IPL Auction 2022: ಮೊದಲ ಸುತ್ತಿನಲ್ಲಿ 10 ಆಟಗಾರರ ಹರಾಜು..!

| Updated By: ಝಾಹಿರ್ ಯೂಸುಫ್

Updated on: Feb 12, 2022 | 12:16 PM

IPL mega auction 2022: ಫೆಬ್ರವರಿ 12 ರಂದು ನಡೆಯಲಿರುವ ಮೆಗಾ ಹರಾಜಿನ ಮೊದಲ ದಿನದಂದು ಈ ಹತ್ತು ಆಟಗಾರರಿಗಾಗಿ ಮೊದಲು ಹರಾಜು ನಡೆಯಲಿದೆ. ಇದಾದ ಬಳಿಕ ಉಳಿದ ಆಟಗಾರರಿಗಾಗಿ ಬಿಡ್ಡಿಂಗ್ ನಡೆಯಲಿದೆ.

1 / 12
ಐಪಿಎಲ್ (Indian Premier League) ಸೀಸನ್​ 15 ಮೆಗಾ ಹರಾಜು ಶುರುವಾಗಿದೆ. ಈ ಹರಾಜು ಪಟ್ಟಿಯಲ್ಲಿ 370 ಭಾರತೀಯ ಆಟಗಾರರಿದ್ದರೆ, 220 ವಿದೇಶಿ ಆಟಗಾರರಿದ್ದಾರೆ. ಹಾಗೆಯೇ ಹರಾಜು ಲೀಸ್ಟ್​ನಲ್ಲಿರುವ 590 ಆಟಗಾರರ ಪೈಕಿ 228 ಅಂತಾರಾಷ್ಟ್ರೀಯ ಆಟಗಾರರು, 355 ಅನ್‌ಕ್ಯಾಪ್ಡ್ ಆಟಗಾರರಿದ್ದಾರೆ. ಇದಲ್ಲದೆ 10 ಆಟಗಾರರನ್ನು ಪ್ರಮುಖ ಆಟಗಾರರೆಂದು ಘೋಷಿಸಲಾಗಿದೆ. ಹೀಗಾಗಿ ಮೆಗಾ ಹರಾಜಿನಲ್ಲಿ ಈ 10 ಆಟಗಾರರ ಬಿಡ್ಡಿಂಗ್ ಮೊದಲು ನಡೆಯಲಿದೆ. ಆ ಆಟಗಾರರ ಪಟ್ಟಿ ಹೀಗಿದೆ.

2 / 12
 ಡೇವಿಡ್ ವಾರ್ನರ್: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಕಳೆದ ಸೀಸನ್​ನಲ್ಲಿ ಎಸ್​ಆರ್​ಹೆಚ್​ ಪರ ಆಡಿದ್ದರು. ಇದೀಗ ಮೆಗಾ ಹರಾಜಿನಲ್ಲಿ ವಾರ್ನರ್ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದಾರೆ.

3 / 12
ರವಿಚಂದ್ರನ್ ಅಶ್ವಿನ್: ಕಳೆದ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದ ಅಶ್ವಿನ್ ಈ ಬಾರಿ 2 ಕೋಟಿ ಮೂಲ ಘೋಷಿಸಿ ಮೆಗಾ ಹರಾಜಿನ ಮರ್ಕ್ಯೂ ಲೀಸ್ಟ್​ನಲ್ಲಿದ್ದಾರೆ.

4 / 12
 ಟ್ರೆಂಟ್ ಬೌಲ್ಟ್: ನ್ಯೂಜಿಲೆಂಡ್​ನ ಎಡಗೈ ವೇಗಿ ಟ್ರೆಂಟ್ ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಈ ಬಾರಿ 2 ಕೋಟಿಯೊಂದಿಗೆ ಮೆಗಾ ಹರಾಜಿನಲ್ಲಿರುವ ಬೌಲ್ಟ್ ಕೂಡ ಪ್ರಮುಖ ಆಟಗಾರರ ಪಟ್ಟಿಯಲ್ಲಿದ್ದಾರೆ.

5 / 12
ಪ್ಯಾಟ್ ಕಮಿನ್ಸ್: ಆಸ್ಟ್ರೇಲಿಯಾದ ಆಲ್​ರೌಂಡರ್ ಪ್ಯಾಟ್ ಕಮಿನ್ಸ್ ಕಳೆದ ಸೀಸನ್​ನಲ್ಲಿ ಕೆಕೆಆರ್ ಪರ ಆಡಿದ್ದರು. ಇದೀಗ ಮೆಗಾ ಹರಾಜಿನಲ್ಲಿ 2 ಕೋಟಿ ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದಾರೆ.

6 / 12
ಕ್ವಿಂಟನ್ ಡಿ ಕಾಕ್: ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದ ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ಡಿಕಾಕ್ ಈ ಬಾರಿ 2 ಕೋಟಿ ಮೂಲ ಬೆಲೆಯೊಂದಿಗೆ ಮಾರ್ಕ್ಯೂ ಲೀಸ್ಟ್​ನಲ್ಲಿ ಸ್ಥಾನ ಪಡೆದಿದ್ದಾರೆ.

7 / 12
ಶಿಖರ್ ಧವನ್

ಶಿಖರ್ ಧವನ್

8 / 12
ಫಾಫ್ ಡು ಪ್ಲೆಸಿಸ್: ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಫಾಫ್ ಡುಪ್ಲೆಸಿಸ್ ಕಳೆದ ಸೀಸನ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಈ ಬಾರಿ 2 ಕೋಟಿ ಮೂಲಬೆಲೆ ಘೋಷಿಸಿರುವ ಡುಪ್ಲೆಸಿಸ್ ಕುಡ ಪ್ರಮುಖ ಆಟಗಾರರ ಪಟ್ಟಿಯಲ್ಲಿದ್ದಾರೆ.

9 / 12
ಶ್ರೇಯಸ್ ಅಯ್ಯರ್: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಾಜಿ ನಾಯಕ ಶ್ರೇಯಸ್ ಅಯ್ಯರ್ ಕೂಡ ಮೆಗಾ ಹರಾಜಿನಲ್ಲಿದ್ದು, ಅಯ್ಯರ್ ಅವರ ಖರೀದಿಗೆ ಈ ಬಾರಿ ಹೆಚ್ಚಿನ ಫ್ರಾಂಚೈಸಿಗಳು ಒಲವು ತೋರಲಿದೆ. ಅದರಂತೆ ಶ್ರೇಯಸ್ ಅಯ್ಯರ್ ಕೂಡ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಮಾರ್ಕ್ಯೂ ಲೀಸ್ಟ್​ನಲ್ಲಿದ್ದಾರೆ.

10 / 12
ಕಗಿಸೊ ರಬಾಡ: ದಕ್ಷಿಣ ಆಫ್ರಿಕಾ ವೇಗಿ ಕಳೆದ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಭಾಗವಾಗಿದ್ದರು. ಈ ಮೂಲ 2 ಕೋಟಿ ರೂ ಮೂಲಬೆಲೆ ಘೋಷಿಸಿರುವ ರಬಾಡ ಕೂಡ ಪ್ರಮುಖ ಆಟಗಾರರ ಪಟ್ಟಿಯಲ್ಲಿದ್ದಾರೆ.

11 / 12
ಮೊಹಮ್ಮದ್ ಶಮಿ: ಕಳೆದ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಮೊಹಮ್ಮದ್ ಶಮಿ ಈ ಬಾರಿ ತಮ್ಮ ಮೂಲ ಬೆಲೆಯನ್ನು 2 ಕೋಟಿ ಎಂದು ಘೋಷಿಸಿದ್ದಾರೆ. ಈ ಮೂಲಕ ಮೊದಲ ಸುತ್ತಿನ ಹರಾಜು ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

12 / 12
ಫೆಬ್ರವರಿ 12 ರಂದು ನಡೆಯಲಿರುವ ಮೆಗಾ ಹರಾಜಿನ ಮೊದಲ ದಿನದಂದು ಈ ಹತ್ತು ಆಟಗಾರರಿಗಾಗಿ ಮೊದಲು ಹರಾಜು ನಡೆಯಲಿದೆ. ಇದಾದ ಬಳಿಕ ಉಳಿದ ಆಟಗಾರರಿಗಾಗಿ ಬಿಡ್ಡಿಂಗ್ ನಡೆಯಲಿದೆ.