15.5 ಓವರ್​​ಗಳಲ್ಲಿ ಕೇವಲ 5 ರನ್: ದಾಖಲೆ ಪುಟಕ್ಕೆ ಜೇಡನ್ ಸೀಲ್ಸ್ ಎಂಟ್ರಿ

|

Updated on: Dec 02, 2024 | 9:20 AM

West Indies vs Bangladesh: ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಮಾರಕ ದಾಳಿ ಸಂಘಟಿಸುವ ಮೂಲಕ ವಿಂಡೀಸ್ ವೇಗಿ ಜೇಡನ್ ಸೀಲ್ಸ್ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ್ ತಂಡವು ಪ್ರಥಮ ಇನಿಂಗ್ಸ್​​ನಲ್ಲಿ 164 ರನ್​​​ಗಳಿಗೆ ಆಲೌಟ್ ಆಗಿದೆ.

1 / 5
ಟೆಸ್ಟ್ ಕ್ರಿಕೆಟ್​ನಲ್ಲಿ ಅತ್ಯದ್ಭುತ ದಾಳಿ ಸಂಘಟಿಸಿದ ಬೌಲರ್​ಗಳ ಪಟ್ಟಿಯಲ್ಲಿ ಇನ್ಮುಂದೆ ವೆಸ್ಟ್ ಇಂಡೀಸ್ ವೇಗಿ ಜೇಡನ್ ಸೀಲ್ಸ್ ಹೆಸರು ಕೂಡ ಕಾಣಿಸಿಕೊಳ್ಳಲಿದೆ. ಅದು ಕೂಡ 10 ಮೇಡನ್ ಜೊತೆ ಕೇವಲ 5 ರನ್ ಮಾತ್ರ ಬಿಟ್ಟುಕೊಟ್ಟ ವೇಗಿಯಾಗಿ ಎಂಬುದು ವಿಶೇಷ.

2 / 5
ಜಮೈಕಾದ ಸಬೀನಾ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಜೇಡನ್ ಸೀಲ್ಸ್ ನಂಬಲಾಸಾಧ್ಯವಾದಂತಹ ಬೌಲಿಂಗ್ ಪ್ರದರ್ಶಿಸಿದ್ದಾರೆ. ಈ ಪಂದ್ಯದ ಮೊದಲ ಇನಿಂಗ್ಸ್​​ನಲ್ಲಿ 15.5 ಓವರ್​​ಗಳನ್ನು ಎಸೆದ ಜೇಡನ್ 10 ಮೇಡನ್​​ಗಗಳೊಂದಿಗೆ ನೀಡಿದ್ದು ಕೇವಲ 5 ರನ್ ಮಾತ್ರ. ಅಲ್ಲದೆ 4 ವಿಕೆಟ್​​ಗಳನ್ನು ಸಹ ಕಬಳಿಸಿದರು.

3 / 5
ಇದರೊಂದಿಗೆ ಕಳೆದ 46 ವರ್ಷಗಳಲ್ಲಿ ಟೆಸ್ಟ್ ಕ್ರಿಕೆಟ್​​ನಲ್ಲಿ ಬೆಸ್ಟ್ ಎಕಾನಮಿ ರೇಟ್​್ನಲ್ಲಿ ಬೌಲಿಂಗ್ ಮಾಡಿದ ದಾಖಲೆ ಜೇಡನ್ ಸೀಲ್ಸ್ ಪಾಲಾಯಿತು. ಸೀಲ್ಸ್ ಈ ಇನಿಂಗ್ಸ್​​ನಲ್ಲಿ 15.5 ಓವರ್​​ಗಳಲ್ಲಿ ನೀಡಿದ್ದು ಕೇವಲ 5 ರನ್​ ಮಾತ್ರ. ಅಂದರೆ ಪ್ರತಿ ಓವರ್​ ಸರಾಸರಿ 0.31 ರನ್​​.

4 / 5
ಇದಕ್ಕೂ ಮುನ್ನ ಇಂತಹದೊಂದು ಅಪರೂಪದ ದಾಖಲೆ ಇದ್ದದ್ದು ಟೀಮ್ ಇಂಡಿಯಾ ವೇಗಿ ಉಮೇಶ್ ಯಾದವ್ ಹೆಸರಿನಲ್ಲಿ. 2015 ರಲ್ಲಿ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಉಮೇಶ್ ಯಾದವ್ 21 ಓವರ್​​ಗಳಲ್ಲಿ 9 ರನ್ ನೀಡಿ 3 ವಿಕೆಟ್ ಕಬಳಿಸಿದ್ದರು. ಅಂದು ಟೀಮ್ ಇಂಡಿಯಾ ವೇಗಿ ಪ್ರತಿ ಓವರ್​​ಗೆ ಕೇವಲ 0.41 ಸರಾಸರಿಯಲ್ಲಿ ರನ್ ನೀಡುವ ಮೂಲಕ ದಾಖಲೆ ಬರೆದಿದ್ದರು.

5 / 5
ಇದೀಗ ಪ್ರತಿ ಓವರ್​ಗೆ ಕೇವಲ 0.31 ಸರಾಸರಿಯಲ್ಲಿ ರನ್ ನೀಡುವ ಮೂಲಕ ಜೇಡನ್ ಸೀಲ್ಸ್ ಭರ್ಜರಿ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಕಳೆದ 46 ವರ್ಷಗಳಲ್ಲೇ ಟೆಸ್ಟ್​​ನಲ್ಲಿ ಅತ್ಯದ್ಭುತ ದಾಳಿ ಸಂಘಟಿಸಿದ ಬೌಲರ್ ಎಂಬ ವಿಶೇಷ ದಾಖಲೆಯನ್ನು ವಿಂಡೀಸ್ ವೇಗಿ ತನ್ನದಾಗಿಸಿಕೊಂಡಿದ್ದಾರೆ.