IPL 2025: ಮೆಗಾ ಹರಾಜಿನ ನಂತರ ಈ 6 ತಂಡಗಳ ನಾಯಕತ್ವದಲ್ಲಿ ಬದಲಾವಣೆ..!

|

Updated on: Jul 18, 2024 | 5:00 PM

IPL 2025: 2025 ರ ಐಪಿಎಲ್​ಗೆ ಈಗಿನಿಂದಲೇ ತಯಾರಿ ಆರಂಭವಾಗಿದೆ. ಈ ವರ್ಷಾಂತ್ಯದಲ್ಲಿ ಮೆಗಾ ಹರಾಜು ನಡೆಯಲಿದ್ದು, ಆ ಬಳಿಕ ಹಲವು ತಂಡಗಳಲ್ಲಿ ಮತ್ತೊಮ್ಮೆ ದೊಡ್ಡ ಬದಲಾವಣೆ ಕಾಣಬಹುದಾಗಿದೆ. ಹಲವು ತಂಡಗಳು ಈಗಾಗಲೇ ಬದಲಾವಣೆಗಳನ್ನು ತರಲಾರಂಭಿಸಿದ್ದು, ಅದರಂತೆ ಈ 6 ತಂಡದ ನಾಯಕರು ಬದಲಾಗುವ ಸಾಧ್ಯತೆಗಳು ದಟ್ಟವಾಗಿವೆ.

1 / 7
2025 ರ ಐಪಿಎಲ್​ಗೆ ಈಗಿನಿಂದಲೇ ತಯಾರಿ ಆರಂಭವಾಗಿದೆ. ಈ ವರ್ಷಾಂತ್ಯದಲ್ಲಿ ಮೆಗಾ ಹರಾಜು ನಡೆಯಲಿದ್ದು, ಆ ಬಳಿಕ ಹಲವು ತಂಡಗಳಲ್ಲಿ ಮತ್ತೊಮ್ಮೆ ದೊಡ್ಡ ಬದಲಾವಣೆ ಕಾಣಬಹುದಾಗಿದೆ. ಹಲವು ತಂಡಗಳು ಈಗಾಗಲೇ ಬದಲಾವಣೆಗಳನ್ನು ತರಲಾರಂಭಿಸಿದ್ದು, ಅದರಂತೆ ಈ 6 ತಂಡದ ನಾಯಕರು ಬದಲಾಗುವ ಸಾಧ್ಯತೆಗಳು ದಟ್ಟವಾಗಿವೆ.

2 / 7
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ ಆಟಗಾರನಾಗಿ ಮತ್ತು ನಾಯಕನಾಗಿ ಫ್ರಾಂಚೈಸಿಗೆ ಉತ್ತಮ ಕೆಲಸ ಮಾಡಿದ್ದಾರೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಇನ್ನೂ ಟ್ರೋಫಿ ಗೆಲ್ಲಲು ತಂಡಕ್ಕೆ ಸಾಧ್ಯವಾಗಿಲ್ಲ. ಆದ್ದರಿಂದ, ಬದಲಾವಣೆಯತ್ತ ನೋಡುತ್ತಿರುವ ಆರ್​ಸಿಬಿ ಮೆಗಾ ಹರಾಜಿನಲ್ಲಿ ಹೊಸ ನಾಯಕನನ್ನು ಹುಡುಕಬಹುದು.

3 / 7
ಲಕ್ನೋ ಸೂಪರ್ ಜೈಂಟ್ಸ್: ಮುಂಬರುವ ಆವೃತ್ತಿಗೂ ಮುನ್ನ ಲಕ್ನೋ ತಂಡದ ನಾಯಕ ಬದಲಾಗಬಹುದು ಎಂಬ ವರದಿ ಈಗಾಗಲೇ ಕೇಳಲು ಶುರುವಾಗಿದೆ. ಐಪಿಎಲ್ 2022 ರಲ್ಲಿ ಲಕ್ನೋ ಕೆಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ಮಾಡಿತ್ತು. ಆದರೆ ಅವರ ನಾಯಕತ್ವದ ತಂಡವು ಇಲ್ಲಿಯವರೆಗೆ ವಿಶೇಷವಾದ ಏನನ್ನೂ ಮಾಡಲು ಸಾಧ್ಯವಾಗಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಲಕ್ನೋ ಮುಂಬರುವ ಸೀಸನ್​ನಿಂದ ಹೊಸ ನಾಯಕನಿಗೆ ತಂಡದ ಜವಬ್ದಾರಿ ನೀಡುವ ಸಾಧ್ಯತೆಗಳಿವೆ.

4 / 7
ಚೆನ್ನೈ ಸೂಪರ್ ಕಿಂಗ್ಸ್: ಕಳೆದ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ರುತುರಾಜ್ ಗಾಯಕ್ವಾಡ್ ಅವರಿಗೆ ಹಸ್ತಾಂತರಿಸಿತ್ತು. ಆದರೆ, ಈಗ ಮೆಗಾ ಹರಾಜಿನ ನಂತರ ಧೋನಿ ತಂಡದ ಕಮಾಂಡ್ ಬೇರೆಯವರಿಗೆ ಹಸ್ತಾಂತರಿಸಬಹುದು. ಗಾಯಕ್‌ವಾಡ್ ನಾಯಕತ್ವದಲ್ಲಿ, ಚೆನ್ನೈ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ ಮತ್ತು 5 ನೇ ಸ್ಥಾನ ಪಡೆಯುವ ಮೂಲಕ ಪಂದ್ಯಾವಳಿಯಿಂದ ಹೊರಬಿತ್ತು.

5 / 7
ಪಂಜಾಬ್ ಕಿಂಗ್ಸ್: ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಅವರ ಫಿಟ್ನೆಸ್ ತಂಡಕ್ಕೆ ದೊಡ್ಡ ಸಮಸ್ಯೆಯಾಗಿದೆ. 2022 ರಲ್ಲಿ ಪಂಜಾಬ್ ಫ್ರಾಂಚೈಸಿಯ ಕಮಾಂಡ್ ಅನ್ನು ಧವನ್‌ಗೆ ಹಸ್ತಾಂತರಿಸಿತ್ತು. ಆದರೆ, ಅವರ ನಾಯಕತ್ವದಲ್ಲಿ ತಂಡವು ವಿಶೇಷ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ ಮತ್ತು ಪ್ಲೇಆಫ್ ತಲುಪಲು ಸಾಧ್ಯವಾಗಲಿಲ್ಲ. ಇದಷ್ಟೇ ಅಲ್ಲ, ಕಳೆದ ಸೀಸನ್​ನಲ್ಲಿ ಧವನ್ ಫಿಟ್ನೆಸ್ ಸಂಬಂಧಿತ ಸಮಸ್ಯೆಗಳಿಂದ ಕೇವಲ 5 ಪಂದ್ಯಗಳನ್ನು ಮಾತ್ರ ಆಡಲು ಸಾಧ್ಯವಾಯಿತು. ಉಳಿದ ಪಂದ್ಯಗಳಲ್ಲಿ ಸ್ಯಾಮ್ ಕರನ್ ತಂಡವನ್ನು ಮುನ್ನಡೆಸಿದ್ದರು.

6 / 7
ಮುಂಬೈ ಇಂಡಿಯನ್ಸ್: ಮುಂಬೈ ಇಂಡಿಯನ್ಸ್ ಕೂಡ ಕಳೆದ ಆವೃತ್ತಿಯಲ್ಲಿ ತಂಡದ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯಗೆ ಹಸ್ತಾಂತರಿಸಿತ್ತು. ಆದರೆ, ಅವರ ನೇತೃತ್ವದ ತಂಡದ ಪ್ರದರ್ಶನ ವಿಶೇಷವಾಗಿರಲಿಲ್ಲ. ಕೊನೆಯ ಸ್ಥಾನದೊಂದಿಗೆ ತಂಡ ಟೂರ್ನಿಯಿಂದ ಹೊರಬಿದ್ದಿತ್ತು. ಇತ್ತ ರೋಹಿತ್ ಶರ್ಮಾ 2024 ರ T20 ವಿಶ್ವಕಪ್‌ನಲ್ಲಿ ಭಾರತವನ್ನು ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದ್ದಾರೆ. ಹೀಗಾಗಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ವಿಶ್ವ ಚಾಂಪಿಯನ್ ಕ್ಯಾಪ್ಟನ್‌ಗೆ ಮರಳಿ ಹಸ್ತಾಂತರಿಸಬಹುದು.

7 / 7
ಡೆಲ್ಲಿ ಕ್ಯಾಪಿಟಲ್ಸ್: ವರದಿಗಳ ಪ್ರಕಾರ, ರಿಷಬ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ತೊರೆಯಬಹುದು ಎಂಬ ಸುದ್ದಿ ಹೊರಬೀಳುತ್ತಿದೆ. ಸ್ವತಃ ಪಂತ್ ಅವರೇ ಡೆಲ್ಲಿ ತಂಡವನ್ನು ತೊರೆಯುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಪಂತ್ ಡೆಲ್ಲಿ ತಂಡವನ್ನು ತೊರೆದರೆ, ಐಪಿಎಲ್ 2025 ರಲ್ಲಿ ಅಕ್ಷರ್ ಪಟೇಲ್ ತಂಡದ ನಾಯಕತ್ವವನ್ನು ವಹಿಸಿಕೊಳ್ಳಬಹುದು.