IPL 2026: ಸೋಲುಗಳಿಂದ ಕಂಗೆಟ್ಟಿರುವ ಡೆಲ್ಲಿ ಕ್ಯಾಪಿಟಲ್ಸ್​ಗೆ ಬಂತು ಆನೆ ಬಲ

Updated on: Apr 23, 2026 | 8:29 PM

Mitchell Starc Returns to Delhi Capitals: ಡೆಲ್ಲಿ ಕ್ಯಾಪಿಟಲ್ಸ್ ತಂಡ ಐಪಿಎಲ್ 2026 ರಲ್ಲಿ ಆರು ಪಂದ್ಯಗಳಲ್ಲಿ ಮೂರು ಸೋಲು ಕಂಡಿದೆ. ತಂಡದ ಕಳಪೆ ಪ್ರದರ್ಶನದ ನಡುವೆ, ಸ್ಟಾರ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ತಂಡಕ್ಕೆ ಮರಳುತ್ತಿದ್ದಾರೆ. ಮೊಣಕೈ ಗಾಯದಿಂದ ಚೇತರಿಸಿಕೊಂಡ ಸ್ಟಾರ್ಕ್ ಮೇ 1 ರಂದು ರಾಜಸ್ಥಾನ ರಾಯಲ್ಸ್ ವಿರುದ್ಧ ಆಡುವ ನಿರೀಕ್ಷೆಯಿದೆ. ಅವರ ಆಗಮನವು ಡೆಲ್ಲಿ ತಂಡದ ಬೌಲಿಂಗ್ ಅನ್ನು ಬಲಪಡಿಸುವುದು ಖಚಿತ.

1 / 5
ಐಪಿಎಲ್ 2026 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರದರ್ಶನ ಇಲ್ಲಿಯವರೆಗೆ ನಿರಾಶಾದಾಯಕವಾಗಿದೆ. ತಂಡವು ಆರು ಪಂದ್ಯಗಳನ್ನು ಆಡಿದ್ದು, ಮೂರರಲ್ಲಿ ಸೋತಿದೆ. ತನ್ನ ಮುಂದಿನ ಪಂದ್ಯದಲ್ಲಿ ಅಜೇಯ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲು ಸಜ್ಜಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಒಳ್ಳೆಯ ಸುದ್ದಿ ಬಂದಿದೆ. ತಂಡದ ಸ್ಟಾರ್ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಇಷ್ಟರಲ್ಲೇ ತಂಡವನ್ನು ಕೂಡಿಕೊಳ್ಳಲಿದ್ದಾರೆ.

2 / 5
ಮೊಣಕೈ ಮತ್ತು ಭುಜದ ಗಾಯಗಳಿಂದಾಗಿ ಕಳೆದ ಜನವರಿಯಿಂದ ಆಟದಿಂದ ಹೊರಗುಳಿರುವ ವೇಗಿ ಮಿಚೆಲ್ ಸ್ಟಾರ್ಕ್​ಗೆ ಕ್ರಿಕೆಟ್ ಆಸ್ಟ್ರೇಲಿಯಾ, 2026 ರ ಐಪಿಎಲ್‌ನಲ್ಲಿ ಆಡಲು ಅನುಮತಿ ನೀಡಿದೆ. ಹೀಗಾಗಿ 36 ವರ್ಷದ ಮಾರ್ಚ್​ ಮೇ 1 ರಂದು ನಡೆಯಲಿರುವ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುವ ನಿರೀಕ್ಷೆಯಿದೆ. ಇದು ಅವರ ಈ ಆವೃತ್ತಿಯ ಮೊದಲ ಐಪಿಎಲ್ ಪಂದ್ಯವಾಗಿದೆ.

3 / 5
ವಾಸ್ತವವಾಗಿ ಮಿಚೆಲ್ ಸ್ಟಾರ್ಕ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 11.75 ಕೋಟಿಗೆ ರೂ. ನೀಡಿ ತಂಡದಲ್ಲಿ ಉಳಿಸಿಕೊಂಡಿತ್ತು. ಅದ್ಭುತ ಫಾರ್ಮ್​ನಲ್ಲಿರುವ ಸ್ಟಾರ್ಕ್​ ತವರಿನಲ್ಲಿ ನಡೆದ ಆಶಸ್ ಸರಣಿಯ ಎಲ್ಲಾ ಐದು ಟೆಸ್ಟ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಸರಣಿಯ ಆಟಗಾರ ಪ್ರಶಸ್ತಿಗೂ ಭಾಜನಾರಗಿದ್ದರು. ನಂತರ ಅವರು ಸಿಡ್ನಿ ಸಿಕ್ಸರ್ಸ್‌ ಪರ ಐದು ಬಿಗ್ ಬ್ಯಾಷ್ ಲೀಗ್ ಪಂದ್ಯಗಳನ್ನು ಆಡಿದ್ದರು.

4 / 5
ಇದೀಗ ಐಪಿಎಲ್‌ನಲ್ಲಿ ಆಡಲು ಸ್ಟಾರ್ಕ್ ಭಾರತಕ್ಕೆ ಮರಳಲಿದ್ದು ಮೇ 1 ರ ಪಂದ್ಯಕ್ಕೆ ಸಿದ್ಧರಾಗುವ ನಿರೀಕ್ಷೆಯಿದೆ. ಕಳೆದ ಆವೃತ್ತಿಯಲ್ಲಿ, ಸ್ಟಾರ್ಕ್ ಡೆಲ್ಲಿ ಕ್ಯಾಪಿಟಲ್ಸ್ ಪರ 11 ಪಂದ್ಯಗಳನ್ನು ಆಡಿದ್ದು, 14 ವಿಕೆಟ್‌ಗಳನ್ನು ಕಬಳಿಸಿದ್ದರು. ಅಂದರೆ ಸ್ಟಾರ್ಕ್ ಅವರ ಆಗಮನವು ಡೆಲ್ಲಿ ತಂಡದ ಬೌಲಿಂಗ್ ಅನ್ನು ಮತ್ತಷ್ಟು ಬಲಪಡಿಸುವುದಂತೂ ಖಚಿತ.

5 / 5
ಮಿಚೆಲ್ ಸ್ಟಾರ್ಕ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಒಟ್ಟು 52 ಪಂದ್ಯಗಳನ್ನು ಆಡಿದ್ದು, 65 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರ ಅತ್ಯುತ್ತಮ ಪ್ರದರ್ಶನವೆಂದರೆ 35 ರನ್​ಗಳಿಗೆ 5 ವಿಕೆಟ್ ಪಡೆದಿರುವುದು. ಹಾಗೆಯೇ ಸ್ಟಾರ್ಕ್​ ಐಪಿಎಲ್‌ನಲ್ಲಿ ಎರಡು ಬಾರಿ 4 ವಿಕೆಟ್ ಗೊಂಚಲು ಮತ್ತು ಒಂದು ಬಾರಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ.

Follow Us