IPL 2025: ವಿರಾಟ್ ಕೊಹ್ಲಿ ಖಚಿತ: ಉಳಿದವರೇ RCB ತಂಡದ ದೊಡ್ಡ ಚಿಂತೆ
IPL 2025 Virat Kohli: ವಿರಾಟ್ ಕೊಹ್ಲಿ 2008 ರಿಂದ ಆರ್ಸಿಬಿ ಪರ ಕಣಕ್ಕಿಳಿಯುತ್ತಿದ್ದಾರೆ. ಅಲ್ಲದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಐಕಾನ್ ಆಗಿ ಮಾರ್ಪಟ್ಟಿದ್ದಾರೆ. ಹೀಗಾಗಿ ಕಿಂಗ್ ಕೊಹ್ಲಿಯನ್ನು ಆರ್ಸಿಬಿ ಫ್ರಾಂಚೈಸಿ ಕೈ ಬಿಡುವುದಿಲ್ಲ ಎಂಬುದು ಖಚಿತವಾಗಿದೆ.
1 / 8
IPL 2025: ಐಪಿಎಲ್ ಸೀಸನ್-18ರ ಮೆಗಾ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯು ವಿರಾಟ್ ಕೊಹ್ಲಿಯನ್ನು ತಂಡದಲ್ಲೇ ಉಳಿಸಿಕೊಳ್ಳುವುದು ಖಚಿತವಾಗಿದೆ. ಆದರೆ ಉಳಿದ ರಿಟೈನ್ ಆಯ್ಕೆಯೇ ಈಗ ಆರ್ಸಿಬಿ ತಂಡದ ಚಿಂತೆಯನ್ನು ಹೆಚ್ಚಿಸಿದೆ.
2 / 8
ಏಕೆಂದರೆ ಆರ್ಸಿಬಿ ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ, ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಅದರಲ್ಲೂ ನಾಯಕ ಫಾಫ್ ಡುಪ್ಲೆಸಿಸ್ ಉತ್ತಮ ಫಾರ್ಮ್ ಪ್ರದರ್ಶಿಸಿದರೂ ಅವರಿಗೆ ಈಗ 40 ವರ್ಷ. ಹೀಗಾಗಿ ಅವರನ್ನು ಉಳಿಸಿಕೊಳ್ಳಬೇಕೇ ಅಥವಾ ಬೇಡವೇ ಎಂಬುದೇ ಆರ್ಸಿಬಿ ಮುಂದಿರುವ ದೊಡ್ಡ ಪ್ರಶ್ನೆ.
3 / 8
ಮತ್ತೊಂದೆಡೆ ಮೊಹಮ್ಮದ್ ಸಿರಾಜ್ ಅವರನ್ನು ಆರ್ಸಿಬಿ ಉಳಿಸಿಕೊಳ್ಳಲು ಬಯಸಿದರೂ, ಅವರು ಫಾರ್ಮ್ನಲ್ಲಿಲ್ಲ. ಹೀಗಾಗಿ ಟೀಮ್ ಇಂಡಿಯಾವನ್ನು ವೇಗಿಯನ್ನು ಕೋಟಿ ರೂ. ನೀಡಿ ಉಳಿಸಿಕೊಳ್ಳಬೇಕಾ ಎಂಬುದೇ ಈಗ ಆರ್ಸಿಬಿ ಪಾಲಿಗೆ ಪ್ರಶ್ನೆಯಾಗಿ ಉಳಿದಿದೆ.
4 / 8
ಇನ್ನು ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಕಳೆದ ಬಾರಿ ಆರ್ಸಿಬಿ ರಿಟೈನ್ ಮಾಡಿಕೊಂಡಿತ್ತು. ಆದರೆ ಐಪಿಎಲ್ 2024 ರಲ್ಲಿ ಮ್ಯಾಕ್ಸ್ವೆಲ್ ಅತ್ಯಂತ ಹೀನಾಯ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನ್ನು ಈ ಬಾರಿ ಕೈ ಬಿಡುವುದು ಖಚಿತ ಎನ್ನಲಾಗಿದೆ.
5 / 8
ಇನ್ನೊಂದೆಡೆ ಯುವ ದಾಂಡಿಗ ರಜತ್ ಪಾಟಿದಾರ್ ಆರ್ಸಿಬಿ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಅವರನ್ನು ಉಳಿಸಿಕೊಳ್ಳಬೇಕಿದ್ದರೆ ಕನಿಷ್ಠ 11 ಕೋಟಿ ರೂ. ನೀಡಬೇಕಾಗುತ್ತದೆ. ಇಷ್ಟು ಮೊತ್ತ ನೀಡಲು ಆರ್ಸಿಬಿ ಕೂಡ ಸಿದ್ಧರಿಲ್ಲ. ಹೀಗಾಗಿ ಅವರ ಮೇಲೆ ಆರ್ಟಿಎಂ ಆಯ್ಕೆ ಪ್ರಯೋಗಿಸುವ ಸಾಧ್ಯತೆಯಿದೆ.
6 / 8
ಇದರ ಜೊತೆ ಕ್ಯಾಮರೋನ್ ಗ್ರೀನ್ ಅವರನ್ನು ಸಹ ತಂಡದಿಂದ ಕೈ ಬಿಡಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇದಕ್ಕೆ ಮುಖ್ಯ ಕಾರಣ ಅವರು ಇತ್ತೀಚೆಗೆ ಸರ್ಜರಿಗೆ ಒಳಗಾಗಿರುವುದು. ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕಾರಣ ಅವರು ಮುಂದಿನ ಐದಾರು ತಿಂಗಳು ಮೈದಾನದಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಅವರನ್ನು ತಂಡದಲ್ಲಿ ಉಳಿಸಿಕೊಂಡು ಪ್ರಯೋಜನವಿಲ್ಲ.
7 / 8
ಇನ್ನು ಆರ್ಸಿಬಿ ತಂಡದಲ್ಲಿ ಸ್ಪೋಟಕ ದಾಂಡಿಗನಾಗಿ ವಿಲ್ ಜಾಕ್ಸ್ ಇದ್ದಾರೆ. ಆದರೆ ಅವರು ಆರ್ಸಿಬಿ ಪರ ಒಂದು ಭರ್ಜರಿ ಶತಕ ಬಾರಿಸಿದ ಬಳಿಕ ಯಾವುದೇ ಪಂದ್ಯದಲ್ಲೂ ಮಿಂಚಿಲ್ಲ ಎಂಬುದೇ ಸತ್ಯ. ಅಂದರೆ ಇಂಗ್ಲೆಂಡ್ ಪರ ಹಲವು ಮ್ಯಾಚ್ಗಳಲ್ಲಿ ಕಾಣಿಸಿಕೊಂಡರೂ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಹೀಗಾಗಿ ಅವರನ್ನು ಉಳಿಸಿಕೊಳ್ಳಬೇಕಾ / ಬೇಡವಾ ಎಂಬ ಪ್ರಶ್ನೆಯೊಂದು ಆರ್ಸಿಬಿ ಮುಂದಿದೆ.
8 / 8
ಒಟ್ಟಿನಲ್ಲಿ ಆರ್ಸಿಬಿ ತಂಡದಲ್ಲಿರುವ ಆಟಗಾರರ ಕಳಪೆ ಫಾರ್ಮ್ ಈಗ ರಿಟೈನ್ ಪ್ರಕ್ರಿಯೆಯನ್ನು ವಿಳಂಬಗೊಳಿಸಿದೆ. ಇದಾಗ್ಯೂ ರಿಟೈನ್ ಪಟ್ಟಿ ಸಲ್ಲಿಸಲು ಇನ್ನು ಕೆಲವೇ ಕೆಲವು ದಿನಗಳು ಮಾತ್ರ ಉಳಿದಿದ್ದು, ಹೀಗಾಗಿ ಆರ್ಸಿಬಿ ಫ್ರಾಂಚೈಸಿ ಯಾರನ್ನು ತಂಡದಲ್ಲೇ ಉಳಿಸಿಕೊಳ್ಳಲಿದ್ದಾರೆ? ಯಾರನ್ನು ಕೈ ಬಿಡಲಿದ್ದಾರೆ ಎಂಬುದೇ ಕುತೂಹಲ. ಈ ಕುತೂಹಲಕ್ಕೆ ಉತ್ತರ ಸಿಗಲು ಈ ತಿಂಗಳಾಂತ್ಯದವರೆಗೆ ಕಾಯಲೇಬೇಕು.