IPL 2022 Mega Auctio: ಈ ಐದು ಆಟಗಾರರ ಮೇಲೆ ಕಣ್ಣಿಟ್ಟಿದೆ RCB
IPL 2022 Mega Auction: ಈ ಹರಾಜಿನಲ್ಲಿ ಕೆಲ ಅನ್ಕ್ಯಾಪ್ಡ್ (ರಾಷ್ಟ್ರೀಯ ತಂಡದಲ್ಲಿ ಆಡದ ಆಟಗಾರರು) ಆಟಗಾರರನ್ನು ಖರೀದಿಸಲು ಆರ್ಸಿಬಿ ಕೂಡ ಪ್ಲ್ಯಾನ್ ರೂಪಿಸಿದೆ.
Updated on: Feb 10, 2022 | 9:50 PM

ಐಪಿಎಲ್ ಸೀಸನ್ 15 ಮೆಗಾ ಹರಾಜಿಗಾಗಿ ಎಲ್ಲಾ ತಂಡಗಳು ಭರ್ಜರಿ ಸಿದ್ದತೆಯಲ್ಲಿದೆ. ಈಗಾಗಲೇ 10 ತಂಡಗಳು ಒಟ್ಟು 33 ಆಟಗಾರರನ್ನು ಉಳಿಸಿಕೊಂಡಿದೆ. ಅದರಂತೆ ಉಳಿದ ಆಟಗಾರರನ್ನು ಫೆಬ್ರವರಿ 12 ಮತ್ತು 13 ರಂದು ನಡೆಯಲಿರುವ ಮೆಗಾ ಹರಾಜಿನ ಮೂಲಕ ಖರೀದಿಸಲಿದೆ.

ಈ ಹರಾಜಿನಲ್ಲಿ ಕೆಲ ಅನ್ಕ್ಯಾಪ್ಡ್ (ರಾಷ್ಟ್ರೀಯ ತಂಡದಲ್ಲಿ ಆಡದ ಆಟಗಾರರು) ಆಟಗಾರರನ್ನು ಖರೀದಿಸಲು ಆರ್ಸಿಬಿ ಕೂಡ ಪ್ಲ್ಯಾನ್ ರೂಪಿಸಿದೆ. ಅದರಂತೆ ಆರ್ಸಿಬಿ ಹಿಟ್ ಲೀಸ್ಟ್ನಲ್ಲಿರುವ 5 ಅನ್ಕ್ಯಾಪ್ಡ್ ಆಟಗಾರರು ಯಾರೆಂದು ನೋಡುವುದಾದರೆ....

ರಾಹುಲ್ ತ್ರಿಪಾಠಿ: ಕಳೆದ ಸೀಸನ್ನಲ್ಲಿ ಕೆಕೆಆರ್ ತಂಡದಲ್ಲಿ ಆರಂಭಿಕನಾಗಿ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ತ್ರಿಪಾಠಿಯ ಖರೀದಿಗೆ ಹೆಚ್ಚಿನ ಫ್ರಾಂಚೈಸಿ ಆಸಕ್ತಿ ತೋರಲಿದೆ. ಈ ಪಟ್ಟಿಯಲ್ಲಿ ಆರ್ಸಿಬಿ ಕೂಡ ಮುಂಚೂಣಿಯಲ್ಲಿರಲಿದೆ.

ಯಶ್ ಧುಲ್: ಅಂಡರ್ 19 ಟೀಮ್ ಇಂಡಿಯಾದ ನಾಯಕ ಯಶ್ ಧುಲ್ ಈ ಬಾರಿ ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿಯೇ ಯುವ ಆಟಗಾರನ ಮೇಲೆ ಆರ್ಸಿಬಿ ಕೂಡ ಕಣ್ಣಿಟ್ಟಿದೆ.

ಅವೇಶ್ ಖಾನ್: ಕಳೆದ ಸೀಸನ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದ ವೇಗಿ ಅವೇಶ್ ಖಾನ್ ಅವರ ಖರೀದಿಗೆ ಬಹುತೇಕ ಫ್ರಾಂಚೈಸಿಗಳು ಮುಂದಾಗಲಿದೆ. ಅದರಂತೆ ಆರ್ಸಿಬಿ ಕೂಡ ಅವೇಶ್ ಖಾನ್ ಖರೀದಿಗೆ ಪೈಪೋಟಿ ನಡೆಸಲಿದೆ.

ಡೆವಾಲ್ಡ್ ಬ್ರೆವಿಸ್: ಸೌತ್ ಆಫ್ರಿಕಾದ ಯುವ ಬ್ಯಾಟ್ಸ್ಮನ್ ಡೆವಾಲ್ಡ್ ಬ್ರೆವಿಸ್ ಕೂಡ ಈ ಬಾರಿ ಅಂಡರ್ 19 ವಿಶ್ವಕಪ್ನಲ್ಲಿ ಅಬ್ಬರಿಸಿದ್ದರು. ಕ್ರಿಕೆಟ್ ಅಂಗಳದಲ್ಲಿ ಬೇಬಿ ಎಬಿ ಎಂದೇ ಗುರುತಿಸಿಕೊಂಡಿರುವ ಬ್ರೆವಿಸ್ ಅವರ ಖರೀದಿಗೂ ಆರ್ಸಿಬಿ ಆಸಕ್ತಿ ಹೊಂದಿದೆ.

ಶಾರೂಖ್ ಖಾನ್: ಈ ಬಾರಿಯ ಮೆಗಾ ಹರಾಜಿನಲ್ಲಿ ಶಾರೂಖ್ ಖಾನ್ ಖರೀದಿಗೆ ಎಲ್ಲಾ ಫ್ರಾಂಚೈಸಿಗಳು ಪೈಪೋಟಿ ನಡೆಸಲಿದೆ. ಕಳೆದ ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ದ ಶಾರೂಖ್ ಇದೀಗ ಹೊಸ ಹಿಟ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಮ್ಯಾಚ್ ಫಿನಿಶರ್ ಆಗಿ ಆರ್ಸಿಬಿ ಕೂಡ ಶಾರೂಖ್ ಖಾನ್ ಖರೀದಿಗೆ ಮುಂದಾಗಲಿದೆ.
