IPL 2024: ಬೇರೆ ತಂಡದ ಪರ ಕಣಕ್ಕಿಳಿಯಲಿದ್ದಾರಾ ರೋಹಿತ್ ಶರ್ಮಾ? ಇಲ್ಲಿದೆ ಉತ್ತರ

Edited By:

Updated on: Dec 17, 2023 | 12:08 PM

IPL 2024: ಈ ಬಾರಿಯ ಐಪಿಎಲ್​ನಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ​ ಪರವೇ ಕಣಕ್ಕಿಳಿಯಲಿದ್ದಾರೆ ಎನ್ನಲಾಗುವುದಿಲ್ಲ. ಬದಲಾಗಿ ಮುಂದಿನ ಒಂದು ತಿಂಗಳೊಳಗೆ ರೋಹಿತ್ ಶರ್ಮಾ ಅವರನ್ನು ಬೇರೊಂದು ತಂಡ ಟ್ರೇಡ್ ಮಾಡಿಕೊಳ್ಳಲು ಯಶಸ್ವಿಯಾದರೆ ಐಪಿಎಲ್ 2024 ರಲ್ಲಿ ಹಿಟ್​ಮ್ಯಾನ್ ಹೊಸ ಜೆರ್ಸಿಯಲ್ಲಿ ಕಾಣಿಸಿಕೊಳ್ಳಬಹುದು.

1 / 8
IPL 2024: ಈ ಬಾರಿಯ ಐಪಿಎಲ್​ ಆರಂಭಕ್ಕೂ ಮುನ್ನ ಏನು ಬೇಕಾದರೂ ನಡೆಯಬಹುದು. ಏಕೆಂದರೆ ಕೆಲ ದಿನಗಳ ಹಿಂದೆಯಷ್ಟೇ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಇದೀಗ ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್ ಆಗಿದ್ದಾರೆ. ಇಂತಹದೊಂದು ಅಚ್ಚರಿಯ ಬದಲಾವಣೆ ಇಲ್ಲಿಗೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.

IPL 2024: ಈ ಬಾರಿಯ ಐಪಿಎಲ್​ ಆರಂಭಕ್ಕೂ ಮುನ್ನ ಏನು ಬೇಕಾದರೂ ನಡೆಯಬಹುದು. ಏಕೆಂದರೆ ಕೆಲ ದಿನಗಳ ಹಿಂದೆಯಷ್ಟೇ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಇದೀಗ ಮುಂಬೈ ಇಂಡಿಯನ್ಸ್​ ತಂಡದ ಕ್ಯಾಪ್ಟನ್ ಆಗಿದ್ದಾರೆ. ಇಂತಹದೊಂದು ಅಚ್ಚರಿಯ ಬದಲಾವಣೆ ಇಲ್ಲಿಗೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ.

2 / 8

ಏಕೆಂದರೆ ಹಾರ್ದಿಕ್ ಪಾಂಡ್ಯ ನಾಯಕರಾಗಿ ಆಯ್ಕೆಯಾಗುತ್ತಿದ್ದಂತೆ ಸೈಡ್​ ಲೈನ್​ಗೆ ಸರಿದಿರುವುದು ಮುಂಬೈ ಇಂಡಿಯನ್ಸ್​ ತಂಡದ ಯಶಸ್ವಿ ಕ್ಯಾಪ್ಟನ್ ರೋಹಿತ್ ಶರ್ಮಾ. ಮುಂಬೈ ತಂಡವನ್ನು 6 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದ ಹಿಟ್​ಮ್ಯಾನ್, ಹಾರ್ದಿಕ್ ನಾಯಕತ್ವದಲ್ಲಿ ಆಡಲಿದ್ದಾರಾ ಎಂಬುದೇ ಈಗ ಪ್ರಶ್ನೆ.

3 / 8

ಈ ಪ್ರಶ್ನೆಗೆ ಉತ್ತರ- ಇಲ್ಲ ಎನ್ನುವುದಾದರೆ...ಅತ್ತ ರೋಹಿತ್ ಶರ್ಮಾ ಅವರನ್ನು ಖರೀದಿಸಲು ಕೆಲ ಫ್ರಾಂಚೈಸಿಗಳು ತುದಿಗಾಲಲ್ಲಿ ನಿಂತಿದೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರೋಹಿತ್ ಅವರನ್ನು ಟ್ರೇಡ್​ ಮಾಡಿಕೊಳ್ಳಲು ಮುಂಬೈ ಇಂಡಿಯನ್ಸ್​ ಜೊತೆ ಮಾತುಕತೆ ನಡೆಸಿದೆ. ಆದರೆ ಈ ಮಾತುಕತೆ ಫಲಪ್ರದವಾಗಿಲ್ಲ.

4 / 8

ಇತ್ತ ಇನ್ನೂ ಕೆಲ ಫ್ರಾಂಚೈಸಿಗಳು ರೋಹಿತ್ ಶರ್ಮಾ ಅವರನ್ನು ಟ್ರೇಡ್ ಮಾಡಿಕೊಳ್ಳಲು ಭರ್ಜರಿ ಪ್ಲ್ಯಾನ್ ರೂಪಿಸುತ್ತಿದೆ. ಆದರೆ ಇದೀಗ ಟ್ರೇಡ್ ವಿಂಡೋ ಕ್ಲೋಸ್ ಆಗಿದೆ. ಅಂದರೆ ಐಪಿಎಲ್ ಹರಾಜಿಗೂ ಮುನ್ನ ಆಟಗಾರರನ್ನು ಟ್ರೇಡ್ ಮಾಡಿಕೊಳ್ಳಲು ಡಿಸೆಂಬರ್ 12 ರವರೆಗೆ ಗಡುವು ನೀಡಲಾಗಿತ್ತು.

5 / 8

ಆದರೀಗ ಮಿನಿ ಹರಾಜಿನ ಬಳಿಕ ಮತ್ತೆ ಟ್ರೇಡ್ ವಿಂಡೋ ಓಪನ್ ಆಗಲಿದೆ. ಅಂದರೆ ಡಿಸೆಂಬರ್ 19 ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ಡಿಸೆಂಬರ್ 20 ರಂದು ಟ್ರೇಡ್ ವಿಂಡೋ ಮತ್ತೆ ಓಪನ್ ಆಗಲಿದೆ. ಈ ಮೂಲಕ ಬೇರೊಂದು ತಂಡದ ಆಟಗಾರರನ್ನು ಇನ್ನೊಂದು ತಂಡ ಟ್ರೇಡ್ ಮಾಡಿ ಖರೀದಿಸಬಹುದು.

6 / 8

ಇತ್ತ ಡಿಸೆಂಬರ್ 20 ರಿಂದ ಟ್ರೇಡ್ ವಿಂಡೋ ಓಪನ್ ಆದರೆ ಮುಂದಿನ ಒಂದು ತಿಂಗಳುಗಳ ಕಾಲ ಆಟಗಾರರ ಖರೀದಿಗೆ ಮತ್ತು ಮಾರಾಟಕ್ಕೆ ಅವಕಾಶ ಇರಲಿದೆ. ಹೀಗಾಗಿಯೇ ಈ ಬಾರಿಯ ಐಪಿಎಲ್ ಆರಂಭಕ್ಕೂ ಮುನ್ನ ಏನು ಬೇಕಾದರೂ ನಡೆಯಬಹುದು ಎಂದಿರುವುದು.

7 / 8

ಇದೀಗ ಐಪಿಎಲ್ ಹರಾಜಿನ ಬಳಿಕ ಮತ್ತೆ ಟ್ರೇಡ್ ವಿಂಡೋ ಓಪನ್ ಆಗುತ್ತಿರುವುದರಿಂದ ಕೆಲ ಫ್ರಾಂಚೈಸಿಗಳು ರೋಹಿತ್ ಶರ್ಮಾ ಅವರ ಮೇಲೆ ಕಣ್ಣಿಟ್ಟಿದೆ. ಹೀಗಾಗಿ ಐಪಿಎಲ್ ಹರಾಜಿನ ಬಳಿಕ ಹಿಟ್​ಮ್ಯಾನ್ ಅವರನ್ನು ಟ್ರೇಡ್ ಮಾಡಿಕೊಳ್ಳಲು ಕೆಲ ತಂಡಗಳು ಮುಂದಾಗುವುದು ಖಚಿತ. ಅದರಲ್ಲೂ ಡೆಲ್ಲಿ ಕ್ಯಾಪಿಟಲ್ಸ್ ಮತ್ತೊಮ್ಮೆ ಪ್ರಯತ್ನ ನಡೆಸುವ ಸಾಧ್ಯತೆ ಹೆಚ್ಚಿದೆ.

8 / 8

ಹೀಗಾಗಿ ಈ ಬಾರಿಯ ಐಪಿಎಲ್​ನಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡದ​ ಪರವೇ ಕಣಕ್ಕಿಳಿಯಲಿದ್ದಾರೆ ಎನ್ನಲಾಗುವುದಿಲ್ಲ. ಬದಲಾಗಿ ಮುಂದಿನ ಒಂದು ತಿಂಗಳೊಳಗೆ ರೋಹಿತ್ ಶರ್ಮಾ ಅವರನ್ನು ಬೇರೊಂದು ತಂಡ ಟ್ರೇಡ್ ಮಾಡಿಕೊಳ್ಳಲು ಯಶಸ್ವಿಯಾದರೆ ಐಪಿಎಲ್ 2024 ರಲ್ಲಿ ಹಿಟ್​ಮ್ಯಾನ್ ಹೊಸ ಜೆರ್ಸಿಯಲ್ಲಿ ಕಾಣಿಸಿಕೊಳ್ಳಬಹುದು. ಹೀಗಾಗಿಯೇ ಈ ಬಾರಿಯ ಐಪಿಎಲ್​ನಲ್ಲಿ ಏನು ಬೇಕಾದರೂ ನಡೆಯಬಹುದು.

Published On - 12:08 pm, Sun, 17 December 23

Loading...
Unable to load recommendations.
Follow Us