- Kannada News Photo gallery Cricket photos India vs west indies virat kohli duck worst cricket record
IND vs WI: ವಿಂಡೀಸ್ ವಿರುದ್ಧ ಕೊಹ್ಲಿ ಶೂನ್ಯ ಸಾಧನೆ! ಸೊನ್ನೆ ಸುತ್ತುವೂದರಲ್ಲೂ ದಾಖಲೆ ಬರೆದ ವಿರಾಟ್
Virat Kohli: ಮೂರನೇ ಏಕದಿನ ಪಂದ್ಯದಲ್ಲಿ ಕೊಹ್ಲಿ ಶೂನ್ಯಕ್ಕೆ ತಮ್ಮ ವಿಕೆಟ್ ಕಳೆದುಕೊಂಡು ಮತ್ತೊಂದು ಮುಜುಗರದ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಮಾಡಿಕೊಂಡರು. ಅವರು ಇದೀಗ ಭಾರತದಲ್ಲಿ ಅತಿ ಹೆಚ್ಚು ಡಕ್‌ಗಳಲ್ಲಿ ಸುರೇಶ್ ರೈನಾ ಮತ್ತು ಹರ್ಭಜನ್ ಸಿಂಗ್ ಅವರನ್ನು ಸರಿಗಟ್ಟಿದ್ದಾರೆ.
Updated on: Feb 11, 2022 | 4:18 PM

ವೆಸ್ಟ್ ಇಂಡೀಸ್ ವಿರುದ್ಧದ ತವರಿನ ಏಕದಿನ ಸರಣಿಯು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಗೆ ನಿರಾಶಾದಾಯಕ ತಿರುವಿನಲ್ಲಿ ಕೊನೆಗೊಂಡಿತು. ಮೊದಲೆರಡು ಏಕದಿನ ಪಂದ್ಯಗಳಲ್ಲಿ ರನ್‌ಗಾಗಿ ಪರದಾಡುತ್ತಿದ್ದ ಅವರು ಕೊನೆಯ ಏಕದಿನ ಪಂದ್ಯದಲ್ಲೂ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಈ ಸರಣಿಯು ಅವರ ವೃತ್ತಿ ಜೀವನದಲ್ಲಿ ಕೆಟ್ಟ ನೆನಪಾಗಿ ಉಳಿಯಲಿದೆ.

ಕೊಹ್ಲಿ ಮೊದಲ ODIನಲ್ಲಿ 8 ರನ್ ಗಳಿಸಿದರೆ, ಎರಡನೇ ಪಂದ್ಯದಲ್ಲಿ 18 ರನ್ ಗಳಿಸಿದರು. ಅಷ್ಟಕ್ಕೂ ಏಕದಿನದಲ್ಲಿ ಡಕ್ ಆಗಿದ್ದ ಕೊಹ್ಲಿ ಇಡೀ ಸರಣಿಯಲ್ಲಿ ಕೇವಲ 26 ರನ್ ಗಳಿಸಿದ್ದಾರೆ. ಸರಣಿಯೊಂದರಲ್ಲಿ ಕನಿಷ್ಠ ರನ್ ಗಳಿಸುವ ವಿಷಯದಲ್ಲಿ ಈ ಸರಣಿಯು ಕೊಹ್ಲಿ ವೃತ್ತಿಜೀವನದಲ್ಲಿ ಮೂರನೇ ಸ್ಥಾನದಲ್ಲಿದೆ.

2012 ರಲ್ಲಿ, ಅವರು ಪಾಕಿಸ್ತಾನ ವಿರುದ್ಧದ 3 ODI ಸರಣಿಯಲ್ಲಿ 13 ರನ್ ಗಳಿಸಿದರು. ಅದೇ ಸಮಯದಲ್ಲಿ, 2014 ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ, ಅವರು ನಾಲ್ಕು ಪಂದ್ಯಗಳ ಏಕದಿನ ಸರಣಿಯಲ್ಲಿ ಕೇವಲ 24 ರನ್ ಗಳಿಸಿದರು. ಕೊಹ್ಲಿಯ ಕಳಪೆ ಫಾರ್ಮ್ ಮುಂದುವರಿದರೆ, ಅವರಿಗೆ ಸಮಸ್ಯೆಗಳು ಹೆಚ್ಚಾಗಬಹುದು.

ಟೀಂ ಇಂಡಿಯಾ
























