IPL 2025: ಬೌಲರ್​ಗಳ ಬಹು ವರ್ಷಗಳ ಬೇಡಿಕೆಯನ್ನು ಈಡೇರಿಸಿದ ಬಿಸಿಸಿಐ

|

Updated on: Mar 20, 2025 | 4:07 PM

BCCI Relaxes IPL Rules: 2025ರ ಐಪಿಎಲ್‌ನಲ್ಲಿ ಬೌಲರ್‌ಗಳು ಚೆಂಡನ್ನು ಹೊಳಪು ಮಾಡಲು ಉಗುಳು ಬಳಸಲು ಬಿಸಿಸಿಐ ಅನುಮತಿ ನೀಡಿದೆ. ಕೋವಿಡ್ ಸಮಯದಲ್ಲಿ ಜಾರಿಗೆ ತಂದಿದ್ದ ನಿಷೇಧವನ್ನು ಇದೀಗ ಬಿಸಿಸಿಐ ರದ್ದುಗೊಳಿಸಿದೆ. ಆದಾಗ್ಯೂ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ನಿಷೇಧ ಹಾಗೆಯೇ ಮುಂದುವರೆಯಲಿದೆ.

1 / 6
2025 ರ ಐಪಿಎಲ್ ಆರಂಭಕ್ಕೆ ಇನ್ನೇರಡು ದಿನಗಳು ಬಾಕಿ ಉಳಿದಿರುವಾಗ ಬೌಲರ್​ಗಳು ಖುಷಿ ಪಡುವ ನಿಯಮವೊಂದನ್ನು ಬಿಸಿಸಿಐ ಬದಲಿಸುವ ಕೆಲಸ ಮಾಡಿದೆ. ಕೊರೊನಾ ಸಮಯದಲ್ಲಿ ತಂದಿದ್ದ ನಿಯಮವನ್ನು ರದ್ದುಗೊಳಿಸುವ ಮೂಲಕ ಬೌಲರ್​ಗಳ ಪರ ಬ್ಯಾಟ್ ಬೀಸಿರುವ ಬಿಸಿಸಿಐ, ಇನ್ನು ಮುಂದೆ ಬೌಲರ್​ಗಳು ಚೆಂಡಿನ ಮೇಲೆ ಸಲೈವ ಬಳಕೆಗೆ ಅನುಮತಿ ನೀಡಿದೆ.

2 / 6
ಮೇಲೆ ಹೇಳಿದಂತೆ 2020 ರಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚಿದ್ದ ಕಾರಣ ಬೌಲಿಂಗ್ ವೇಳೆ ಚೆಂಡಿನ ಮೇಲೆ ಎಂಜಲು ಹಚ್ಚುವುದನ್ನು ಐಸಿಸಿ ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ನಿಷೇದಿಸಿತ್ತು. ಆ ಬಳಿಕ ಈ ನಿಯಮವನ್ನು ಐಪಿಎಲ್​ನಲ್ಲೂ ಜಾರಿಗೆ ತಂದಿದ್ದ ಬಿಸಿಸಿಐ, ಬೌಲರ್​ಗಳು ಚೆಂಡಿನ ಮೇಲೆ ಉಗುಳು ಹಚ್ಚುವುದನ್ನು ರದ್ದುಗೊಳಿಸಿತ್ತು.

3 / 6
ವಾಸ್ತವವಾಗಿ ಬೌಲರ್​ಗಳು ಚೆಂಡಿನ ಹೊಳಪನ್ನು ಹೆಚ್ಚಿಸುವ ಸಲುವಾಗಿ ತಾವು ಬೌಲಿಂಗ್ ಮಾಡುವ ವೇಳೆ ತಮ್ಮ ಎಂಜಲನ್ನು ಚೆಂಡಿನ ಮೇಲೆ ಲೇಪನ ಮಾಡುತ್ತಿದ್ದರು. ಎಂಜಲು ಮಾತ್ರವಲ್ಲದೆ ತಮ್ಮ ಬೆವರನ್ನು ಇದಕ್ಕೆ ಬಳಸುತ್ತಿದ್ದರು. ಆದರೆ ಕೊರೊನಾ ಸಮಯದಲ್ಲಿ ಎಂಜಲು ಬಳಸುವುದಕ್ಕೆ ನಿಷೇದ ಹೇರಿದ್ದ ಬಿಸಿಸಿಐ, ಬೆವರು ಬಳಸುವುದಕ್ಕ ಅನುಮತಿ ನೀಡಿತ್ತು.

4 / 6
ಬಿಸಿಸಿಐನ ಈ ನಿಷೇದದಿಂದಾಗಿ ಬೌಲರ್​ಗಳು ಸಾಕಷ್ಟು ಕಷ್ಟಪಡಬೇಕಾಗಿತ್ತು. ಹೀಗಾಗಿ ಕೊರೊನಾ ಹಾವಳಿ ಕಡಿಮೆಯಾದ ಬಳಿಕ ಹಲವು ಬೌಲರ್​ಗಳು ಈ ನಿಯಮವನ್ನು ತೆಗೆದು ಹಾಕುವಂತೆ ಬಿಸಿಸಿಐ ಬಳಿ ಬೇಡಿಕೆ ಇಟ್ಟಿದ್ದರು. ಇದೀಗ ಬೌಲರ್​ಗಳ ಬಹು ದಿನಗಳ ಬೇಡಿಕೆಯನ್ನು ಈಡೇರಿಸಿರುವ ಬಿಸಿಸಿಐ, ಚೆಂಡಿನ ಮೇಲೆ ಎಂಜಲನ್ನು ಲೇಪನ ಮಾಡುವುದಕ್ಕೆ ಅನುಮತಿ ನೀಡಿದೆ.

5 / 6
ವಾಸ್ತವವಾಗಿ ಇಂದು ಮುಂಬೈನ ಕೇಂದ್ರ ಕಛೇರಿಯಲ್ಲಿ ಬಿಸಿಸಿಐ, ಎಲ್ಲಾ ಐಪಿಎಲ್ ತಂಡಗಳ ನಾಯಕರ ಸಭೆ ಕರೆದಿದೆ. ಈ ಸಭೆಯಲ್ಲಿ ಮಂಡಳಿಯು ಎಲ್ಲಾ ನಾಯಕರಿಗೆ ಈ ನಿರ್ಧಾರದ ಬಗ್ಗೆ ತಿಳಿಸಿದೆ. ಇದರರ್ಥ ಮಾರ್ಚ್ 22 ರಂದು ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಬೌಲರ್‌ಗಳು ಚೆಂಡನ್ನು ಹೊಳಪು ಮಾಡಲು ಎಂಜಲು ಬಳಸುವುದನ್ನು ನಾವು ನೋಡಬಹುದಾಗಿದೆ.

6 / 6
ಆದಾಗ್ಯೂ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ನಿಷೇಧ ಹಾಗೆಯೇ ಮುಂದುವರೆಯಲಿದೆ. ಕೊರೊನಾ ಸಾಂಕ್ರಾಮಿಕ ರೋಗ ಮುಗಿದ ನಂತರ, ಐಸಿಸಿ ಇದನ್ನು ಶಾಶ್ವತವಾಗಿ ಜಾರಿಗೆ ತಂದಿತು. ಅಂತಹ ಪರಿಸ್ಥಿತಿಯಲ್ಲಿ, ಆಟಗಾರರು ತಮ್ಮ ಬೆವರನ್ನು ಬಳಸಿ ಚೆಂಡನ್ನು ಶೈನಿಂಗ್ ಮಾಡಬಹುದಾಗಿದೆ. ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲೂ ಈ ನಿಷೇಧವನ್ನು ತೆಗೆದುಹಾಕುವಂತೆ ಬೇಡಿಕೆ ಇದೆಯಾದರೂ ಐಸಿಸಿ ಮಾತ್ರ ಈ ನಿಯಮವನ್ನು ಬದಲಿಸುವ ಮನಸು ಮಾಡಿಲ್ಲ.