರಾಜಿನ ಮೊದಲ ದಿನದ ಬಿಡ್ಡಿಂಗ್​ನಲ್ಲಿ 72 ಆಟಗಾರರು ಬಿಕರಿಯಾಗಿದ್ದಾರೆ. ಇವರಲ್ಲಿ ಅತ್ಯಧಿಕ ಮೊತ್ತ ಪಡೆದಿರುವುದು ರಿಷಭ್ ಪಂತ್. ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಪಂತ್ ಅವರನ್ನು ಬರೋಬ್ಬರಿ 27 ಕೋಟಿ ರೂ.ಗೆ ಖರೀದಿಸಿದೆ.

1 / 6
ಸೌದಿ ಅರೇಬಿಯಾದ ಜಿದ್ದಾದಲ್ಲಿ ನಡೆದ ಐಪಿಎಲ್ ಸೀಸನ್-18ರ ಮೆಗಾ ಹರಾಜಿನ ಮೊದಲ ದಿನ 12 ಆಟಗಾರರು ಮಾರಾಟವಾಗದೇ ಉಳಿದಿದ್ದಾರೆ. ಈ ಹನ್ನೆರಡು ಆಟಗಾರರಲ್ಲಿ ಮೂವರು ಕನ್ನಡಿಗರಿರುವುದು ವಿಶೇಷ. ಹಾಗಿದ್ರೆ ಮೊದಲ ದಿನ ಬಿಕರಿಯಾಗದೇ ಉಳಿದ ಆಟಗಾರರು ಯಾರೆಲ್ಲಾ ಎಂದು ನೋಡುವುದಾದರೆ....

2 / 6
ದೇವದತ್ ಪಡಿಕ್ಕಲ್: 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಕರ್ನಾಟಕದ ಎಡಗೈ ದಾಂಡಿಗ ದೇವದತ್ ಪಡಿಕ್ಕಲ್ ಮೊದಲ ದಿನದ ಹರಾಜಿನಲ್ಲಿ ಮಾರಾಟವಾಗದೇ ಉಳಿದಿದ್ದಾರೆ. ಕಳೆದ ಸೀಸನ್​ನಲ್ಲಿ ಪಡಿಕ್ಕಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದರು.

3 / 6
ಲವ್​ನೀತ್ ಸಿಸೋಡಿಯಾ: ಕರ್ನಾಟಕದ ವಿಕೆಟ್ ಕೀಪರ್ ಬ್ಯಾಟರ್ ಲವ್​ನೀತ್ ಸಿಸೋಡಿಯಾ ಈ ಬಾರಿಯ ಮೆಗಾ ಹರಾಜಿನಲ್ಲಿ 30 ಲಕ್ಷ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದಾರೆ. ಇದಾಗ್ಯೂ ಮೊದಲ ದಿನದ ಹರಾಜಿನಲ್ಲಿ ಆರ್​ಸಿಬಿಯ ಮಾಜಿ ಆಟಗಾರನನ್ನು ಖರೀದಿಸಲು ಫ್ರಾಂಚೈಸಿಗಳು ಹಿಂದೇಟು ಹಾಕಿದೆ.

4 / 6
ಶ್ರೇಯಸ್ ಗೋಪಾಲ್: ಸ್ಪಿನ್ ಆಲ್​ರೌಂಡರ್ ಶ್ರೇಯಸ್ ಗೋಪಾಲ್ ಕೂಡ ಮೊದಲ ದಿನದ ಹರಾಜಿನಲ್ಲಿ ಬಿಕರಿಯಾಗದೇ ಉಳಿದಿದ್ದಾರೆ. ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ಕನ್ನಡಿಗನ ಖರೀದಿಗೆ ಮೊದಲ ದಿನ ಯಾವುದೇ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ.

5 / 6
ಈ ಮೂವರಲ್ಲದೆ ಮೊದಲ ದಿನದ ಹರಾಜಿನಲ್ಲಿ ಮಾರಾಟವಾಗದೇ ಉಳಿದ ಆಟಗಾರರೆಂದರೆ... ಡೇವಿಡ್ ವಾರ್ನರ್, ಜಾನಿ ಬೈರ್​ಸ್ಟೋವ್, ಕಾರ್ ಸಲಾಮ್ಖೈಲ್, ಯಶ್ ಧುಲ್, ಅನ್ಮೋಲ್ಪ್ರೀತ್ ಸಿಂಗ್, ಉತ್ಕರ್ಷ್ ಸಿಂಗ್, ಕಾರ್ತಿಕ್ ತ್ಯಾಗಿ, ಉಪೇಂದ್ರ ಯಾದವ್, ಪಿಯೂಷ್ ಚಾವ್ಲಾ.

6 / 6
ಇನ್ನು ಮೊದಲ ದಿನ ಮಾರಾಟವಾಗದೇ ಉಳಿದ ಆಟಗಾರರ ಪಟ್ಟಿಯನ್ನು ಕೊನೆಯ ಸುತ್ತಿನ ಹರಾಜಿನ ವೇಳೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಅದರಂತೆ ಅಂತಿಮ ಸುತ್ತಿನಲ್ಲಿ ಅನ್​ಸೋಲ್ಡ್ ಆಟಗಾರರಿಗಾಗಿ ಮತ್ತೆ ಬಿಡ್ಡಿಂಗ್ ನಡೆಯಲಿದೆ. ಹೀಗಾಗಿ ಮೊದಲ ದಿನ ಬಿಕರಿಯಾಗದೇ ಉಳಿದ ಆಟಗಾರರಿಗೆ ಎರಡನೇ ದಿನ ಅದೃಷ್ಟ ಖುಲಾಯಿಸಬಹುದು.