KL Rahul Career: ಆರಂಭಿಕನಾಗಿ ಜೈಸ್ವಾಲ್ ಎಂಟ್ರಿ; ಅಪಾಯದಲ್ಲಿ ಕನ್ನಡಿಗ ರಾಹುಲ್ ಟೆಸ್ಟ್ ವೃತ್ತಿ ಬದುಕು..!

KL Rahul Career: ಆರಂಭಿಕನಾಗಿ ಶತಕ ಸಿಡಿಸುವುದರೊಂದಿಗೆ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯುವ ಸುಳಿವು ನೀಡಿರುವ ಯಶಸ್ವಿ, ಕನ್ನಡಿಗ ಕೆಎಲ್ ರಾಹುಲ್ ಟೆಸ್ಟ್ ವೃತ್ತಿಬದುಕಿಗೆ ಭಾಗಶಃ ಅಂತ್ಯ ಹಾಡಿದ್ದಾರೆ.

ಪೃಥ್ವಿಶಂಕರ
|

Updated on: Jul 16, 2023 | 9:18 AM

ಸದ್ಯ ಭಾರತ ಕ್ರಿಕೆಟ್ ತಂಡ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಟೀಂ ಇಂಡಿಯಾ ಈ ಪ್ರವಾಸದಲ್ಲಿ ಭರ್ಜರಿ ಆರಂಭ ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ಭಾರತ ಏಕಪಕ್ಷೀಯ ರೀತಿಯಲ್ಲಿ ಆತಿಥೇಯ ತಂಡವನ್ನು ಇನಿಂಗ್ಸ್ ಮತ್ತು 141 ರನ್‌ಗಳಿಂದ ಸೋಲಿಸಿತು. ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ನಿಡಿದ ಯಶಸ್ವಿ ಜೈಸ್ವಾಲ್ ಹಾಗೂ ಆರ್​. ಅಶ್ವಿನ್ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

1 / 9
ಅದರಲ್ಲೂ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ್ದ ಯಶಸ್ವಿ ಜೈಸ್ವಾಲ್, ತನ್ನ ಮೊದಲ ಟೆಸ್ಟ್ ಪಂದ್ಯದಲ್ಲಿಯೇ 171 ರನ್​ಗಳ ದಾಖಲೆಯ ಇನ್ನಿಂಗ್ಸ್ ಆಡಿ, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಆರಂಭಿಕನಾಗಿ ಶತಕ ಸಿಡಿಸುವುದರೊಂದಿಗೆ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಪಡೆಯುವ ಸುಳಿವು ನೀಡಿರುವ ಯಶಸ್ವಿ, ಕನ್ನಡಿಗ ಕೆಎಲ್ ರಾಹುಲ್ ಟೆಸ್ಟ್ ವೃತ್ತಿಬದುಕಿಗೆ ಭಾಗಶಃ ಅಂತ್ಯ ಹಾಡಿದ್ದಾರೆ.

2 / 9
ವಾಸ್ತವವಾಗಿ ಕೆಎಲ್ ರಾಹುಲ್ ಟೆಸ್ಟ್‌ನಲ್ಲಿ ಆರಂಭಿಕರಾಗಿ ಆಡುತ್ತಿದ್ದಾರೆ. ಪ್ರಸ್ತುತ ಇಂಜುರಿಯಿಂದಾಗಿ ರಾಹುಲ್ ತಂಡದಿಂದ ಹೊರಗುಳಿದಿದ್ದಾರೆ. ಈ ಕಾರಣಕ್ಕಾಗಿ, ರೋಹಿತ್‌ ಜೊತೆಗೆ ಬೇರೆ ಬೇರೆ ಆಟಗಾರರು ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ. ಜೈಸ್ವಾಲ್​ಗೂ ಮುನ್ನ ಶುಭ್​ಮನ್ ಗಿಲ್ ಆರಂಭಿಕರಾಗಿ ಕಣಕ್ಕಿಳಿಯುತ್ತಿದ್ದಾರೆ.

3 / 9
ಆದರೀಗ ಆರಂಭಿಕರಾಗಿ ಆಡಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿರುವ ಯಶಸ್ವಿ ಜೈಸ್ವಲ್ ಓಪನರ್ ಸ್ಥಾನಕ್ಕೆ ಸೂಕ್ತರಾಗುವ ಸೂಚನೆ ನೀಡಿದ್ದು, ಇದರೊಂದಿಗೆ ಗಿಲ್​ಗೆ ಮೂರನೇ ಕ್ರಮಾಂಕ ಖಾಯಂ ಆಗುವ ಸಾಧ್ಯತೆಗಳು ಹೆಚ್ಚಿವೆ. ಹಾಗೆಯೇ ಈ ಹಿಂದೆ ಆರಂಭಿಕನಾಗಿ ಕಣಕ್ಕಿಳಿಯುತ್ತಿದ್ದ ರಾಹುಲ್ ಟೆಸ್ಟ್ ವೃತ್ತಿ ಬದುಕು ಅಪಾಯದ ಸ್ಥಿತಿಗೆ ಬಂದು ತಲುಪಿದೆ.

4 / 9
ಕಳೆದ ಐಪಿಎಲ್​ನಲ್ಲಿ ಲಕ್ನೋ ತಂಡದ ನಾಯಕರಾಗಿದ್ದ ರಾಹುಲ್, ಆರ್​ಸಿಬಿ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡು ಲೀಗ್​ನಿಂದ ಹೊರಬಿದ್ದಿದ್ದರು. ಆದರೆ ಇದಕ್ಕೂ ಮುನ್ನ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ರಾಹುಲ್ ಕಳಪೆ ಫಾರ್ಮ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಆಸ್ಟ್ರೇಲಿಯಾ ವಿರುದ್ಧ ಆಡಿದ ಟೆಸ್ಟ್ ಸರಣಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ರಾಹುಲ್‌ಗೆ ಅವಕಾಶ ನೀಡಲಾಯಿತು. ಆದರೆ ರಾಹುಲ್ ಎರಡು ಪಂದ್ಯಗಳಲ್ಲೂ ಅಟ್ಟರ್ ಫ್ಲಾಪ್ ಆಗಿದ್ದರು.

5 / 9
ಆದ್ದರಿಂದ ಎರಡು ಪಂದ್ಯಗಳ ಬಳಿಕ ರಾಹುಲ್​ರನ್ನು ತಂಡದಿಂದ ಕೈಬಿಡಲಾಯಿತು. ನಂತರ ಮುಂದಿನ ಎರಡು ಪಂದ್ಯಗಳಲ್ಲಿ ರಾಹುಲ್ ಬದಲು ಗಿಲ್ ಅವರನ್ನು ಆರಂಭಿಕರಾಗಿ ಕಣಕ್ಕಿಳಿಸಲಾಯಿತು. ನಾಗ್ಪುರ ಮತ್ತು ದೆಹಲಿಯಲ್ಲಿ ನಡೆದ 2 ಟೆಸ್ಟ್ ಪಂದ್ಯಗಳಲ್ಲಿ ರಾಹುಲ್ ಬ್ಯಾಟ್‌ನಿಂದ ಹೊರಬಿದ್ದಿದ್ದು ಕೇವಲ 38 ರನ್ ಮಾತ್ರ.

6 / 9
ರಾಹುಲ್‌ ಅವರಲ್ಲಿ ಸ್ಥಿರತೆಯ ಕೊರತೆಯಿದ್ದು, ಆಯ್ಕೆದಾರರು ಅವರ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಏತನ್ಮಧ್ಯೆ, ಯಶಸ್ವಿ ಆಟದಲ್ಲಿ ಸ್ಥಿರತೆ ಪ್ರದರ್ಶಿಸಿದರೆ, ನಿರಂತರವಾಗಿ ದೊಡ್ಡ ಸ್ಕೋರ್ ಮಾಡುವ ಮೂಲಕ ತಂಡಕ್ಕೆ ಯಶಸ್ಸು ನೀಡಿದರೆ, ರಾಹುಲ್ ಟೆಸ್ಟ್ ವೃತ್ತಿ ಬದುಕು ಅಂತ್ಯವಾಗುವುದು ಖಚಿತ.

7 / 9
ಅದೇನೇ ಇರಲಿ, ಸತತ ಎರಡು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸೋಲನುಭವಿಸಿದ ಟೀಂ ಇಂಡಿಯಾ, ಚಾಂಪಿಯನ್‌ಶಿಪ್‌ನ ಮೂರನೇ ಆವೃತ್ತಿಯನ್ನು ಹಲವು ಪ್ರಮುಖ ಬದಲಾವಣೆಯೊಂದಿಗೆ ಆರಂಭಿಸಿದೆ. ಅದಕ್ಕೆ ತಾಜಾ ಉದಾಹರಣೆಯಾಗಿ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಅವರನ್ನು ತಂಡದಿಂದ ಕೈಬಿಟ್ಟಿರುವುದನ್ನು ನಾವು ಕಾಣಬಹುದಾಗಿದೆ

8 / 9
ಈ ಹಿನ್ನೆಲೆಯಲ್ಲಿ ಆಯ್ಕೆದಾರರು ಮತ್ತೆ ರಾಹುಲ್​ಗೆ ಆದ್ಯತೆ ನೀಡುವ ಸಾಧ್ಯತೆ ಕಡಿಮೆ ಎನಿಸುತ್ತಿದೆ. ಯಶಸ್ವಿ ಆರಂಭದಲ್ಲಿ ವಿಫಲರಾದರೂ, ತಂಡದ ಆಡಳಿತವು ಅವರಿಗೆ ಅವಕಾಶ ನೀಡಬಹುದು. ಏಕೆಂದರೆ ಕೋಚ್ ರಾಹುಲ್ ದ್ರಾವಿಡ್ ಯುವ ಆಟಗಾರರನ್ನು ಬೆಂಬಲಿಸುತ್ತಾರೆ. ಅಲ್ಲದೆ ಜೈಸ್ವಾಲ್ ಎಡಗೈ ಬ್ಯಾಟ್ಸ್‌ಮನ್ ಆಗಿರುವುದರಿಂದ ಆಡಳಿತ ಮಂಡಳಿ ಯಶಸ್ವಿಗೆ ಆದ್ಯತೆ ನೀಡಬಹುದು.

9 / 9
Follow us
ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷನಾಗಿ ಮುಂದುವರಿಸಿದರೆ ಯತ್ನಾಳ್ ನಡೆ ಏನು?

ಬಿಗ್ ಬಾಸ್ ಟ್ರೋಫಿ ಗೆದ್ದ ಬಳಿಕ ಹನುಮಂತ ಮೊದಲ ಪ್ರೆಸ್ ಮೀಟ್; ಇಲ್ಲಿದೆ ಲೈವ್

ಮುಂದಿನ 3-4 ತಿಂಗಳಲ್ಲಿ ಹನುಮಂತನ ಮದುವೆ: ಊರಿನ ಜನರ ಖುಷಿ ನೋಡಿ..

ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್

ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ

ಯಾರೇ ಬಂದರೂ ನನ್ನನ್ನು ತುಳಿಯಲಾಗಲ್ಲ: ಸತೀಶ್ ಜಾರಕಿಹೊಳಿ, ಸಚಿವ

ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ

ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ

ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?

ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್