PSL ಗೆ ಕೈಕೊಟ್ಟು IPL ಗೆ ಎಂಟ್ರಿ ಕೊಟ್ಟ ಸ್ಫೋಟಕ ದಾಂಡಿಗ

Updated on: May 04, 2025 | 2:19 PM

IPL 2025 vs PSL 2025: ಪಾಕಿಸ್ತಾನ್ ಸೂಪರ್ ಲೀಗ್​ಗೆ ಮತ್ತೊಂದು ಆಘಾತ ಎದುರಾಗಿದೆ. ಪೇಶಾವರ್ ಝಲ್ಮಿ ತಂಡದಲ್ಲಿದ್ದ ಆಸ್ಟ್ರೇಲಿಯಾದ ಸ್ಫೋಟಕ ದಾಂಡಿಗ ಅರ್ಧದಲ್ಲೇ ಪಿಎಸ್​ಎಲ್ ಟೂರ್ನಿ ಐಪಿಎಲ್​ಗೆ ಎಂಟ್ರಿ ಕೊಟ್ಟಿದ್ದಾರೆ. ಅದು ಕೂಡ ಗ್ಲೆನ್ ಮ್ಯಾಕ್ಸ್​ವೆಲ್ ಅವರ ಬದಲಿ ಆಟಗಾರನಾಗಿ ಎಂಬುದು ವಿಶೇಷ.

1 / 6
IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಆಸ್ಟ್ರೇಲಿಯಾದ ಸ್ಫೋಟಕ ದಾಂಡಿಗ ಮಿಚೆಲ್ ಓವನ್ (Mitchell Owen) ಎಂಟ್ರಿ ಕೊಟ್ಟಿದ್ದಾರೆ. ಅದು ಕೂಡ ಪಾಕಿಸ್ತಾನ್ ಸೂಪರ್ ಲೀಗ್​ಗೆ (PSL 2025) ಅರ್ಧದಲ್ಲೇ ಕೈ ಕೊಡುವ ಮೂಲಕ ಎಂಬುದು ವಿಶೇಷ. ಅಂದರೆ ಈ ಬಾರಿಯ ಪಿಎಸ್​ಎಲ್​ನಲ್ಲಿ ಮಿಚೆಲ್ ಓವನ್ ಪೇಶಾವರ್ ಝಲ್ಮಿ ತಂಡದಲ್ಲಿ ಕಾಣಿಸಿಕೊಂಡಿದ್ದರು.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ಗೆ ಆಸ್ಟ್ರೇಲಿಯಾದ ಸ್ಫೋಟಕ ದಾಂಡಿಗ ಮಿಚೆಲ್ ಓವನ್ (Mitchell Owen) ಎಂಟ್ರಿ ಕೊಟ್ಟಿದ್ದಾರೆ. ಅದು ಕೂಡ ಪಾಕಿಸ್ತಾನ್ ಸೂಪರ್ ಲೀಗ್​ಗೆ (PSL 2025) ಅರ್ಧದಲ್ಲೇ ಕೈ ಕೊಡುವ ಮೂಲಕ ಎಂಬುದು ವಿಶೇಷ. ಅಂದರೆ ಈ ಬಾರಿಯ ಪಿಎಸ್​ಎಲ್​ನಲ್ಲಿ ಮಿಚೆಲ್ ಓವನ್ ಪೇಶಾವರ್ ಝಲ್ಮಿ ತಂಡದಲ್ಲಿ ಕಾಣಿಸಿಕೊಂಡಿದ್ದರು.

2 / 6

ಶುಕ್ರವಾರ ಪೇಶಾವರ್ ಝಲ್ಮಿ ಪರ ಕಾಣಿಸಿಕೊಂಡಿದ್ದ ಮಿಚೆಲ್ ಓವನ್ ಇದೀಗ ಪಂಜಾಬ್ ಕಿಂಗ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್​ವೆಲ್ ಗಾಯಗೊಂಡು ಐಪಿಎಲ್​ನಿಂದ ಹೊರಬಿದ್ದಿದ್ದಾರೆ. ಇದೀಗ ಅವರ ಬದಲಿಗೆ ಮಿಚೆಲ್ ಓವನ್ ಅವರನ್ನು ಬದಲಿಯಾಗಿ ಪಂಜಾಬ್ ಕಿಂಗ್ಸ್ ಆಯ್ಕೆ ಮಾಡಿಕೊಂಡಿದೆ.

3 / 6

ಅಂದಹಾಗೆ ಮಿಚೆಲ್ ಓವನ್ ಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿ. ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್​ನಲ್ಲಿ  ಅತೀ ವೇಗದ ಸೆಂಚುರಿ ಸಿಡಿಸಿದ ದಾಖಲೆ ಮಿಚೆಲ್ ಓವನ್ ಹೆಸರಿನಲ್ಲಿದೆ. ಕಳೆದ ಬಾರಿ ಬಿಬಿಎಎಲ್​ನಲ್ಲಿ ಮಿಚೆಲ್ ಓವನ್ ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು.

4 / 6

ಅಷ್ಟೇ ಅಲ್ಲದೆ ಬಿಬಿಎಲ್ ಫೈನಲ್ ಇತಿಹಾಸದಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆಯನ್ನು ಕೂಡ ಮಿಚೆಲ್ ಓವನ್ ಹೆಸರಿನಲ್ಲಿದೆ. ಸಿಡ್ನಿ ಥಂಡರ್ ವಿರುದ್ಧದ ಫೈನಲ್ ಪಂದ್ಯದಲ್ಲಿ 11 ಸಿಕ್ಸ್ ಸಿಡಿಸಿ ಮಿಚೆಲ್ ಓವನ್ ಹೋಬಾರ್ಟ್ ಹರಿಕೇನ್ಸ್ ತಂಡಕ್ಕೆ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದರು.

5 / 6

ಇದರ ಜೊತೆಗೆ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ 40 ಕ್ಕಿಂತ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ ಕೂಡ ಮಿಚೆಲ್ ಓವನ್ ಹೆಸರಿನಲ್ಲಿದೆ. 23 ವರ್ಷದ ಮಿಚೆಲ್ 39 ಎಸೆತಗಳಲ್ಲಿ ಶತಕ ಪೂರೈಸಿ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

6 / 6

ಬಿಬಿಎಲ್ ಫೈನಲ್​ ಪಂದ್ಯದಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ದಾಖಲೆಯನ್ನು ಸಹ ಮಿಚೆಲ್ ಓವನ್ ಬರೆದಿದ್ದಾರೆ. ಸಿಡ್ನಿ ಥಂಡರ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಮಿಚೆಲ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಬಿಗ್ ಬ್ಯಾಷ್​ ಲೀಗ್​ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದ ಯುವ ಬ್ಯಾಟರ್​ನನ್ನು ಪಂಜಾಬ್ ಕಿಂಗ್ಸ್ ತಂಡವು ಗ್ಲೆನ್ ಮ್ಯಾಕ್ಸ್​ವೆಲ್ ಅವರ ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ.

Published On - 2:09 pm, Sun, 4 May 25

Loading...
Unable to load recommendations.
Follow Us