Irani Cup 2023: 30 ಫೋರ್, 3 ಸಿಕ್ಸ್: ಸ್ಪೋಟಕ ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್
TV9 Web | Updated By: ಝಾಹಿರ್ ಯೂಸುಫ್
Updated on:
Mar 01, 2023 | 11:58 PM
Madhya Pradesh vs Rest of India: ಶೇಷ ಭಾರತ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 2 ರನ್ಗಳಿಸಿ ಮಯಾಂಕ್ ಅಗರ್ವಾಲ್ ಮೊದಲಿಗರಾಗಿ ಔಟಾದರು. ಇದಾಗ್ಯೂ ಮತ್ತೋರ್ವ ಆರಂಭಿಕ ಅಭಿಮನ್ಯು ಈಶ್ವರನ್ ಅತ್ಯುತ್ತಮ ಇನಿಂಗ್ಸ್ ಆಡಿದರು.
1 / 7
ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ನಡೆಯುತ್ತಿರುವ ಇರಾನಿ ಕಪ್ ಪಂದ್ಯದಲ್ಲಿ ಯುವ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಸ್ಪೋಟಕ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಮಧ್ಯಪ್ರದೇಶ್ ಹಾಗೂ ಶೇಷ ಭಾರತ ತಂಡಗಳ ನಡುವಣ ಈ ಪಂದ್ಯದಲ್ಲಿ ಟಾಸ್ ಗೆದ್ದ ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಆಯ್ದುಕೊಂಡರು.
2 / 7
ಅದರಂತೆ ಇನಿಂಗ್ಸ್ ಆರಂಭಿಸಿದ ಶೇಷ ಭಾರತ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 2 ರನ್ಗಳಿಸಿ ಮಯಾಂಕ್ ಅಗರ್ವಾಲ್ ಮೊದಲಿಗರಾಗಿ ಔಟಾದರು. ಇದಾಗ್ಯೂ ಮತ್ತೋರ್ವ ಆರಂಭಿಕ ಅಭಿಮನ್ಯು ಈಶ್ವರನ್ ಅತ್ಯುತ್ತಮ ಇನಿಂಗ್ಸ್ ಆಡಿದರು.
3 / 7
2ನೇ ವಿಕೆಟ್ಗೆ ಯಶಸ್ವಿ ಜೈಸ್ವಾಲ್ ಜೊತೆಗೂಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಅಭಿಮನ್ಯು ತ್ರಿಶತಕದ ಜೊತೆಯಾಟವಾಡಿದರು. ಅಲ್ಲದೆ 154 ರನ್ ಬಾರಿಸಿದ ಅಭಿಮನ್ಯು ಈಶ್ವರನ್ ಔಟಾಗುವ ಮುನ್ನ ದ್ವಿತೀಯ ವಿಕೆಟ್ಗೆ 371 ರನ್ಗಳ ಪಾಲುದಾರಿಕೆ ನೀಡಿದರು.
4 / 7
ಇತ್ತ ಅಭಿಮನ್ಯು ಈಶ್ವರನ್ ಔಟಾಗುತ್ತಿದ್ದಂತೆ ಅತ್ತ ಯಶಸ್ವಿ ಜೈಸ್ವಾಲ್ ಆರ್ಭಟ ಶುರುವಾಯಿತು. ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಜೈಸ್ವಾಲ್ 230 ಎಸೆತಗಳಲ್ಲಿ ದ್ವಿಶತಕ ಪೂರೈಸಿದರು. ಅಲ್ಲದೆ 259 ಎಸೆತಗಳನ್ನು ಎದುರಿಸಿ 30 ಫೋರ್ ಹಾಗೂ 3 ಭರ್ಜರಿ ಸಿಕ್ಸರ್ನೊಂದಿಗೆ 213 ರನ್ ಚಚ್ಚಿ ವಿಕೆಟ್ ಒಪ್ಪಿಸಿದರು.
5 / 7
ಯಶಸ್ವಿ ಜೈಸ್ವಾಲ್ ಅವರ ಈ ಭರ್ಜರಿ ಡಬಲ್ ಸೆಂಚುರಿ ನೆರವಿನಿಂದ ಮೊದಲ ದಿನದಾಟದ ಅಂತ್ಯಕ್ಕೆ ಶೇಷ ಭಾರತ ತಂಡವು 3 ವಿಕೆಟ್ ನಷ್ಟಕ್ಕೆ 381 ರನ್ ಕಲೆಹಾಕಿದೆ.
6 / 7
ಶೇಷ ಭಾರತ ತಂಡ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್ (ನಾಯಕ) , ಅಭಿಮನ್ಯು ಈಶ್ವರನ್ , ಯಶಸ್ವಿ ಜೈಸ್ವಾಲ್ , ಯಶ್ ಧುಲ್ , ಬಾಬಾ ಇಂದ್ರಜಿತ್ , ಮುಖೇಶ್ ಕುಮಾರ್ , ಉಪೇಂದ್ರ ಯಾದವ್ ( ವಿಕೆಟ್ ಕೀಪರ್ ) , ಪುಲ್ಕಿತ್ ನಾರಂಗ್ , ಸೌರಭ್ ಕುಮಾರ್ , ಅತಿತ್ ಶೇತ್ , ನವದೀಪ್ ಸೈನಿ.
7 / 7
ಮಧ್ಯಪ್ರದೇಶ್ ಪ್ಲೇಯಿಂಗ್ 11: ಹಿಮಾಂಶು ಮಂತ್ರಿ (ನಾಯಕ) , ಹರ್ಷ್ ಗಾವ್ಲಿ , ಅಮನ್ ಸೋಲಂಕಿ , ಶುಭಂ ಎಸ್ ಶರ್ಮಾ , ಅರ್ಹಮ್ ಅಕ್ವಿಲ್ , ಯಶ್ ದುಬೆ , ಸರನ್ಶ್ ಜೈನ್ , ಅಂಕಿತ್ ಕುಶ್ವಾ , ಕುಮಾರ್ ಕಾರ್ತಿಕೇಯ , ಅನುಭವ್ ಅಗರ್ವಾಲ್ , ಅವೇಶ್ ಖಾನ್.