PBKS vs MI: ನಾಯಕರ ಬದಲಾವಣೆಯಲ್ಲೂ ದಾಖಲೆ ಬರೆದ ಮುಂಬೈ ಇಂಡಿಯನ್ಸ್

Updated on: May 14, 2026 | 9:56 PM

Jasprit Bumrah's MI Captaincy Debut: ಐಪಿಎಲ್ 2026 ರ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡು ಇತಿಹಾಸ ಸೃಷ್ಟಿಸಿದರು. ಈ ಆವೃತ್ತಿಯಲ್ಲಿ ಮುಂಬೈನ ಮೂರನೇ ನಾಯಕನಾಗಿ, ಬುಮ್ರಾ ತಮ್ಮ ಮೊದಲ ನಾಯಕತ್ವದ ಅವಕಾಶವನ್ನು ಪಡೆದರು. ಮುಂಬೈ ಇಂಡಿಯನ್ಸ್ ಒಂದೇ ಆವೃತ್ತಿಯಲ್ಲಿ ಮೂವರು ನಾಯಕರನ್ನು ಬದಲಿಸಿದ ಏಕೈಕ ತಂಡ ಎಂಬ ದಾಖಲೆ ನಿರ್ಮಿಸಿದೆ. ಐಪಿಎಲ್ ಇತಿಹಾಸದಲ್ಲಿ ಎರಡು ಬಾರಿ ಈ ದಾಖಲೆ ಮಾಡಿದ ಮೊದಲ ತಂಡ ಮುಂಬೈ.

1 / 6
ಐಪಿಎಲ್ 2026 ರ 58ನೇ ಪಂದ್ಯ ಪಂಜಾಬ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವಹಿಸಿಕೊಂಡಿದ್ದರು. 2013 ರ ಐಪಿಎಲ್​ನಿಂದಲೂ ಮುಂಬೈ ತಂಡದ ಪರ ಆಡುತ್ತಿರುವ ಬುಮ್ರಾಗೆ ಇದೇ ಮೊದಲ ಬಾರಿಗೆ ಮುಂಬೈ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿತ್ತು.

2 / 6
ಈ  ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೂರನೇ ನಾಯಕ ಜಸ್ಪ್ರೀತ್ ಬುಮ್ರಾ. ವಾಸ್ತವವಾಗಿ ಮುಂಬೈ ಇಂಡಿಯನ್ಸ್ ತಂಡ ಹೆಚ್ಚಾಗಿ ತಂಡದ ನಾಯಕರನ್ನು ಬದಲಿಸುವುದಿಲ್ಲ. ಅದರಲ್ಲೂ ಆವೃತ್ತಿಯ ನಡುವೆ ಮುಂಬೈ ತಂಡದಲ್ಲಿ ನಾಯಕರು ಬದಲಾಗುವುದು ತೀರ ವಿರಳ. ಆದರೆ ಈ ಆವೃತ್ತಿಯಲ್ಲಿ ಮುಂಬೈ ಮೂವರು ನಾಯಕರನ್ನು ಬದಲಿಸುವುದರೊಂದಿಗೆ ವಿಶಿಷ್ಟ ದಾಖಲೆ ಸೃಷ್ಟಿಯಾಗಿದೆ.

3 / 6
ಐಪಿಎಲ್ ಟೂರ್ನಿಯ ಇತಿಹಾಸದಲ್ಲಿ ಎರಡು ಆವೃತ್ತಿಗಳಲ್ಲಿ 3 ನಾಯಕರನ್ನು ಬದಲಾಯಿಸಿದ ಏಕೈಕ ತಂಡ ಎಂಬ ದಾಖಲೆ ಇದೀಗ ಮುಂಬೈ ಇಂಡಿಯನ್ಸ್ ಪಾಲಾಗಿದೆ. ಇದಕ್ಕೂ ಮೊದಲು, ಮುಂಬೈ ಇಂಡಿಯನ್ಸ್ 2008 ರಲ್ಲಿ ಮೂವರು ನಾಯಕರನ್ನು ಬದಲಿಸಿತ್ತು. ಈ ಆವೃತ್ತಿಯಲ್ಲಿ ಹರ್ಭಜನ್ ಸಿಂಗ್, ಶಾನ್ ಪೊಲಾಕ್ ಮತ್ತು ಸಚಿನ್ ತೆಂಡೂಲ್ಕರ್ ತಂಡದ ನಾಯಕರಾಗಿದ್ದರು.

4 / 6
ಮುಂಬೈ ಹೊರತುಪಡಿಸಿ ಇತರ ತಂಡಗಳು ಕೂಡ ಒಂದೇ ಆವೃತ್ತಿಯಲ್ಲಿ ಮೂವರು ನಾಯಕರನ್ನು ಬದಲಿಸಿವೆ. 2013 ರಲ್ಲಿ ಪುಣೆ ವಾರಿಯರ್ಸ್ ಮೂವರು ನಾಯಕರನ್ನು ಬದಲಾಯಿಸಿತ್ತು. ಆಗ ಏಂಜೆಲೊ ಮ್ಯಾಥ್ಯೂಸ್, ರಾಸ್ ಟೇಲರ್ ಮತ್ತು ಆರನ್ ಫಿಂಚ್ ನಾಯಕತ್ವದ ಪಾತ್ರವನ್ನು ನಿರ್ವಹಿಸಿದ್ದರು.

5 / 6
ಐಪಿಎಲ್ 2021 ರಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ಒಂದೇ ಸೀಸನ್​ನಲ್ಲಿ ಮೂವರು ನಾಯಕರನ್ನು ಬದಲಾಯಿಸಿತ್ತು. ಡೇವಿಡ್ ವಾರ್ನರ್ ನಂತರ, ಕೇನ್ ವಿಲಿಯಮ್ಸನ್ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ವಹಿಸಲಾಗಿತ್ತು. ಅದರ ನಂತರ, ಮನೀಶ್ ಪಾಂಡೆ ತಂಡವನ್ನು ಮುನ್ನಡೆಸಿದ್ದರು.

6 / 6
2024 ರಲ್ಲಿ ಪಂಜಾಬ್ ಕಿಂಗ್ಸ್ ತಂಡವು ಮೂವರು ನಾಯಕರನ್ನು ಬದಲಿಸಿತ್ತು. ಶಿಖರ್ ಧವನ್ ನಂತರ, ಸ್ಯಾಮ್ ಕರನ್ ಅವರಿಗೆ ತಂಡದ ನಾಯಕತ್ವದ ಜವಾಬ್ದಾರಿಯನ್ನು ವಹಿಸಲಾಗಿತ್ತು. ಇವರಿಬ್ಬರ ಬಳಿಕ ಜಿತೇಶ್ ಶರ್ಮಾ ಕೂಡ ತಂಡವನ್ನು ಮುನ್ನಡೆಸಿದ್ದರು.

Follow Us