IPL 2027: RCB ತಂಡದಿಂದ ನಾಲ್ವರು ಔಟ್! ಇಲ್ಲಿದೆ ಸಂಭಾವ್ಯ ಪಟ್ಟಿ

Updated on: Nov 17, 2026 | 8:49 AM

IPL 2027 Retention: 24 ಸದಸ್ಯರುಗಳನ್ನು ಒಳಗೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ 15 ಆಟಗಾರರನ್ನು ಮಾತ್ರ ಕಣಕ್ಕಿಳಿಸಿತ್ತು. ಇನ್ನುಳಿದ 9 ಆಟಗಾರರಲ್ಲಿ ನಾಲ್ಕು ಪ್ಲೇಯರ್ಸ್ ಸಂಭಾವನೆ 30 ಲಕ್ಷ ರೂ. ಮಾತ್ರ. ಹೀಗಾಗಿ ಈ ಯುವ ಆಟಗಾರರನ್ನು ಆರ್​ಸಿಬಿ ಮುಂದಿನ ಸೀಸನ್​ಗಾಗಿ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

1 / 7
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸತತವಾಗಿ ಎರಡು ಬಾರಿ ಟ್ರೋಫಿ ಗೆದ್ದು, ಚಾಂಪಿಯನ್ ತಂಡವಾಗಿ ಹೊರಹೊಮ್ಮಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಈಗ ಇರುವ ದೊಡ್ಡ ಸವಾಲೆಂದರೆ ಮಿನಿ ಹರಾಜು. ಏಕೆಂದರೆ ಹರಾಜಿಗೂ ಮುನ್ನ ಆರ್‌ಸಿಬಿ ಕೆಲವು ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಬೇಕಾಗುತ್ತದೆ. (PC: IPL)

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸತತವಾಗಿ ಎರಡು ಬಾರಿ ಟ್ರೋಫಿ ಗೆದ್ದು, ಚಾಂಪಿಯನ್ ತಂಡವಾಗಿ ಹೊರಹೊಮ್ಮಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಈಗ ಇರುವ ದೊಡ್ಡ ಸವಾಲೆಂದರೆ ಮಿನಿ ಹರಾಜು. ಏಕೆಂದರೆ ಹರಾಜಿಗೂ ಮುನ್ನ ಆರ್‌ಸಿಬಿ ಕೆಲವು ಆಟಗಾರರನ್ನು ತಂಡದಿಂದ ಬಿಡುಗಡೆ ಮಾಡಬೇಕಾಗುತ್ತದೆ. (PC: IPL)

2 / 7

ಆದರೆ ಪ್ರಸ್ತುತ ತಂಡದಲ್ಲಿರುವ ಬಹುತೇಕ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಅಷ್ಟೇ ಅಲ್ಲದೆ, ತನ್ನ ಗೆಲುವಿನ ಕಾಂಬಿನೇಷನ್ ಹಾಗೂ ಪ್ರಮುಖ ತಂಡವನ್ನು ಬದಲಿಸಲು ಆರ್‌ಸಿಬಿ ಮುಂದಾಗುವುದಿಲ್ಲ. ಇದಾಗ್ಯೂ, ಹರಾಜಿನಲ್ಲಿ ಹೊಸ ಆಟಗಾರರನ್ನು ಖರೀದಿಸಬೇಕಿದ್ದರೆ ಪರ್ಸ್‌ನಲ್ಲಿ ಹಣ ಇರಲೇಬೇಕು. ಹೀಗಾಗಿ ಕೆಲವೇ ಕೆಲವು ಆಟಗಾರರನ್ನು ಮಾತ್ರ ಬಿಡುಗಡೆ ಮಾಡಲು ಫ್ರಾಂಚೈಸಿ ಪ್ಲ್ಯಾನ್ ರೂಪಿಸಿದೆ. ಈ ಪ್ಲ್ಯಾನ್‌ನಂತೆ ಆರ್‌ಸಿಬಿ ತಂಡದಿಂದ ಹೊರಬೀಳಬಹುದಾದ ನಾಲ್ವರು ಆಟಗಾರರ ಪಟ್ಟಿ ಇಲ್ಲಿದೆ... (PC: IPL)

3 / 7

ಮಂಗೇಶ್ ಯಾದವ್ (₹5.20 ಕೋಟಿ): ಐಪಿಎಲ್ 2026ರ ಹರಾಜಿನಲ್ಲಿ ₹30 ಲಕ್ಷ ಮೂಲಬೆಲೆ ಹೊಂದಿದ್ದ ಮಧ್ಯಪ್ರದೇಶದ ಈ ಅನ್‌ಕ್ಯಾಪ್ಡ್ ಆಲ್‌ರೌಂಡರ್‌ಗೆ ಆರ್‌ಸಿಬಿ ಬರೋಬ್ಬರಿ ₹5.20 ಕೋಟಿ ನೀಡಿ ಖರೀದಿಸಿತ್ತು. ಆದರೆ ಕಳೆದ ಇಡೀ ಆವೃತ್ತಿಯಲ್ಲಿ ಅವರಿಗೆ ಒಂದೇ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಗಲಿಲ್ಲ. ಬೆಂಚ್ ಕಾಯುತ್ತಿರುವ ಆಟಗಾರನಿಗೆ ಇಷ್ಟೊಂದು ದೊಡ್ಡ ಮೊತ್ತವನ್ನು ವ್ಯಯಿಸುವ ಬದಲು, ಅವರನ್ನು ಬಿಡುಗಡೆ ಮಾಡಿ ಪರ್ಸ್ ಮೊತ್ತ ಹೆಚ್ಚಿಸಿಕೊಳ್ಳಲು ಆರ್‌ಸಿಬಿ ಮುಂದಾಗಲಿದೆ. (PC: IPL)

4 / 7

ಯಶ್ ದಯಾಳ್ (₹5 ಕೋಟಿ): ಐಪಿಎಲ್ 2026 ರಲ್ಲಿ ಆರ್‌ಸಿಬಿ ಫ್ರಾಂಚೈಸಿ ಯಶ್ ದಯಾಳ್ ಅವರನ್ನು ₹5 ಕೋಟಿಗೆ ಉಳಿಸಿಕೊಂಡಿತ್ತು. ಆದರೆ ಮೈದಾನದ ಹೊರಗಿನ ಕಾನೂನು ವಿವಾದಗಳು ಹಾಗೂ ಅಲಭ್ಯತೆಯ ಕಾರಣದಿಂದ ಯಶ್ ದಯಾಳ್ ಕಳೆದ ಸೀಸನ್‌ನಲ್ಲಿ ಒಂದೇ ಒಂದು ಪಂದ್ಯವನ್ನೂ ಆಡಲಿಲ್ಲ. ಮುಂದಿನ ಆವೃತ್ತಿಗೂ ಅವರ ಲಭ್ಯತೆಯ ಬಗ್ಗೆ ಸ್ಪಷ್ಟತೆ ಇಲ್ಲದಿರುವುದರಿಂದ ಅವರನ್ನು ಕೈಬಿಡುವುದು ಅನಿವಾರ್ಯವಾಗಿದೆ. (PC: IPL)

5 / 7

ರಿಚರ್ಡ್ ಗ್ಲೀಸನ್ (₹1.60 ಕೋಟಿ): ಶ್ರೀಲಂಕಾದ ನುವಾನ್ ತುಷಾರ ಬದಲಿಗೆ ಇಂಗ್ಲೆಂಡ್‌ನ 38 ವರ್ಷದ ವೇಗಿ ಗ್ಲೀಸನ್ ಅವರನ್ನು ₹1.60 ಕೋಟಿಗೆ ಬದಲಿ ಆಟಗಾರನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು. ಪ್ಲೇಯಿಂಗ್-11ನಲ್ಲಿ 4 ವಿದೇಶಿ ಆಟಗಾರರ ಸ್ಲಾಟ್‌ಗಳು ಫಿಲ್ ಸಾಲ್ಟ್, ಜೋಶ್ ಹೇಝಲ್​​ವುಡ್, ಟಿಮ್ ಡೇವಿಡ್ ಮತ್ತು ಜೇಕಬ್ ಬೆಥೆಲ್/ಡಫಿ ಪಾಲಾಗುವುದರಿಂದ ಗ್ಲೀಸನ್‌ಗೆ ತಂಡದಲ್ಲಿ ಸ್ಥಾನವಿಲ್ಲ. ಹೀಗಾಗಿ ಇವರನ್ನೂ ಕೂಡ ಬಿಡುಗಡೆ ಮಾಡಲಿದ್ದಾರೆ. (PC: IPL)

6 / 7

ಅಭಿನಂದನ್ ಸಿಂಗ್ (₹30 ಲಕ್ಷ): ₹30 ಲಕ್ಷ ಮೂಲಬೆಲೆಗೆ ತಂಡದಲ್ಲಿದ್ದ ಈ ವೇಗಿ 2026ರಲ್ಲಿ ಆಡಿದ 3 ಪಂದ್ಯಗಳಲ್ಲಿ 12.62ರ ದುಬಾರಿ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟು ಕೇವಲ 3 ವಿಕೆಟ್ ಪಡೆದಿದ್ದರು. ಭುವನೇಶ್ವರ್ ಕುಮಾರ್ ಮತ್ತು ರಾಸಿಖ್ ಸಲಾಮ್ ಅವರಂತಹ ಬಲಿಷ್ಠ ದೇಶೀಯ ವೇಗಿಗಳಿರುವುದರಿಂದ, ಸ್ಕ್ವಾಡ್ ಸ್ಲಾಟ್ ತೆರವುಗೊಳಿಸಲು ಇವರನ್ನು ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ. (PC: IPL)

7 / 7

ರಾಯಲ್ ಚಾಲೆಂಜರ್ಸ್ ಬೆಂಗಳೂರು: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಜೇಕಬ್ ಬೆಥೆಲ್, ಜೋಶ್ ಹೇಝಲ್​ವುಡ್, ಯಶ್ ದಯಾಲ್, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ಯಶ್ ದಯಾಳ್, ರಾಸಿಖ್ ಸಲಾಂ, ವೆಂಕಟೇಶ್ ಅಯ್ಯರ್, ಅಭಿನಂದನ್ ಸಿಂಗ್, ಸುಯಶ್ ಶರ್ಮಾ, ಜೇಕಬ್ ಡಫಿ, ಸಾತ್ವಿಕ್ ದೇಸ್ವಾಲ್, ಮಂಗೇಶ್ ಯಾದವ್, ಜೋರ್ಡನ್ ಕಾಕ್ಸ್, ವಿಕಿ ಓಸ್ತ್ವಾಲ್, ವಿಹಾನ್ ಮಲ್ಹೋತ್ರಾ, ಕಾನಿಷ್ಕ್ ಚೌಹಾನ್, ರಿಚರ್ಡ್ ಗ್ಲೀಸನ್. (PC: IPL)

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us