Jasprit Bumrah Fitness: ದಿನಕ್ಕೆ 10 ಓವರ್ ಬೌಲಿಂಗ್: ಏಷ್ಯಾಕಪ್ಗೂ ಮುನ್ನ ತಂಡ ಸೇರಲಿದ್ದಾರೆ ಜಸ್ಪ್ರೀತ್ ಬುಮ್ರಾ..!
Jasprit Bumrah Fitness: ಬೆನ್ನು ನೋವಿನಿಂದಾಗಿ ಕಳೆದ ಒಂದು ವರ್ಷದಿಂದ ಟೀಂ ಇಂಡಿಯಾದಿಂದ ಹೊರಗುಳಿದಿರು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತೆ ತಂಡಕ್ಕೆ ಎಂಟ್ರಿಕೊಡುವ ಕಾಲ ಸನಿಹವಾಗಿದೆ.
1 / 7
ಬೆನ್ನು ನೋವಿನಿಂದಾಗಿ ಕಳೆದ ಒಂದು ವರ್ಷದಿಂದ ಟೀಂ ಇಂಡಿಯಾದಿಂದ ಹೊರಗುಳಿದಿರು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮತ್ತೆ ತಂಡಕ್ಕೆ ಎಂಟ್ರಿಕೊಡುವ ಕಾಲ ಸನಿಹವಾಗಿದೆ.
2 / 7
ಸೆಪ್ಟೆಂಬರ್ 2022 ರಿಂದ ತಂಡದಿಂದ ಹೊರಗುಳಿದಿರುವ ಬುಮ್ರಾ, ಕಳೆದ ಬಾರಿಯ ಏಷ್ಯಾಕಪ್, ಟಿ20 ವಿಶ್ವಕಪ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಂತಹ ಪ್ರಮುಖ ಟೂರ್ನಿಗಳಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡಿದ್ದರು.
3 / 7
ಹೀಗಾಗಿ ಕೆಲವು ತಿಂಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬುಮ್ರಾ ಅಂದಿನಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರಿಹ್ಯಾಬ್ಗೆ ಒಳಗಾಗುತ್ತಿದ್ದಾರೆ. ನಿಧಾನವಾಗಿ ಫಿಟ್ನೆಸ್ ಪಡೆಯುತ್ತಿರುವ ಬುಮ್ರಾ ಕೆಲ ದಿನಗಳ ಹಿಂದೆ ಬೌಲಿಂಗ್ ಆರಂಭಿಸಿದ್ದರು. ಇದಕ್ಕೂ ಮೊದಲು ಬುಮ್ರಾ ಪ್ರತಿದಿನ 6 ರಿಂದ 7 ಓವರ್‌ಗಳನ್ನು ಬೌಲ್ ಮಾಡುತ್ತಿದ್ದರು.
4 / 7
ಈಗ ಆಂಗ್ಲ ಪತ್ರಿಕೆ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯಲ್ಲಿ, ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಯಾವುದೇ ಸಮಸ್ಯೆ ಎದುರಿಸುತ್ತಿಲ್ಲ. ಆದ್ದರಿಂದ ಅವರು ಪೂರ್ಣ ವೇಗದಲ್ಲಿ ಬೌಲಿಂಗ್ ಮಾಡಲು ಪ್ರಾರಂಭಿಸಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ ದಿನಕ್ಕೆ 8 ರಿಂದ 10 ಓವರ್‌ಗಳನ್ನು ಬೌಲ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
5 / 7
ಸದ್ಯ ಫಿಟ್ನೇಸ್ನಲ್ಲಿ ಸುಧಾರಿಸುತ್ತಿರುವ ಬುಮ್ರಾ ಏಷ್ಯಾಕಪ್ಗೂ ಮುನ್ನ ಮುಂದಿನ ತಿಂಗಳ ಐರ್ಲೆಂಡ್ ಪ್ರವಾಸದಲ್ಲಿ ತಂಡದಲ್ಲಿ ಕಾಣಿಸಿಕೊಳ್ಳುವುದು ಭಾಗಶಃ ಖಚಿತವಾಗಿದೆ. ಈ ಪ್ರವಾಸದಲ್ಲಿ ಭಾರತ 3 ಪಂದ್ಯಗಳ ಟಿ20 ಸರಣಿಯನ್ನು ಆಡಬೇಕಿದೆ.
6 / 7
ಇಂತಹ ಪರಿಸ್ಥಿತಿಯಲ್ಲಿ, ಆಗಸ್ಟ್ 31 ರಂದು ಪ್ರಾರಂಭವಾಗುವ ಏಷ್ಯಾ ಕಪ್ ಮೊದಲು, ಬುಮ್ರಾ ಪಂದ್ಯದ ಫಿಟ್ನೆಸ್ ಮತ್ತು ಅವರ ಲಯವನ್ನು ಮರಳಿ ಪಡೆಯುವ ಅವಕಾಶವನ್ನು ಪಡೆಯಬಹುದು.
7 / 7
ಬುಮ್ರಾ ಐರ್ಲೆಂಡ್ ಪ್ರವಾಸದಲ್ಲಿ ಆಡಿದರೆ, ಏಷ್ಯಾಕಪ್ ಅನ್ನು ಸಂಪೂರ್ಣ ಫಿಟ್ನೆಸ್‌ನೊಂದಿಗೆ ಆಡಲು ಸಾಧ್ಯವಾದರೆ, ಅದು ಟೀಂ ಇಂಡಿಯಾಕ್ಕೆ ದೊಡ್ಡ ರಿಲೀಫ್ ಆಗಲಿದೆ. ಏಕೆಂದರೆ ಅಕ್ಟೋಬರ್ 5 ರಿಂದ ಭಾರತದಲ್ಲಿ ಪ್ರಾರಂಭವಾಗಲಿರುವ ಏಕದಿನ ವಿಶ್ವಕಪ್ಗೆ ಟೀಂ ಇಂಡಿಯಾಗೆ ಆನೆಬಲ ಬಂದಂತ್ತಾಗಲಿದೆ.
Published On - 11:59 am, Sun, 16 July 23