IPL 2025: ಏನಿದು RTM ಆಯ್ಕೆ: ಇದನ್ನು ಬಳಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ

|

Updated on: Sep 29, 2024 | 9:29 PM

IPL 2025 RTM Card Rules: ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಓರ್ವ ಆಟಗಾರರ ಮೇಲೆ ಆರ್​ಟಿಎಂ ಆಯ್ಕೆ ಬಳಸಲು ಬಿಸಿಸಿಐ ಅವಕಾಶ ನೀಡಿದೆ. ಇದರ ಬೆನ್ನಲ್ಲೇ ಏನಿದು ಆರ್​ಟಿಎಂ ಆಯ್ಕೆ, ಇದರ ನಿಯಮಗಳೇನು ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಸಂಪೂರ್ಣ ಮಾಹಿತಿ...

1 / 6
ಐಪಿಎಲ್​ 2025ರ ಮೆಗಾ ಆಕ್ಷನ್ ರಿಟೈನ್ ನಿಯಮ ಪ್ರಕಟವಾಗಿದೆ. ಈ ನಿಯಮದಂತೆ ಈ ಬಾರಿಯ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳು 6 ಆಟಗಾರರನ್ನು ಉಳಿಸಿಕೊಳ್ಳಬಹುದು. ಇಲ್ಲಿ ಐವರನ್ನು ಆಯ್ಕೆ ಮಾಡಿದರೆ, ಓರ್ವ ಆಟಗಾರನ ಮೇಲೆ ಆರ್​ಟಿಎಂ ಆಯ್ಕೆ ಬಳಸಲು ಅವಕಾಶ ಕಲ್ಪಿಸಲಾಗಿದೆ. ಹಾಗಿದ್ರೆ ಏನಿದು RTM ಆಯ್ಕೆ? ಇದನ್ನು ಬಳಸುವುದು ಹೇಗೆ ಎಂಬ ಪ್ರಶ್ನೆಯೊಂದು ಮೂಡುವುದು ಸಹಜ. ನಿಮ್ಮೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ...

2 / 6
ಆರ್​ಟಿಎಂ ಎಂದರೆ ರೈಟ್ ಟು ಮ್ಯಾಚ್ (RTM) ಆಯ್ಕೆ. ಅಂದರೆ ಮೆಗಾ ಹರಾಜಿನಲ್ಲಿ ಆಟಗಾರರನ್ನು ಸ್ವಾಧೀನಪಡಿಸಿಕೊಳ್ಳಲು ಇರುವ ವಿಶೇಷ ಆಯ್ಕೆ. ಇನ್ನೂ ಸರಳವಾಗಿ ಹೇಳಬೇಕೆಂದರೆ, ಆಟಗಾರರ ಮೇಲೆ ಹಕ್ಕುಸ್ವಾಮ್ಯ ಸ್ಥಾಪಿಸುವುದು. ಆದರೆ ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಆರ್​ಟಿಎಂ ಆಯ್ಕೆಯನ್ನು ಬಳಸಲಾದ ಆಟಗಾರನನ್ನು ನೇರವಾಗಿ ಆಯ್ಕೆ ಮಾಡುವಂತಿಲ್ಲ ಎಂಬುದು.

3 / 6
ಅಂದರೆ ಒಬ್ಬ ಆಟಗಾರನ ಮೇಲೆ ಆರ್​ಟಿಎಂ ಆಯ್ಕೆ ಬಳಸಿದರೆ ಆತನನ್ನು ಮೆಗಾ ಹರಾಜಿಗಾಗಿ ಬಿಡುಗಡೆ ಮಾಡಬೇಕಾಗುತ್ತದೆ. ಇದಾಗ್ಯೂ ಮೆಗಾ ಹರಾಜಿನಲ್ಲಿ ಆ ಆಟಗಾರನ ಸಂಪೂರ್ಣ ಹಕ್ಕು ಬಿಡುಗಡೆ ಮಾಡಿದ ಫ್ರಾಂಚೈಸಿಯ ಬಳಿಯೇ ಇರಲಿದೆ. ಇದುವೇ ಈ ಆಯ್ಕೆಯ ವಿಶೇಷತೆ.

4 / 6
ಉದಾಹರಣೆಗೆ: ಆರ್​ಸಿಬಿ ತಂಡವು ರಜತ್ ಪಾಟಿದಾರ್ ಅವರನ್ನು ಹರಾಜಿಗಾಗಿ ರಿಲೀಸ್ ಮಾಡಿದೆ ಎಂದಿಟ್ಟುಕೊಳ್ಳಿ. ಆದರೆ ಬಿಡುಗಡೆಗೂ ಮುನ್ನ ಆರ್​ಟಿಎಂ ಆಯ್ಕೆ ಬಳಸಿ ಮೆಗಾ ಹರಾಜಿಗಾಗಿ ರಿಲೀಸ್ ಮಾಡಿದರೆ, ಪಾಟಿದಾರ್ ಮೇಲಿನ ಹಕ್ಕು ಆರ್​ಸಿಬಿ ಬಳಿಯೇ ಇರುತ್ತದೆ.

5 / 6
ಅದರಂತೆ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡ ರಜತ್ ಪಾಟಿದಾರ್​ (ಆರ್​ಟಿಎಂ) ಅವರ ಖರೀದಿಗೆ ಚೆನ್ನೈ ಸೂಪರ್ ಕಿಂಗ್ಸ್​ ಫ್ರಾಂಚೈಸಿಯು 10 ಕೋಟಿ ರೂ.ವರೆಗೆ ಬಿಡ್ ಮಾಡಿತು ಎಂದಿಟ್ಟುಕೊಳ್ಳಿ. ಈ ವೇಳೆ ಆ ಮೊತ್ತವನ್ನು ತಾವೇ ನೀಡುತ್ತೇವೆ ಎಂದು ಪಾಟಿದಾರ್ ಅವರನ್ನು ಆರ್​ಸಿಬಿ ಮರಳಿ ಖರೀದಿಸಬಹುದು.

6 / 6
ಒಂದು ವೇಳೆ ಬಿಡುಗಡೆ ಮಾಡಿದ ತಂಡವು ಮರಳಿ ಖರೀದಿಸಲು ಇಚ್ಛಿಸದಿದ್ದರೆ ಮಾತ್ರ ಆರ್​ಟಿಎಂ ಆಯ್ಕೆಯಲ್ಲಿ ಕಾಣಿಸಿಕೊಂಡ ಆಟಗಾರರು ಕೊನೆಯದಾಗಿ ಬಿಡ್ ಮಾಡಿದ ತಂಡದ ಪಾಲಾಗಲಿದ್ದಾರೆ. ಹೀಗಾಗಿಯೇ ಈ ಆಯ್ಕೆಯನ್ನು ಆಟಗಾರರ ಮೇಲಿನ ಹಕ್ಕುಸ್ವಾಮ್ಯ ಎನ್ನಲಾಗುತ್ತದೆ. ಅದರಂತೆ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಒಬ್ಬ ಆಟಗಾರನ ಮೇಲೆ ಆರ್​ಟಿಎಂ ಆಯ್ಕೆ ಬಳಸಬಹುದಾಗಿದ್ದು, ಹೀಗಾಗಿ ಈ ಸಲ ಕೆಲ ಸ್ಟಾರ್ ಆಟಗಾರರು ಆರ್​ಟಿಎಂ ಆಯ್ಕೆಯಡಿ ಬಿಡುಗಡೆಯಾದರೂ ಅಚ್ಚರಿಪಡಬೇಕಿಲ್ಲ.

Published On - 11:30 am, Sun, 29 September 24