IPL 2026: ಅಕ್ಷರ್ ಪಟೇಲ್​ಗೆ ಕೊಕ್: ಡೆಲ್ಲಿ ಕ್ಯಾಪಿಟಲ್ಸ್​ಗೆ ಹೊಸ ನಾಯಕ

Updated on: Sep 01, 2025 | 2:54 PM

Delhi Capitals: ಇಂಡಿಯನ್ ಪ್ರೀಮಿಯರ್ ಲೀಗ್​ 2025 ರಲ್ಲಿ ಅಕ್ಷರ್ ಪಟೇಲ್ ಮುಂದಾಳತ್ವದಲ್ಲಿ ಕಣಕ್ಕಿಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 14 ಮ್ಯಾಚ್​ಗಳಲ್ಲಿ ಗೆದ್ದಿದ್ದು ಕೇವಲ 7 ಪಂದ್ಯಗಳನ್ನು ಮಾತ್ರ. ಅಲ್ಲದೆ ಪ್ಲೇಆಫ್ ಪ್ರವೇಶಿಸುವಲ್ಲಿಯೂ ಡೆಲ್ಲಿ ಕ್ಯಾಪಿಟಲ್ಸ್ ವಿಫಲವಾಗಿತ್ತು. ಇದೇ ಕಾರಣದಿಂದಾಗಿ ಮುಂಬರುವ ಸೀಸನ್​ನಲ್ಲಿ ಹೊಸ ನಾಯಕನನ್ನು ಕಣಕ್ಕಿಳಿಸಲು ಡಿಸಿ ಫ್ರಾಂಚೈಸಿ ಮುಂದಾಗಿದೆ.

1 / 5
ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಸೀಸನ್-19 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಹೊಸ ನಾಯಕ ಮುನ್ನಡೆಸಲಿದ್ದಾರೆ. ಕಳೆದ ಬಾರಿ ತಂಡವನ್ನು ಮುನ್ನಡೆಸಿದ್ದ ಅಕ್ಷರ್ ಪಟೇಲ್ (Axar Patel ) ಅವರನ್ನು ನಾಯಕತ್ವದಿಂದ ವಜಾಗೊಳಿಸಲಿದ್ದಾರೆ ಎಂದು ವರದಿಯಾಗಿದೆ. 

2 / 5
ಅದರಂತೆ ಐಪಿಎಲ್ 2026 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಹೊಸ ನಾಯಕ ಮುನ್ನಡೆಸಲಿದ್ದಾರೆ. ಈ ಹೊಸ ನಾಯಕ ಯಾರೆಂಬುದು ಇನ್ನೂ ಸಹ ಬಹಿರಂಗವಾಗಿಲ್ಲ. ಇದಾಗ್ಯೂ ಕ್ಯಾಪ್ಟನ್ ರೇಸ್​ನಲ್ಲಿ ಮೂವರ ಹೆಸರುಗಳು ಕೇಳಿ ಬರುತ್ತಿವೆ. ಅವರೆಂದರೆ...

3 / 5
ಕೆಎಲ್ ರಾಹುಲ್: ಡೆಲ್ಲಿ ಕ್ಯಾಪಿಟಲ್ಸ್ ತಂಡವು ಕಳೆದ ಬಾರಿಯ ಮೆಗಾ ಹರಾಜಿನ ಮೂಲಕ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಬರೋಬ್ಬರಿ 14 ಕೋಟಿ ರೂ.ಗೆ ಖರೀದಿಸಿತ್ತು. ಅತ್ತ ವಿಕೆಟ್ ಕೀಪರ್, ಆರಂಭಿಕನಾಗಿ ಅದ್ಭುತ ಪ್ರದರ್ಶನ ನೀಡಿರುವ ರಾಹುಲ್​ ಅವರಿಗೆ ಕ್ಯಾಪ್ಟನ್ ಪಟ್ಟ ನೀಡಲು ಡಿಸಿ ಫ್ರಾಂಚೈಸಿ ಆಸಕ್ತಿ ಹೊಂದಿದೆ. ಕೆಎಲ್ ರಾಹುಲ್ ಐಪಿಎಲ್​​ನಲ್ಲಿ 64 ಪಂದ್ಯಗಳಲ್ಲಿ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದು, ಹೀಗಾಗಿ ಮುಂದಿನ ಸೀಸನ್​ನಲ್ಲಿ ಡಿಸಿ ತಂಡದ ನಾಯಕರಾಗಿ ಕಾಣಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

4 / 5
ಫಾಫ್ ಡುಪ್ಲೆಸಿಸ್: ಕಳೆದ ಸೀಸನ್​​ನಲ್ಲಿ 2 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರ್ಪಡೆಯಾಗಿರುವ ಫಾಫ್ ನಾಯಕತ್ವದ ಆಕಾಂಕ್ಷಿ. ಏಕೆಂದರೆ ಫಾಫ್ ಐಪಿಎಲ್​​ನಲ್ಲಿ 42 ಪಂದ್ಯಗಳಲ್ಲಿ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಸೌತ್ ಆಫ್ರಿಕಾ ತಂಡವನ್ನು ಮುನ್ನಡೆಸಿದ ಅನುಭವವು ಕೂಡ ಅವರ ಜೊತೆಗಿದೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಅನುಭವಿ ನಾಯಕನ ಮೊರೆ ಹೋದರೆ ಫಾಫ್​​ಗೆ ಕ್ಯಾಪ್ಟನ್ ಪಟ್ಟ ಸಿಗಲಿದೆ.

5 / 5
ಟ್ರಿಸ್ಟನ್ ಸ್ಟಬ್ಸ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಯುವ ಸ್ಫೋಟಕ ದಾಂಡಿಗ ಟ್ರಿಸ್ಟನ್ ಸ್ಟಬ್ಸ್ ಹೆಸರು ಕೂಡ ನಾಯಕತ್ವದ ರೇಸ್​ನಲ್ಲಿ ಕೇಳಿ ಬಂದಿದೆ. ತಂಡದ ಸ್ಥಿರ ಪ್ರದರ್ಶನ ನೀಡುವ ಆಟಗಾರನಾಗಿರುವ ಕಾರಣ ಸ್ಟಬ್ಸ್ ಅವರಿಗೆ ಕ್ಯಾಪ್ಟನ್ ಪಟ್ಟ ನೀಡಿ ಪ್ರಯೋಗ ನಡೆಸುವ ಸಾಧ್ಯತೆಯನ್ನು ಸಹ ತಳ್ಳಿ ಹಾಕುವಂತಿಲ್ಲ. 