IPL Auction 2025: ಮೊದಲ ದಿನ ದುಬಾರಿ ಬೆಲೆಗೆ ಹರಾಜಾದ ಟಾಪ್ 5 ಆಟಗಾರರಿವರು
IPL Auction 2025: ಐಪಿಎಲ್ 2025 ಮೆಗಾ ಹರಾಜಿನ ಮೊದಲ ದಿನ, ಅನೇಕ ಆಟಗಾರರ ಮೇಲೆ ಸಾಕಷ್ಟು ಹಣದ ಸುರಿಮಳೆಯಾಯಿತು. ಫ್ರಾಂಚೈಸಿಗಳು ಭಾರತೀಯ ಆಟಗಾರರಿಗೆ ಅದ್ದೂರಿಯಾಗಿ ಖರ್ಚು ಮಾಡಿದರೆ, ಭಾಗಶಃ ತಂಡಗಳು ವಿದೇಶಿ ಹೆಸರುಗಳಿಗೆ ಹೆಚ್ಚಿನ ಹಣ ನೀಡಲು ಹೋಗಿಲ್ಲ. ಉಳಿದಂತೆ ಮೊದಲ ದಿನ ಅಧಿಕ ಬೆಲೆಗೆ ಮಾರಾಟವಾದ ಆಟಗಾರರನ್ನು ನೋಡುವುದಾದರೆ..
1 / 6
ಐಪಿಎಲ್ 2025 ಮೆಗಾ ಹರಾಜಿನ ಮೊದಲ ದಿನ, ಅನೇಕ ಆಟಗಾರರ ಮೇಲೆ ಸಾಕಷ್ಟು ಹಣದ ಸುರಿಮಳೆಯಾಯಿತು. ಫ್ರಾಂಚೈಸಿಗಳು ಭಾರತೀಯ ಆಟಗಾರರಿಗೆ ಅದ್ದೂರಿಯಾಗಿ ಖರ್ಚು ಮಾಡಿದರೆ, ಭಾಗಶಃ ತಂಡಗಳು ವಿದೇಶಿ ಹೆಸರುಗಳಿಗೆ ಹೆಚ್ಚಿನ ಹಣ ನೀಡಲು ಹೋಗಿಲ್ಲ. ಉಳಿದಂತೆ ಮೊದಲ ದಿನ ಅಧಿಕ ಬೆಲೆಗೆ ಮಾರಾಟವಾದ ಆಟಗಾರರನ್ನು ನೋಡುವುದಾದರೆ..
2 / 6
ಮೆಗಾ ಹರಾಜು ಪ್ರಾರಂಭವಾಗುವ ಮೊದಲೇ, ರಿಷಬ್ ಪಂತ್ ಹೆಸರಿನಲ್ಲಿ ದೊಡ್ಡ ಬಿಡ್ಗೆ ಹೋಗಬಹುದು ಎಂದು ಊಹಿಸಲಾಗಿತ್ತು. ಪಂತ್ಗಾಗಿ ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್, ಆರ್‌ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವೆ ತೀವ್ರ ಹೋರಾಟ ನಡೆಯಿತು. ಆದಾಗ್ಯೂ, ಕೊನೆಯಲ್ಲಿ ಲಕ್ನೋ ತಂಡ 27 ಕೋಟಿ ರೂಪಾಯಿ ನೀಡಿ ಖರೀದಿಸಿತು.
3 / 6
ಕಳೆದ ಸೀಸನ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ನಾಯಕ ಶ್ರೇಯಸ್ ಅಯ್ಯರ್ ಖರೀದಿಗಾಗಿ ತೀವ್ರ ಹೋರಾಟ ನಡೆಯಿತು. ಕೆಕೆಆರ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆದ ಪೈಪೋಟಿಯಲ್ಲಿ ಅಂತಿಮವಾಗಿ ಪಂಜಾಬ್ ಕಿಂಗ್ಸ್ 26.75 ಕೋಟಿ ರೂ.ಗಳ ಬಿಡ್‌ನೊಂದಿಗೆ ಅಯ್ಯರ್ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿತು.
4 / 6
ಕೆಕೆಆರ್ ತಂಡಕ್ಕೆ ಶ್ರೇಯಸ್ ಅಯ್ಯರ್ ಅವರನ್ನು ಸೇರಿಸಿಕೊಳ್ಳಲು ಸಾಧ್ಯವಾಗಲಿಲ್ಲ . ಆದರೆ ವೆಂಕಟೇಶ್ ಅಯ್ಯರ್‌ಗಾಗಿ ಉದಾರವಾಗಿ ಹಣವನ್ನು ಖರ್ಚು ಮಾಡಿತು ವೆಂಕಟೇಶ್ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನಡುವೆ ಬಿಡ್ಡಿಂಗ್ ವಾರ್ ನಡೆದಿತ್ತು. ಆದರೆ, ಅಂತಿಮವಾಗಿ ವೆಂಕಟೇಶ್ ಅವರನ್ನು 23.75 ಕೋಟಿ ರೂ.ಗೆ ಖರೀದಿಸುವ ಮೂಲಕ ಕೆಕೆಆರ್ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
5 / 6
ಯುಜ್ವೇಂದ್ರ ಚಹಾಲ್ಗೆ ಟೀಂ ಇಂಡಿಯಾದಲ್ಲಿ ಅವಕಾಶವಿಲ್ಲದಿದ್ದರೂ ಅವರಿಗೆ ಬೇಡಿಕೆ ಕಡಿಮೆಯಾಗಿಲ್ಲ. ಇದಕ್ಕೆ ಪೂರಕವಾಗಿ ಪಂಜಾಬ್ ಕಿಂಗ್ಸ್ 18 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಪಾವತಿಸಿ ಚಹಾಲ್ರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿತು. ಈ ಮೂಲಕ ಚಹಲ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಸ್ಪಿನ್ನರ್ ಎನಿಸಿಕೊಂಡಿದ್ದಾರೆ.
6 / 6
ಈ ವರ್ಷ ಅಂತಾರಾಷ್ಟ್ರೀಯ ಟಿ20 ಪಂದ್ಯಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅರ್ಷದೀಪ್ ಸಿಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಸನ್‌ರೈಸರ್ಸ್ ಹೈದರಾಬಾದ್ ಅರ್ಶ್‌ದೀಪ್‌ಗೆ 15.75 ಕೋಟಿ ರೂ.ಗಳ ಕೊನೆಯ ಬಿಡ್ ಮಾಡಿತು. ಆದರೆ ಪಂಜಾಬ್ ಕಿಂಗ್ಸ್ ರೈಟ್ ಟು ಮ್ಯಾಚ್ ಕಾರ್ಡ್ ಬಳಸಿತು. ಇದರ ನಂತರ, ಹೈದರಾಬಾದ್ ಅರ್ಶ್‌ದೀಪ್‌ಗೆ 18 ಕೋಟಿ ರೂ ಬಿಡ್ ಮಾಡಿತು, ಅದನ್ನು ಸ್ವೀಕರಿಸಿದ ಪಂಜಾಬ್ ಆರ್‌ಟಿಎಂಎಂ ಸಹಾಯದಿಂದ ಅರ್ಶ್‌ದೀಪ್ ಅವರನ್ನು ಮತ್ತೆ ತಂಡದಲ್ಲೇ ಉಳಿಸಿಕೊಂಡಿತು.