4 ಓವರ್ಗಳಲ್ಲಿ 93 ರನ್ಗಳು… 7 ರನ್ಗಳಿಂದ ಬೌಲರ್ಗೆ ಶತಕ ಮಿಸ್..!
Zimbabwe vs Gambia: ಟಿ20 ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಗ್ಯಾಂಬಿಯಾ ವಿರುದ್ಧ ಝಿಂಬಾಬ್ವೆ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ 344 ರನ್ ಕಲೆಹಾಕಿದರೆ, ಗ್ಯಾಂಬಿಯಾ ತಂಡವು ಕೇವಲ 54 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಝಿಂಬಾಬ್ವೆ ಪಡೆಯು 290 ರನ್ಗಳ ಅಮೋಘ ಗೆಲುವು ದಾಖಲಿಸಿದೆ.
Updated on: Oct 24, 2024 | 7:53 AM

ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ಗಳನ್ನು ಎಸೆದ ಕಳಪೆ ದಾಖಲೆಯೊಂದು ಮೂಸಾ ಜೋಬರ್ತೆ ಹೆಸರಿಗೆ ಸೇರ್ಪಡೆಯಾಗಿದೆ. ಅದು ಸಹ 24 ಎಸೆತಗಳಲ್ಲಿ 93 ರನ್ಗಳನ್ನು ನೀಡುವ ಮೂಲಕ ಎಂದರೆ ನಂಬಲೇಬೇಕು. ಅಂದರೆ ಇಲ್ಲಿ ಬೌಲರ್ಗೆ ಶತಕ ತಪ್ಪಿದ್ದು ಕೇವಲ 7 ರನ್ಗಳಿಂದ..!

ಹೌದು, ಟಿ20 ವಿಶ್ವಕಪ್ನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ ಗ್ಯಾಂಬಿಯಾ ಬೌಲರ್ ಮೂಸಾ ಜೋಬರ್ತೆ 4 ಓವರ್ಗಳಲ್ಲಿ ಬರೋಬ್ಬರಿ 93 ರನ್ಗಳನ್ನು ನೀಡಿದ್ದಾರೆ. ಈ ಮೂಲಕ ಟಿ20 ಪಂದ್ಯವೊಂದರಲ್ಲಿ ಅತ್ಯಧಿಕ ರನ್ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ಅನಗತ್ಯ ದಾಖಲೆ ಶ್ರೀಲಂಕಾದ ಕಸುನ್ ರಜಿತ ಹೆಸರಿನಲ್ಲಿತ್ತು. 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಸುನ್ 4 ಓವರ್ಗಳಲ್ಲಿ ಬರೋಬ್ಬರಿ 75 ರನ್ಗಳನ್ನು ನೀಡಿದ್ದರು. ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತ್ಯಂತ ದುಬಾರಿ ಸ್ಪೆಲ್ ಎಸೆದ ಬೌಲರ್ ಎನಿಸಿಕೊಂಡಿದ್ದರು.

ಇದೀಗ ಝಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮೂಸಾ ಜೋಬರ್ತೆ 4 ಓವರ್ಗಳಲ್ಲಿ 93 ರನ್ ಚಚ್ಚಿಸಿಕೊಂಡಿದ್ದಾರೆ. ಅಂದರೆ ಪ್ರತಿ ಓವರ್ಗೆ ಅವರು 23.25 ಸರಾಸರಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ದುಬಾರಿ ಓವರ್ಗಳನ್ನು ಎಸೆದ ಅನಗತ್ಯ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಅತ್ಯಂತ ದುಬಾರಿ ಓವರ್ಗಳನ್ನು ಎಸೆದ ಕೆಟ್ಟ ದಾಖಲೆ ಕನ್ನಡಿಗ ಪ್ರಸಿದ್ಧ್ ಕೃಷ್ಣ ಹೆಸರಿನಲ್ಲಿದೆ. 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಪ್ರಸಿದ್ಧ್ 4 ಓವರ್ಗಳಲ್ಲಿ 68 ರನ್ ಚಚ್ಚಿಸಿಕೊಳ್ಳುವ ಈ ಕಳಪೆ ದಾಖಲೆ ನಿರ್ಮಿಸಿದ್ದಾರೆ.
