
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸತತವಾಗಿ ಟ್ರೋಫಿ ಗೆದ್ದು, ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ತಂಡವಾಗಿ ಹೊರಹೊಮ್ಮಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಈಗ ಇರುವ ದೊಡ್ಡ ಸವಾಲೆಂದರೆ ಮಿನಿ ಹರಾಜು. ಏಕೆಂದರೆ ಮಿನಿ ಹರಾಜಿಗೂ ಮುನ್ನ ಆರ್ಸಿಬಿ ಕೆಲ ಆಟಗಾರರನ್ನು ಬಿಡುಗಡೆ ಮಾಡಬೇಕಾಗುತ್ತದೆ. (PC: IPL)

ಆದರೆ ಪ್ರಸ್ತುತ ತಂಡದಲ್ಲಿರುವ ಬಹುತೇಕ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅಷ್ಟೇ ಅಲ್ಲದೆ ತನ್ನ ಗೆಲುವಿನ ಕಾಂಬಿನೇಷನ್ ಹಾಗೂ ಕೋರ್ ತಂಡವನ್ನು ಬದಲಿಸಲು ಆರ್ಸಿಬಿ ಮುಂದಾಗುವುದಿಲ್ಲ. ಇದಾಗ್ಯೂ ಹರಾಜಿನಲ್ಲಿ ಕಾಣಿಸಿಕೊಳ್ಳಬೇಕಿದ್ದರೆ ಪರ್ಸ್ ಮೊತ್ತ ಇರಲೇಬೇಕು. ಹೀಗಾಗಿ ಕೆಲವೇ ಕೆಲವು ಆಟಗಾರರನ್ನು ಮಾತ್ರ ಬಿಡುಗಡೆ ಮಾಡಲು ಪ್ಲ್ಯಾನ್ ರೂಪಿಸಲಿದೆ. ಈ ಪ್ಲ್ಯಾನ್ನಂತೆ ಆರ್ಸಿಬಿ ತಂಡದಿಂದ ಹೊರಬೀಳಬಹುದಾದ ಮೂವರು ಆಟಗಾರರ ಪಟ್ಟಿ ಇಲ್ಲಿದೆ... (PC: IPL)

ಯಶ್ ದಯಾಳ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪರ್ಸ್ ಮೊತ್ತ ಹೆಚ್ಚಿಸಲು ಇರುವ ಏಕೈಕ ಆಯ್ಕೆ ಯಶ್ ದಯಾಳ್ ಬಿಡುಗಡೆ. ಈ ಬಾರಿಯ ಐಪಿಎಲ್ನಿಂದ ಹೊರಗುಳಿದಿದ್ದ ದಯಾಳ್ ಮುಂಬರುವ ಸೀಸನ್ನಲ್ಲಿ ಕಾಣಿಸಿಕೊಳ್ಳಬೇಕಿದ್ದರೆ ತನ್ನ ಮೇಲಿರುವ ದೌರ್ಜನ್ಯ ಪ್ರಕರಣದಿಂದ ಖುಲಾಸೆಗೊಳ್ಳಬೇಕು. ಇಲ್ಲದಿದ್ದರೆ ಆರ್ಸಿಬಿ 5 ಕೋಟಿ ರೂ. ಬೆಲೆಯ ಯಶ್ ದಯಾಳ್ ಅವರನ್ನು ಬಿಡುಗಡೆ ಮಾಡುವುದು ಖಚಿತ. (PC: IPL)

ಅಭಿನಂದನ್ ಸಿಂಗ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಅಭಿನಂದನ್ ಸಿಂಗ್ ಈ ಬಾರಿ 3 ಪಂದ್ಯಗಳನ್ನಾಡಿದ್ದಾರೆ. ಈ ಮೂರು ಮ್ಯಾಚ್ಗಳಲ್ಲಿ 58 ಎಸೆತಗಳನ್ನು ಎಸೆದಿರುವ ಅಭಿನಂದನ್ ಪಡೆದಿರುವುದು ಕೇವಲ 3 ವಿಕೆಟ್ ಮಾತ್ರ. ಇದೇ ವೇಳೆ ಅವರು ನೀಡಿರುವುದು ಬರೋಬ್ಬರಿ 122 ರನ್ಗಳು. ಹೀಗಾಗಿ ಅಭಿನಂದನ್ ಸಿಂಗ್ ಅವರನ್ನು ಮುಂದಿನ ಸೀಸನ್ಗಾಗಿ ಆರ್ಸಿಬಿ ಉಳಿಸಿಕೊಳ್ಳುವ ಸಾಧ್ಯತೆಯಿಲ್ಲ. (PC: IPL)

ರಿಚರ್ಡ್ ಗ್ಲೀಸನ್: ಆರ್ಸಿಬಿ ತಂಡದಲ್ಲಿದ್ದ ನುವಾನ್ ತುಷಾರ ಬದಲಿಗೆ ಆಯ್ಕೆಯಾಗಿದ್ದ ರಿಚರ್ಡ್ ಗ್ಲೀಸನ್ ಅವರನ್ನು ಮುಂದಿನ ಸೀಸನ್ಗಾಗಿ ತಂಡದಲ್ಲಿ ಉಳಿಸಿಕೊಳ್ಳುವ ಸಾಧ್ಯತೆಯಿಲ್ಲ. ಬದಲಾಗಿ ನುವಾನ್ ಅವರನ್ನು ರಿಟೈನ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಐಪಿಎಲ್ 2027 ರಲ್ಲಿ ಗ್ಲೀಸನ್ ಆರ್ಸಿಬಿ ತಂಡದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದೇ ಹೇಳಬಹುದು. (PC: IPL)

ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್, ರಿಚರ್ಡ್ ಗ್ಲೀಸನ್. (PC: IPL)
Published On - 10:42 am, Wed, 3 June 26