GAM vs ZIM: ಒಂದೇ ಪಂದ್ಯದಲ್ಲಿ ಬರೋಬ್ಬರಿ 7 ವಿಶ್ವದಾಖಲೆ ನಿರ್ಮಿಸಿದ ಜಿಂಬಾಬ್ವೆ

GAM vs ZIM: ವಿಶ್ವಕಪ್ ಪ್ರಾದೇಶಿಕ ಅರ್ಹತಾ ಪಂದ್ಯದಲ್ಲಿ ಗ್ಯಾಂಬಿಯಾ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಜಿಂಜಾಬ್ವೆ ತಂಡ, ವಿಶ್ವ ಟಿ20 ಕ್ರಿಕೆಟ್​ನಲ್ಲಿ ಇದುವರೆಗೆ ವಿವಿದ ತಂಡಗಳ ಹೆಸರಲ್ಲಿ ದಾಖಲಾಗಿದ್ದ ಏಳು ಪ್ರಮುಖ ದಾಖಲೆಗಳನ್ನು ತನ್ನ ಖಾತೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದರಲ್ಲಿ ಟೀಂ ಇಂಡಿಯಾದ 7 ದಾಖಲೆಗಳು ಸೇರಿವೆ.

ಪೃಥ್ವಿಶಂಕರ
|

Updated on: Oct 23, 2024 | 8:57 PM

ಗ್ಯಾಂಬಿಯಾ ವಿರುದ್ಧದ ಟಿ20 ವಿಶ್ವಕಪ್ ಆಫ್ರಿಕಾ ಕ್ವಾಲಿಫೈಯರ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ ಕೇವಲ 120 ಎಸೆತಗಳಲ್ಲಿ ಬರೋಬ್ಬರಿ 344 ರನ್ ಕಲೆಹಾಕಿದೆ. ಈ ಮೂಲಕ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಹತ್ತು ಹಲವು ದಾಖಲೆಗಳನ್ನು ಸೃಷ್ಟಿಸಿದೆ. ಈ ನಡುವೆ ಈ ಒಂದೇ ಒಂದು ಪಂದ್ಯದಲ್ಲಿ ಜಿಂಬಾಬ್ವೆ ತಂಡ 7 ವಿಶ್ವದಾಖಲೆಗಳನ್ನು ಮುರಿಯುವಲ್ಲಿ ಯಶಸ್ವಿಯಾಗಿದೆ.

1 / 8
ಗ್ಯಾಂಬಿಯಾ ವಿರುದ್ಧದ ಈ ಪಂದ್ಯದಲ್ಲಿ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 344 ರನ್ ಕಲೆಹಾಕಿದ ಜಿಂಬಾಬ್ವೆ ತಂಡ ಅಂತರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಗರಿಷ್ಠ ಸ್ಕೋರ್ ದಾಖಲಿಸಿದ ಐಸಿಸಿಯ ಪೂರ್ಣ ಸದಸ್ಯ ತಂಡ ಎಂಬ ವಿಶ್ವದಾಖಲೆ ನಿರ್ಮಿಸಿದೆ. ಈ ಹಿಂದೆ ಬಾಂಗ್ಲಾದೇಶ ವಿರುದ್ಧ 297 ರನ್ ಗಳಿಸಿದ್ದ ಟೀಂ ಇಂಡಿಯಾ ಹೆಸರಿನಲ್ಲಿ ಈ ದಾಖಲೆ ಇತ್ತು.

2 / 8
ಇನ್ನು ಈ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಕಲೆಹಾಕಿದ 344 ರನ್​​ಗಳಲ್ಲಿ 282 ರನ್​ಗಳು ಕೇವಲ ಸಿಕ್ಸರ್ ಮತ್ತು ಬೌಂಡರಿಗಳಿಂದಲೇ ಬಂದವು. ಈ ಮೂಲಕ ಕೇವಲ ಬೌಂಡರಿ ಹಾಗೂ ಸಿಕ್ಸರ್​ಗಳ ಮೂಲಕ ಇಷ್ಟು ರನ್ ಕಲೆಹಾಕಿದ ಮೊದಲ ತಂಡ ಎಂಬ ವಿಶ್ವದಾಖಲೆ ಸಹ ಜಿಂಬಾಬ್ವೆ ಪಾಲಾಗಿದೆ. ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧದ ಟಿ20 ಪಂದ್ಯದಲ್ಲಿ ಬೌಂಡರಿಗಳ ನೆರವಿನಿಂದ 232 ರನ್ ಗಳಿಸಿದ್ದ ಟೀಂ ಇಂಡಿಯಾ ಹೆಸರಿನಲ್ಲಿ ಈ ದಾಖಲೆಯೂ ಇತ್ತು.

3 / 8
ಗ್ಯಾಂಬಿಯಾ ವಿರುದ್ಧ 57 ಬೌಂಡರಿಗಳನ್ನು ಬಾರಿಸಿದ ಜಿಂಬಾಬ್ವೆ, ಟಿ20 ಪಂದ್ಯವೊಂದರ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಬೌಂಡರಿ ಸಿಡಿಸಿದ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಿಂದೆ ಬಾಂಗ್ಲಾದೇಶದ ವಿರುದ್ಧ 47 ಬೌಂಡರಿ ಬಾರಿಸಿದ್ದ ಟೀಂ ಇಂಡಿಯಾ ಹೆಸರಿನಲ್ಲೇ ಈ ದಾಖಲೆಯೂ ಇತ್ತು.

4 / 8
ಈ ಪಂದ್ಯದಲ್ಲಿ ಬರೋಬ್ಬರಿ 27 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಜಿಂಬಾಬ್ವೆ ತಂಡ, ಟಿ20 ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಮೊದಲ ತಂಡವೆಂಬ ದಾಖಲೆಯನ್ನು ತನ್ನ ಖಾತೆಗೆ ಹಾಕಿಕೊಂಡಿದೆ. ಈ ಹಿಂದೆ ಈ ದಾಖಲೆ 26 ಸಿಕ್ಸರ್ ಬಾರಿಸಿದ್ದ ನೇಪಾಳ ತಂಡದ ಹೆಸರಿನಲ್ಲಿತ್ತು.

5 / 8
ಗ್ಯಾಂಬಿಯಾ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ತಂಡ ಕೇವಲ 12.5 ಓವರ್‌ಗಳಲ್ಲಿ 200 ರನ್ ಪೂರೈಸಿತು. ಈ ಮೂಲಕ ಅಂತರಾಷ್ಟ್ರೀಯ ಟಿ20ಯಲ್ಲಿ ವೇಗವಾಗಿ 200 ರನ್ ಗಳಿಸಿದ ತಂಡವೆಂಬ ಹೆಗ್ಗಳಿಕೆಗೂ ಜಿಂಬಾಬ್ವೆ ಪಾತ್ರವಾಗಿದೆ. ಈ ಹಿಂದೆ 13.5 ಓವರ್‌ಗಳಲ್ಲಿ ಈ ಸಾಧನೆ ಮಾಡಿದ್ದ ದಕ್ಷಿಣ ಆಫ್ರಿಕಾ ಹೆಸರಲ್ಲಿ ಈ ದಾಖಲೆ ಇತ್ತು.

6 / 8
ಇನ್ನು ಜಿಂಬಾಬ್ವೆ ನೀಡಿದ 344ರನ್​ಗಳ ಗುರಿ ಬೆನ್ನಟ್ಟಿದ ಗ್ಯಾಂಬಿಯಾ ತಂಡ ಕೇವಲ 54 ರನ್​ಗಳಿಗೆ ಆಲೌಟ್ ಆಯಿತು. ಹೀಗಾಗಿ ಜಿಂಬಾಬ್ವೆ ತಂಡ ಬರೋಬ್ಬರಿ 290 ರನ್‌ಗಳ ಜಯ ಸಾಧಿಸಿತು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಇದು ಅತಿ ದೊಡ್ಡ ಗೆಲುವು ದಾಖಲಿಸಿದ ದಾಖಲೆಯೂ ಜಿಂಬಾಬ್ವೆ ಪಾಲಾಗಿದೆ.

7 / 8
ಜಿಂಬಾಬ್ವೆಯ ಈ ಐತಿಹಾಸಿಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ನಾಯಕ ಸಿಕಂದರ್ ರಾಝಾ ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿದರು. ಇದರೊಂದಿಗೆ ಐಸಿಸಿಯ ಪೂರ್ಣ ಸದಸ್ಯ ತಂಡದ ಆಟಗಾರನೊಬ್ಬ ಸಿಡಿಸಿದ ವೇಗದ ಶತಕ ಎಂಬ ದಾಖಲೆ ರಾಝಾ ಪಾಲಾಯಿತು. ಇದಲ್ಲದೆ ಅವರು 35 ಎಸೆತಗಳಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಹಾಗೂ ಡೇವಿಡ್ ಮಿಲ್ಲರ್ ಅವರ ದಾಖಲೆಯನ್ನು ಮುರಿದರು.

8 / 8
Follow us