IPL 2025: ಆರ್​ಸಿಬಿಗೆ ಬಂತು ಆನೆ ಬಲ; ತಂಡ ಸೇರಿಕೊಳ್ಳಲಿದ್ದಾರಂತೆ ರಿಷಬ್ ಪಂತ್..!

|

Updated on: Oct 23, 2024 | 5:20 PM

RCB: ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡುತ್ತಿರುವ ರಿಷಬ್ ಪಂತ್​ರನ್ನು ಡೆಲ್ಲಿ ಫ್ರಾಂಚೈಸಿ ಮೆಗಾ ಹರಾಜಿಗೂ ಮುನ್ನ ತಂಡದಿಂದ ಕೈಬಿಡಬಹುದು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಇತ್ತ ಮೆಗಾ ಹರಾಜಿನಲ್ಲಿ ಪಂತ್​ರನ್ನು ಖರೀದಿಸಲು ಆರ್​ಸಿಬಿ ಉತ್ಸುಕವಾಗಿದ್ದು, ಸಾಕಷ್ಟು ಹಣ ಖರ್ಚು ಮಾಡಿ ಪಂತ್​ರನ್ನು ತಂಡಕ್ಕೆ ಸೇರಿಸಿಕೊಳ್ಳಲಿದೆ ಎಂದು ವರದಿಯಾಗಿದೆ.

1 / 6
2025 ರ ಐಪಿಎಲ್ ಮೆಗಾ ಹರಾಜಿಗೆ ಈಗಾಗಲೇ ಸಿದ್ಧತೆಗಳು ಬರದಿಂದ ಸಾಗುತ್ತಿವೆ. ಈ ಮಿಲಿಯನ್ ಡಾಲರ್ ಟೂರ್ನಿಯ ಹರಾಜನ್ನು ಸೌದಿ ಅರೇಬಿಯಾದ ರಾಜಧಾನಿ ರಿಯಾದ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಆದರೆ ಅದಕ್ಕೂ ಮುನ್ನ ರಿಷಬ್ ಪಂತ್ ಬಗ್ಗೆ ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ಟೈಮ್ಸ್ ಆಫ್ ಇಂಡಿಯಾ ಪ್ರಕಾರ, ರಿಷಬ್ ಪಂತ್, ಮುಂದಿನ ಆವೃತ್ತಿಯಿಂದ ಆರ್​ಸಿಬಿ ಪರ ಕಣಕ್ಕಿಳಿಯುವುದು ಎಂದು ವರದಿ ಮಾಡಿದೆ.

2 / 6
ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಪ್ರಸ್ತುತ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡುತ್ತಿರುವ ರಿಷಬ್ ಪಂತ್​ರನ್ನು ಡೆಲ್ಲಿ ಫ್ರಾಂಚೈಸಿ ಮೆಗಾ ಹರಾಜಿಗೂ ಮುನ್ನ ತಂಡದಿಂದ ಕೈಬಿಡಬಹುದು ಎಂದು ವರದಿಯಾಗಿದೆ. ಇತ್ತ ಮೆಗಾ ಹರಾಜಿನಲ್ಲಿ ಪಂತ್​ರನ್ನು ಖರೀದಿಸಲು ಆರ್​ಸಿಬಿ ಉತ್ಸುಕವಾಗಿದ್ದು, ಸಾಕಷ್ಟು ಹಣ ಖರ್ಚು ಮಾಡಿ ಪಂತ್​ರನ್ನು ತಂಡಕ್ಕೆ ಸೇರಿಸಿಕೊಳ್ಳಲಿದೆ ಎಂದು ವರದಿ ಮಾಡಿದೆ.

3 / 6
ಇದಕ್ಕೆ ಪೂರಕ ಕಾರಣವೂ ಇದ್ದು ಆರ್​ಸಿಬಿ, ಭವಿಷ್ಯದ ನಾಯಕನನ್ನು ಹುಡುಕುತ್ತಿದೆ. ತಂಡವನ್ನು ಮುನ್ನಡೆಸುತ್ತಿರುವ ಹಾಲಿ ನಾಯಕ ಫಾಫ್ ಡುಪ್ಲೆಸಿಸ್​ಗೆ ವಯಸ್ಸಾಗುತ್ತಿದೆ. ಹೀಗಾಗಿ ಅವರನ್ನು ತಂಡದಿಂದ ಕೈಬಿಟ್ಟು ಅವರ ಸ್ಥಾನಕ್ಕೆ ಭಾರತದ ಆಟಗಾರನನ್ನು ತಂದು ಕೂರಿಸಿಲು ಆರ್​ಸಿಬಿ ಫ್ರಾಂಚೈಸಿ ಯೋಚಿಸಿದೆ. ಒಂದು ವೇಳೆ ಪಂತ್ ಆರ್​ಸಿಬಿ ತಂಡವನ್ನು ಸೇರಿಕೊಂಡರೆ, ತಂಡಕ್ಕೆ ಪ್ರಮುಖವಾಗಿ ಎರಡು ಲಾಭಗಳಾಗಲಿವೆ.

4 / 6
ಮೊದಲನೆಯದ್ದು, ತಂಡಕ್ಕೆ ಯುವ ನಾಯಕ ಸಿಕ್ಕಂತ್ತಾಗುತ್ತದೆ. ಪಂತ್​ಗೆ ಈಗಾಗಲೇ ನಾಯಕತ್ವ ನಿಭಾಯಿಸಿದ ಅನುಭವವಿದೆ. ಅಲ್ಲದೆ ವಯಸ್ಸಿನ ವಿಚಾರದಲ್ಲಿ ಪಂತ್​ ಇನ್ನು ಸಾಕಷ್ಟು ವರ್ಷ ಕ್ರಿಕೆಟ್ ಆಡುವುದು ಬಾಕಿ ಇದೆ. ಹೀಗಾಗಿ ಪಂತ್, ಆರ್​ಸಿಬಿ ತಂಡವನ್ನು ಸೇರಿಕೊಂಡರೆ, ಅವರು ದೀರ್ಘ ಕಾಲ ತಂಡದಲ್ಲಿ ಉಳಿಯಲಿದ್ದಾರೆ.

5 / 6
ಎರಡನೇಯದ್ದು, ಪಂತ್ ಸ್ಫೋಟಕ ಬ್ಯಾಟ್ಸ್‌ಮನ್ ಅಲ್ಲದೆ ಅದ್ಭುತ ವಿಕೆಟ್‌ಕೀಪರ್ ಕೂಡ ಆಗಿದ್ದಾರೆ. ಕಳೆದ ಆವೃತ್ತಿಯ ಬಳಿಕ ಕ್ರಿಕೆಟ್​ಗೆ ವಿದಾಯ ಹೇಳಿದ್ದ ದಿನೇಶ್ ಕಾರ್ತಿಕ್ ನಿರ್ವಹಿಸುತ್ತಿದ್ದ ಕೆಲಸವನ್ನು ರಿಷಬ್ ಪಂತ್ ಮುಂದುವರೆಸಲಿದ್ದಾರೆ. ಹಾಗೆಯೇ ತಂಡಕ್ಕೆ ಸಮಸ್ಯೆಯಾಗಿರುವ ಮಧ್ಯಮ ಕ್ರಮಾಂಕಕ್ಕೆ ಪಂತ್ ಆನೆಬಲವನ್ನು ತಂದುಕೊಡಲಿದ್ದಾರೆ.

6 / 6
ಇನ್ನು ಕಳೆದ ಐಪಿಎಲ್​ನಲ್ಲಿ ಡೆಲ್ಲಿ ತಂಡದ ಪರ ಗಮನಾರ್ಹ ಪ್ರದರ್ಶನ ನೀಡಿದ್ದ ರಿಷಬ್ ಪಂತ್ 40.55 ಸರಾಸರಿಯಲ್ಲಿ 3 ಅರ್ಧಶತಕಗಳ ನೆರವಿನಿಂದ 446 ರನ್ ಗಳಿಸಿದ್ದರು. ಇಲ್ಲಿಯವರೆಗೆ, ಡೆಲ್ಲಿ ಪರ 111 ಪಂದ್ಯಗಳನ್ನಾಡಿರುವ ಪಂತ್, 35.31 ಸರಾಸರಿಯಲ್ಲಿ 3284 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಸೇರಿದಂತೆ 18 ಅರ್ಧ ಶತಕಗಳನ್ನು ಸಹ ದಾಖಲಿಸಿದ್ದಾರೆ.