RCB vs GT: ಅತಿ ಹೆಚ್ಚು ಶತಕಗಳು; ಅನಗತ್ಯ ದಾಖಲೆ ಬರೆದ ಆರ್​​ಸಿಬಿ

Updated on: Apr 24, 2026 | 10:06 PM

RCB Sets Unwanted IPL Record: ಐಪಿಎಲ್ 2026 ರ 34ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್‌ನ ಸಾಯಿ ಸುದರ್ಶನ್ ಆರ್‌ಸಿಬಿ ವಿರುದ್ಧ ಅದ್ಭುತ ಶತಕ ಸಿಡಿಸಿದರು. ಅವರ ಈ ಸ್ಫೋಟಕ ಇನ್ನಿಂಗ್ಸ್ ಆರ್​ಸಿಬಿ ತಂಡಕ್ಕೆ ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಶತಕಗಳನ್ನು ಬಿಟ್ಟುಕೊಟ್ಟ ತಂಡ ಎಂಬ ಅನಗತ್ಯ ದಾಖಲೆ ತಂದೊಡ್ಡಿತು. ಇದು ಸುದರ್ಶನ್ ಅವರ ಮೂರನೇ ಐಪಿಎಲ್ ಶತಕವಾಗಿದ್ದು, ಕಡಿಮೆ ಇನ್ನಿಂಗ್ಸ್‌ಗಳಲ್ಲಿ 2000 ರನ್ ಗಡಿ ತಲುಪಿದ ಸಾಧನೆ ಮಾಡಿದ್ದಾರೆ.

1 / 5
ಐಪಿಎಲ್ 2026 ರ 34 ನೇ ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ಯುವ ಆರಂಭಿಕ ಆಟಗಾರ ಸಾಯಿ ಸುದರ್ಶನ್ ಅದ್ಭುತ ಶತಕ ಬಾರಿಸುವ ಮೂಲಕ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು. ಆದರೆ ಸುದರ್ಶನ್ ಶತಕ ಬಾರಿಸಲು ಅನುವು ಮಾಡಿಕೊಟ್ಟ ಆರ್​​ಸಿಬಿ ಐಪಿಎಲ್‌ನಲ್ಲಿ ಬೇಡದ ದಾಖಲೆಯೊಂದನ್ನು ತನ್ನ ಖಾತೆಗೆ ಹಾಕಿಕೊಂಡಿತು.

2 / 5

ಸಾಯಿ ಸುದರ್ಶನ್ ಆರ್‌ಸಿಬಿ ವಿರುದ್ಧ 58 ಎಸೆತಗಳಲ್ಲಿ 100 ರನ್ ಗಳಿಸಿದರು. ಅವರ ಈ ಶತಕದ ಇನ್ನಿಂಗ್ಸ್​ನಲ್ಲಿ 11 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳು ಸೇರಿದ್ದವು. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳನ್ನು ಬಿಟ್ಟುಕೊಟ್ಟ ತಂಡವೆಂಬ ಅನಗತ್ಯ ದಾಖಲೆಗೆ ಕೊರಳೊಡ್ಡಿದೆ.

3 / 5

ಸಾಯಿ ಸುದರ್ಶನ್ ಅವರ ಶತಕವು ಆರ್‌ಸಿಬಿ ವಿರುದ್ಧ ಆಟಗಾರನೊಬ್ಬ ಕಲೆಹಾಕಿದ 15ನೇ ಶತಕವಾಗಿದೆ. ಈ ಮೂಲಕ ಆರ್​​ಸಿಬಿ, ಅತಿ ಹೆಚ್ಚು ಶತಗಳನ್ನು ಹೊಡಿಸಿಕೊಂಡ ತಂಡಗಳ ಪಟ್ಟಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್, ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ.

4 / 5

ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ತಲಾ 14 ಶತಕಗಳೊಂದಿಗೆ ಎರಡನೇ ಸ್ಥಾನದಲ್ಲಿವೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಲಾ 11 ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿವೆ.

5 / 5

ಸಾಯಿ ಸುದರ್ಶನ್ ಬಗ್ಗೆ ಹೇಳುವುದಾದರೆ, ಇದು ಅವರ ಮೂರನೇ ಐಪಿಎಲ್ ಶತಕವಾಗಿದೆ. ಗಮನಾರ್ಹವಾಗಿ, ಸಾಯಿ ಸುದರ್ಶನ್ 2024 ರಿಂದ ಪ್ರತಿ ಆವೃತ್ತಿಯಲ್ಲೂ ತಲಾ ಒಂದು ಶತಕವನ್ನು ಬಾರಿಸಿದ್ದಾರೆ. ಹಾಗೆಯೇ ಈ ಶತಕದೊಂದಿಗೆ ಅವರು ಐಪಿಎಲ್‌ನಲ್ಲಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 2,000 ರನ್‌ಗಳನ್ನು ತಲುಪಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

Loading...
Unable to load recommendations.
Follow Us