Jhulan Goswami: ವೃತ್ತಿಜೀವನದ ಕೊನೆಯ ಅಂತಾರಾಷ್ಟ್ರೀಯ ಸರಣಿಗೆ ಟೀಂ ಇಂಡಿಯಾ ಲೆಜೆಂಡ್ ತಯಾರಿ..!
TV9 Web | Updated By: ಪೃಥ್ವಿಶಂಕರ
Updated on:
Sep 18, 2022 | 2:55 PM
Jhulan Goswami: ಜೂಲನ್ 2002 ರಲ್ಲಿ ಭಾರತದ ಪರ ಪಾದಾರ್ಪಣೆ ಮಾಡಿದ್ದರು. ಬಂಗಾಳದ ಈ ಲೆಜೆಂಡ್, ಮಹಿಳಾ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆಯನ್ನು ಮಾಡಿದ್ದಾರೆ.
1 / 5
ಈ ಮೂಲಕ ಜೂಲನ್ ತನ್ನ ವೃತ್ತಿಜೀವನದ ಕೊನೆಯ ODI ನಲ್ಲಿ ಕ್ಯಾಥರೀನ್ ಫಿಟ್ಜ್‌ಪ್ಯಾಟ್ರಿಕ್ ಅವರ ದಾಖಲೆಯನ್ನು ಮುರಿದರು. ಈ ಹಿಂದೆ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಆಸ್ಟ್ರೇಲಿಯಾದ ಆಟಗಾರ್ತಿ ಕ್ಯಾಥರೀನ್ ಹೆಸರಿನಲ್ಲಿತ್ತು. ಈಗ ಜೂಲನ್ 24 ವಿಕೆಟ್ ಪಡೆಯುವ ಮೂಲಕ 23 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದ ಕ್ಯಾಥರೀನ್ ದಾಖಲೆಯನ್ನು ನೆಲಸಮ ಮಾಡಿದ್ದಾರೆ.
2 / 5
ಅಚ್ಚರಿಯೆಂಬಂತೆ ಜೂಲನ್ ಗೋಸ್ವಾಮಿ ಇಂಗ್ಲೆಂಡ್ ವಿರುದ್ಧವೇ ತಮ್ಮ ವೃತ್ತಿಜೀವನಕ್ಕೆ ಪದಾರ್ಪಣೆ ಮಾಡಿದ್ದರು. ಮತ್ತು ಪ್ರಾಸಂಗಿಕವಾಗಿ, ಜೂಲನ್ ತನ್ನ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಕೊನೆಯ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಲಿದ್ದಾರೆ. ಜೂಲನ್ ತನ್ನ ಕೊನೆಯ ಪಂದ್ಯವನ್ನು ಸೆಪ್ಟೆಂಬರ್ 24 ರಂದು ಲಾರ್ಡ್ಸ್‌ನಲ್ಲಿ ಆಡಲಿದ್ದಾರೆ.
3 / 5
ಮಿಥಾಲಿ ರಾಜ್ ಇಲ್ಲದೆ ಜೂಲನ್ ಏಕದಿನ ಪಂದ್ಯವನ್ನಾಡುತ್ತಿರುವುದು ಇದೇ ಮೊದಲು. ಇದುವರೆಗೆ ಅವರು ಮಿಥಾಲಿಯೊಂದಿಗೆ ಪ್ರತಿ ಏಕದಿನ ಪಂದ್ಯವನ್ನು ಆಡಿದ್ದಾರೆ. 2002 ರಿಂದ 2022 ರವರೆಗೆ, ಜೂಲನ್ 201 ODI ಪಂದ್ಯಗಳನ್ನು ಆಡಿದ್ದಾರೆ.
4 / 5
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿ ಜೂಲನ್ ಗೋಸ್ವಾಮಿ ಅವರ ವೃತ್ತಿಜೀವನದ ಕೊನೆಯ ಸರಣಿಯಾಗಿದ್ದು, ಈ ಸರಣಿಯ ನಂತರ ಅವರು ವೃತ್ತಿ ಜೀವನದಿಂದ ನಿವೃತ್ತಿಯಾಗಲಿದ್ದಾರೆ. ತನ್ನ 20 ವರ್ಷಗಳ ವೃತ್ತಿ ಜೀವನದಲ್ಲಿ ದೇಶದ ಪರವಾಗಿ ಹಲವು ದೊಡ್ಡ ದಾಖಲೆಗಳನ್ನು ಸೃಷ್ಟಿಸಿರುವ ಜೂಲನ್, ಈ ಸರಣಿಯಲ್ಲೂ ದಾಖಲೆಗಳನ್ನು ಮುರಿಯುವ ಸರದಿಯನ್ನು ಮುಂದುವರೆಸಿದ್ದಾರೆ.
5 / 5
ಜೂಲನ್,
Published On - 2:55 pm, Sun, 18 September 22