IND vs AUS: ಭಾರತ-ಆಸ್ಟ್ರೇಲಿಯಾ ಮುಖಾಮುಖಿಯಲ್ಲಿ ರನ್​ ಸರದಾರ ಯಾರು ಗೊತ್ತೇ?

India vs Australia: ಅಕ್ಟೋಬರ್​ನಲ್ಲಿ ಟಿ20 ವಿಶ್ವಕಪ್ ಶುರುವಾಗಲಿದ್ದು, ಅದಕ್ಕೂ ಮುನ್ನ ಉಭಯ ತಂಡಗಳು ಭರ್ಜರಿ ಪ್ರದರ್ಶನ ನೀಡುವ ಮೂಲಕ ಮೇಲುಗೈ ಸಾಧಿಸುವ ಇರಾದೆಯಲ್ಲಿದೆ.

Sep 18, 2022 | 4:55 PM
TV9kannada Web Team

| Edited By: Zahir PY

Sep 18, 2022 | 4:55 PM

ಸೆಪ್ಟೆಂಬರ್ 20 ರಿಂದ ಭಾರತ-ಆಸ್ಟ್ರೇಲಿಯಾ ನಡುವಣ ಟಿ20 ಸರಣಿ ಶುರುವಾಗಲಿದೆ. 3 ಪಂದ್ಯಗಳ ಈ ಸರಣಿಯು ಉಭಯ ತಂಡಗಳಿಗೂ ಬಹಳ ಮಹತ್ವದ ಸರಣಿಯಾಗಿದೆ. ಏಕೆಂದರೆ ಅಕ್ಟೋಬರ್​ನಲ್ಲಿ ಟಿ20 ವಿಶ್ವಕಪ್ ಶುರುವಾಗಲಿದ್ದು, ಅದಕ್ಕೂ ಮುನ್ನ ಎರಡು ಬಲಿಷ್ಠ ತಂಡಗಳಿಗೂ ಪೂರ್ವಭಾವಿ ಅಭ್ಯಾಸದಂತಿದೆ ಈ ಸರಣಿ.

1 / 7
ಹೀಗಾಗಿ ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಮೇಲುಗೈ ಸಾಧಿಸುವ ಇರಾದೆಯಲ್ಲಿದೆ ಉಭಯ ತಂಡಗಳು. ಇತ್ತ ಎರಡೂ ತಂಡಗಳಲ್ಲೂ ಸ್ಟಾರ್​ ಆಟಗಾರರ ದಂಡನ್ನೇ ಹೊಂದಿದ್ದು, ಹೀಗಾಗಿ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು. ಅದರಲ್ಲೂ ಉಭಯ ತಂಡಗಳ ಮುಖಾಮುಖಿಯಲ್ಲಿ ಅತ್ಯಧಿಕ ರನ್​ ಕಲೆಹಾಕಿದ ಬ್ಯಾಟ್ಸ್​ಮನ್​ಗಳ ಪಟ್ಟಿಯಲ್ಲಿ ಎರಡೂ ತಂಡಗಳ ಆಟಗಾರರಿದ್ದಾರೆ. ಹಾಗಿದ್ರೆ ಭಾರತ-ಆಸೀಸ್​ ಮುಖಾಮುಖಿಯಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ಬ್ಯಾಟ್ಸ್​ಮನ್​ಗಳು ಯಾರೆಲ್ಲಾ ನೋಡೋಣ...

2 / 7
ವಿರಾಟ್ ಕೊಹ್ಲಿ: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಕ್ರಿಕೆಟ್​ನಲ್ಲಿ ಇದುವರೆಗೆ 18 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 7 ಅರ್ಧಶತಕದೊಂದಿಗೆ ಒಟ್ಟು 718 ರನ್​ ಕಲೆಹಾಕಿ, ಇಂಡೋ-ಆಸೀಸ್ ಮುಖಾಮುಖಿಯಲ್ಲಿ ರನ್ ಸರದಾರ ಎನಿಸಿಕೊಂಡಿದ್ದಾರೆ.

3 / 7
ಆರೋನ್ ಫಿಂಚ್: ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್ ಕೂಡ ಟೀಮ್ ಇಂಡಿಯಾ ವಿರುದ್ಧ ರನ್​ಗಳಿಕೆಯ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ಭಾರತದ ವಿರುದ್ಧ ಇದುವರೆಗೆ 15 ಟಿ20 ಇನಿಂಗ್ಸ್ ಆಡಿರುವ ಫಿಂಚ್ ಒಟ್ಟು 440 ರನ್​ ಕಲೆಹಾಕಿದ್ದಾರೆ.

4 / 7
ಗ್ಲೆನ್ ಮ್ಯಾಕ್ಸ್​ವೆಲ್: ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್​ರೌಂಡರ್ ಗ್ಲೆನ್ ಮ್ಯಾಕ್ಸ್​​ವೆಲ್  ಟೀಮ್ ಇಂಡಿಯಾ ವಿರುದ್ಧ 15 ಟಿ20 ಇನಿಂಗ್ಸ್​ಗಳಲ್ಲಿ ಒಟ್ಟು 431 ರನ್​ ಬಾರಿಸಿದ್ದಾರೆ.

5 / 7
ಶಿಖರ್ ಧವನ್: ಈ ಪಟ್ಟಿಯಲ್ಲಿ ನಾಲ್ಕನೇ ಆಟಗಾರ ಶಿಖರ್ ಧವನ್. ಆಸ್ಟ್ರೇಲಿಯಾ ವಿರುದ್ಧ 13 ಟಿ20 ಇನಿಂಗ್ಸ್​ ಆಡಿರುವ ಧವನ್ 347 ರನ್ ಬಾರಿಸಿದ್ದಾರೆ. ಆದರೆ ಈ ಬಾರಿ ಶಿಖರ್ ಧವನ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ ಎಂಬುದು ವಿಶೇಷ.

6 / 7
ರೋಹಿತ್ ಶರ್ಮಾ: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದಾರೆ. ಹಿಟ್​ಮ್ಯಾನ್ ಆಸ್ಟ್ರೇಲಿಯಾ ವಿರುದ್ಧ 16 ಟಿ20 ಇನಿಂಗ್ಸ್​ ಆಡಿದ್ದು, ಈ ವೇಳೆ 318 ರನ್​ ಕಲೆಹಾಕಿ ಈ ಪಟ್ಟಿಯಲ್ಲಿ 5ನೇ ಸ್ಥಾನ ಅಲಂಕರಿಸಿದ್ದಾರೆ.

7 / 7

Follow us on

Most Read Stories

Click on your DTH Provider to Add TV9 Kannada